ಚಾಮರಾಜನಗರ : ಗಡಿನಾಡು ಚಾಮರಾಜನಗರದಲ್ಲಿ ವಿಚಿತ್ರ ಪ್ರೇಮ್ ಕಹಾನಿಯೊಂದು ಬೆಳಕಿಗೆ ಬಂದಿದೆ. ನಿನ್ನ ಸ್ನೇಹಿತೆಯ ಸಹೋದರನೆಂದು ವಿದ್ಯಾರ್ಥಿನಿಗೆಗಾಳ ಹಾಕಿದ್ದ ಪಾಗಲ್ ಪ್ರೇಮಿ ಅರೆಸ್ಟ್ ಆಗಿದ್ದಾನೆ. ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಬಿಎನ್ಎನ್ ಕಾಯ್ದೆ U/S 78, 79, 351 (2) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಗುಂಡ್ಲುಪೇಟೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿದ್ಯಾರ್ಥಿನಿ ನೀಡಿದ ದೂರಿನಲ್ಲೇನಿದೆ?
ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿನಿ ಆದ ನಾನು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಓದುತ್ತಿದ್ದು, ನನಗೆ 18 ವರ್ಷ ತುಂಬಿ 19 ನೇ ವರ್ಷ ನಡೆಯುತ್ತಿದೆ. ನಾನು ಗುಂಡ್ಲುಪೇಟೆಯ ಜೆ.ಎಸ್.ಎಸ್. ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ಓದುತ್ತಿದ್ದ ಸಮಯದಲ್ಲಿ ಗುಂಡ್ಲುಪೇಟೆ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿವಾಸಿ ಆಯೂಬ್ ಎಂಬ ಹುಡುಗನ ಪರಿಚಯವಾಯಿತು. ಇವನು ನನ್ನ ಸ್ನೇಹಿತೆಯ ಸ್ನೇಹಿತ ಎಂದು ಪರಿಚಯ ಮಾಡಿಕೊಂಡನು.
ನಂತರ ನಾನು ಪ್ರಥಮ ವರ್ಷದ ಬಿ.ಎ. ಓದಲು ಮೈಸೂರಿನ ವಿದ್ಯಾವರ್ಧಕ ಕಾಲೇಜಿಗೆ ಸೇರಿಕೊಂಡು ಪ್ರತಿದಿನ ನಮ್ಮ ಊರಿನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದು, ನಾನು ಬಸ್ ಹತ್ತಲು ಗುಂಡ್ಲುಪೇಟೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಾಗ, ಅವನು ಸಿಕ್ಕಾಗ ನನ್ನನ್ನು ನನ್ನ ಮುದ್ದು ತಂಗಿ ಎಂದು ಮಾತನಾಡಿಸುತ್ತಿದ್ದನು. ನಾನು ಸಹ ನನ್ನ ಅಣ್ಣ ಎಂದು ಭಾವಿಸಿಕೊಂಡಿದ್ದೆ. ತನ್ನನ್ನು ಹಿಂದೂ ಸಮುದಾಯದವನು ಎಂದು ಹೇಳಿದ್ದನು. ನಾನು ಸಹ ನಂಬಿಕೊಂಡಿದ್ದೆ. ನಂತರ ಈತ ಮುಸ್ಲಿಂ ಎಂದು ಗೊತ್ತಾದ ನಂತರ ನಾನು ಮಾತನಾಡುವುದನ್ನು ನಿಲ್ಲಿಸಿದೆ.
ಹೀಗಿರುವಾ ಆಗಸ್ಟ್ 21 ರಂದು ನಾನು ಎಂದಿನಂತೆ ಮೈಸೂರಿಗೆ ಕಾಲೇಜಿಗೆ ಹೋಗಿ ತರಗತಿ ಮುಗಿಸಿಕೊಂಡು ವಾಪಸ್ಸು ಊರಿಗೆ ಹೋಗಲು ಗುಂಡ್ಲುಪೇಟೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸಂಜೆ ಸುಮಾರು 5 ಗಂಟೆಗೆ ಬಂದೆ. ಆ ಸಮಯದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿದ್ದ ಅಯೂಬ್, ನನ್ನನ್ನು ಹಿಂಬಾಲಿಸಿಕೊಂಡು ಬಂದು ನನ್ನನ್ನು ನೀನು ಏಕೆ ಮಾತನಾಡಿಸುವುದಿಲ್ಲ. ನೀನು ಎಂದರೆ ನನಗೆ ಇಷ್ಟ ಎಂದ. ನಾನು ಇವೆಲ್ಲಾ ಬೇಡ ಎಂದರೂ ಸಹ ಕೇಳದೆ ನನ್ನನ್ನು ಹಿಂಬಾಲಿಸಿ ನನಗೆ ತೊಂದರೆ ಕೊಡುತ್ತಿದ್ದನು.
ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುತ್ತಾನೆ. ಆಗ ಅಲ್ಲೇ ಇದ್ದ ಇಬ್ಬರು ವ್ಯಕ್ತಿಗಳು ಬಂದು ಅವನನ್ನು ನೋಡಿ ಏಕೆ ಏನು ಎಂದು ಕೇಳಿದಾಗ ಅವನು ಹೊರಟು ಹೋದನು. ನಾನು ಈ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನುನ್ನು ಹಿಂಬಾಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಅಯೂಬ್ನ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
For More Updates Join our WhatsApp Group :