ಮಧ್ಯಪ್ರದೇಶದ: ಮಧ್ಯಪ್ರದೇಶದ ಮೊರೆನಾದ ಮೇಯರ್ ಮುಂದೆ ಸ್ಥಳೀಯ ನಿವಾಸಿಯಿಂದ ಲಂಚ ಕೇಳುತ್ತಿದ್ದ ಕಂದಾಯ ಅಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮೊರೆನಾ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಯಲ್ಲಿ ಒಂದು ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಕಟ್ಟಡಕ್ಕೆ ಲೈಸೆನ್ಸ್ ನೀಡಲು ಪುರಸಭೆ ಮತ್ತು ಕಂದಾಯ ಇಲಾಖೆಯ ನೌಕರರು ಲಂಚ ಸ್ವೀಕರಿಸಿದ್ದಾರೆ ಎಂಬ ಗಂಭೀರ ಆರೋಪ ಮೇಯರ್ ಎದುರಲ್ಲೇ ಸಾಬೀತಾಗಿದೆ. ಪಂಕಜ್ ರಾಥೋಡ್ ಎಂಬ ಯುವಕ ತನ್ನ ಜಾಣತನದಿಂದ ಮೇಯರ್ ಮುಂದೆಯೇ ಕಂದಾಯ ಇಲಾಖೆಯ ಸಿಬ್ಬಂದಿಗೆ ಫೋನ್ ಮಾಡಿ ಅವರ ಕೃತ್ಯಗಳನ್ನು ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾನೆ.
ನೌಕರರೊಂದಿಗಿನ ಈ ಫೋನ್ ಸಂಭಾಷಣೆಯ ಸಮಯದಲ್ಲಿ ಮೇಯರ್ ಮುಂದೆಯೇ ಇಡೀ ಲಂಚ ಹಗರಣ ಬಯಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಆ ಯುವಕನ ಜಾಣತನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಮತ್ತು ಸರ್ಕಾರಿ ವಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಕಂದಾಯ ಇಲಾಖೆಯ ಅಧಿಕಾರಿ ಸೇರಿದಂತೆ ಪುರಸಭೆಯ ನಿರ್ಮಾಣ ಸಂಸ್ಥೆಗೆ ಪರವಾನಗಿ ನೀಡುವಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ತಮ್ಮಿಂದ ಲಂಚ ಕೇಳಿದ್ದಾರೆ ಎಂದು ಪಂಕಜ್ ರಾಥೋಡ್ ಆರೋಪಿಸಿದ್ದರು. ಆದರೆ, ಇದಕ್ಕೆ ಸಾಕ್ಷಿ ಏನಿದೆ? ಎಂದು ಮೇಯರ್ ಕೇಳಿದ್ದರು. ಈ ವೇಳೆ ಮೇಯರ್ ಮುಂದೆಯೇ ಆ ಅಧಿಕಾರಿಯೊಂದಿಗೆ ಮಾತನಾಡಿದ ಪಂಕಜ್ ಯಾರಿಗೆ ಹಣ ನೀಡಬೇಕು, ಹೇಗೆ ನೀಡಬೇಕು, ಎಷ್ಟು ಕೊಡಬೇಕು? ಎಂದು ಆ ಅಧಿಕಾರಿಯಿಂದಲೇ ಮಾಹಿತಿ ಪಡೆದಿದ್ದಾನೆ. ಆ ಅಧಿಕಾರಿ ಹೇಳಿದ ಲೆಕ್ಕ ನೋಡಿ ಮೇಯರ್ ಕೂಡ ಶಾಕ್ ಆಗಿ ಕುಳಿತಿದ್ದಾರೆ.
For More Updates Join our WhatsApp Group :
