Court Case: ದಾಂಪತ್ಯದಲ್ಲಿ ವಿರಸ ಮೂಡಿದ್ದ 15 ಜೋಡಿಗಳನ್ನು ಒಂದು ಮಾಡಿದ ನ್ಯಾಯಾಲಯ….!

ರಾಯಚೂರು: ರಾಜ್ಯಾದ್ಯಂತ ಇಂದು ಮೆಗಾ ಲೋಕ್‌ ಅದಾಲತ್‌ ನಡೆಯುತ್ತಿದೆ. ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ 15 ಜೋಡಿಗಳು ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಡೈವೋರ್ಸ್‌ ಬೇಡವೆಂದು ಮತ್ತೆ ಒಗ್ಗಟ್ಟಾಗಿ ಜೀವನ ಮಾಡುವುದಕ್ಕೆ ಮುಂದಾಗಿದ್ದಾರೆ.

ನ್ಯಾಯಾಲಯ

ಕೌಟುಂಬಿಕ ಜೀವನದಲ್ಲಿ ಹಾಗೂ ದಾಂಪತ್ಯದಲ್ಲಿ ವಿರ ಸಮೂಡಿದ್ದರಿಂದ ವಿವಾಹ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದ 15 ಜೋಡಿಗಳು ಈಗ ಮರಳಿ ಸಂಸಾರ ಜೀವನದತ್ತ ಹೆಜ್ಜೆ ಹಾಕಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಮಾತ್ರ ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಕುಟುಂಬ ನ್ಯಾಯಾಲಯದಲ್ಲಿ ಜರುಗಿದ ಲೋಕ ಅದಾಲತ್ ನಲ್ಲಿ ವಿಶೇಷ ಕಾರ್ಯಕ್ರಮವಾಗಿದೆ. ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಬಂದಿದ್ದ ಹಲವು ಜೋಡಿಗಳನ್ನು ರಾಜೀಸಂದಾನ ಮೂಲಕ ಒಂದುಗೂಡಿ ಜೀವನ ಮಾಡುವುದಕ್ಕೆ ಒಪ್ಪಿಕೊಂಡು ನ್ಯಾಯಾಲಯದಲ್ಲಿಯೇ ಹಾರ ಬದಲಾಯಿಸಿಕೊಂಡರು. 

ಹಲವು ವರ್ಷದಿಂದ ಬೇರ್ಪಟ್ಟು ವಿಚ್ಚೇದನಕ್ಕಾಗಿ ನ್ಯಾಯಾಲಯ ಮೊರೆ ಹೊಕ್ಕ ಹಲವು ಜೋಡಿಗಳಿಗೆ ತಿಳಿ ಹೇಳಿ ಒಗ್ಗೂಡಿಸುವ ಕೆಲಸದಲ್ಲಿ ರಾಯಚೂರು ಜಿಲ್ಲಾ ಕುಟುಂಬ ನ್ಯಾಯಾಲಯ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಮಾರುತಿ ಬಗಾಡೆ, ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ವರ, ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಧಯಾನಂದ ಸೇರಿ ನ್ಯಾಯವಾದಿಗಳು, ದಂಪತಿಗಳು, ಕುಟುಂಬಸ್ಥರು ಹಾಗೂ ನ್ಯಾಯಾಲಯದ ಸಿಬ್ಬಂದಿ ಭಾಗಿಯಾಗಿದ್ದರು.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *