ಧಾರವಾಡ: ದೆಹಲಿಯಲ್ಲಿರುವ ಇಂಡಿಯಾ ಗೇಟ್ ಮಾದರಿಯಲ್ಲಿ ಧಾರವಾಡದಲ್ಲೊಂದು ಮಿನಿ ಇಂಡಿಯಾ ಗೇಟ್ ನಿರ್ಮಾಣಗೊಳಿಸಲಾಗಿದೆ. ಧಾರವಾಡದ ಕೊಪ್ಪದಕೇರಿಯ ಶಿವಾಲಯದ ಎದುರಿಗೆ ಸಿದ್ಧಗೊಳ್ಳುತ್ತಿದೆ. ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯ ಈರೇಶ ಅಂಚಟಗೇರಿ ಮುತುವರ್ಜಿ ವಹಿಸಿ ನಿರ್ಮಾಣ ಮಾಡಿದ್ದಾರೆ.
ದೆಹಲಿಯ ಇಂಡಿಯಾ ಗೇಟ್ ಮಾದರಿಯಲ್ಲಿ ಮಿನಿ ಇಂಡಿಯಾ ಗೇಟ್ ನಿರ್ಮಾಣವಾಗಿದ್ದು, ದೆಹಲಿ ಇಂಡಿಯಾ ಗೇಟ್ ಒಳಗಡೆ ಅಮರ್ ಜವಾನ್ ಜ್ಯೋತಿಯನ್ನು ಇಡಲಾಗಿದೆ. ಇಲ್ಲಿನ ಮಿನಿ ಇಂಡಿಯಾ ಗೇಟ್ ಒಳಗಡೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಯುದ್ಧ ಸ್ಮಾರಕವಾಗಿರುವ ಇಂಡಿಯಾ ಗೇಟ್‌ನಲ್ಲಿ ಅಮರ್ ಜವಾನ್ ಜ್ಯೋತಿ ಸದಾ ಬೆಳಗುತ್ತಿರುತ್ತದೆ.
ಪಾಲಿಕೆಯ ಒಟ್ಟು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮಿನಿ ಇಂಡಿಯಾ ಗೇಟ್ ನಿರ್ಮಾಣವಾಗಿದೆ. ಸದ್ಯ ಅಂತಿಮ ಹಂತದ ಕೆಲಸಗಳು ಇಲ್ಲಿ ನಡೆಯುತ್ತಿದೆ. ಬಸವಣ್ಣನವರ ಮೂರ್ತಿಯನ್ನು ಹಾಗೇ ಪ್ರತಿಷ್ಠಾಪನೆ ಮಾಡುವುದು ಬೇಡ. ವಿಭಿನ್ನವಾಗಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ದೃಷ್ಟಿಯಿಂದ ದೆಹಲಿ ಮಾದರಿಯಲ್ಲಿ ಇಂಡಿಯಾ ಗೇಟ್ ನಿರ್ಮಿಸಿ ಅಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸುವ ಕೆಲಸ ಮಾಡಲಾಗುತ್ತಿದೆ