ಬೆಂಗಳೂರು: ಕೋಟ್ಯಂತರ ಜನರ ಶ್ರದ್ಧೆ, ಭಕ್ತಿಯ ಸ್ಥಳ ಧರ್ಮಸ್ಥಳ. ಅದಕ್ಕೆ ಘಾಸಿ ಮಾಡುವ ಅಧಿಕಾರವನ್ನು ಯಾರಿಗೂ ಕೊಟ್ಟಿಲ್ಲ ಎಂದು ಬಿಜೆಪಿ ಎಂಎಲ್ಸಿ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು ಇದ್ದಾರೆ ಎಂದು ಆರೋಪಿಸಿದ ಅವರು, ಸದನದಲ್ಲಿ ಧರ್ಮಸ್ಥಳ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದರು.
ಆ ಯೂಟ್ಯೂಬರ್ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಆತ ನ್ಯಾಯಾಲಯಕ್ಕೆ ದಾಖಲೆ ಕೊಡುವುದಿಲ್ಲ. ಆದರೆ ಯೂಟ್ಯೂಬ್ನಲ್ಲಿ ಬೇಕಾದ ಹಾಗೆ ಮಾತಾಡಬಹುದಾ? ಇಷ್ಟಕ್ಕೂ ಆ ಭೀಮ ಯಾರು, ಮಂಪರು ಪರೀಕ್ಷೆ ಮಾಡಿದ್ದೀರಾ? ಆತ ತೋರಿಸಿದ 17 ಸ್ಥಳದಲ್ಲಿ 16 ಸ್ಥಳದಲ್ಲಿ ಏನೂ ಸಿಕ್ಕಿಲ್ಲ. ಸತ್ಯಾಸತ್ಯತೆ ಮನವರಿಕೆಯಾಗದೆ ತನಿಖೆ ಮಾಡುತ್ತಿದ್ದಾರೆ. ಇದರ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರಿದ್ದಾರೆ. ಶ್ರದ್ಧೆಗೆ ಧಕ್ಕೆಯಾದರೆ ಮತಾಂತರದ ಬೆಳೆ ತೆಗೆಯಬಹುದು. ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.
For More Updates Join our WhatsApp Group :