ಡಾನಾ ಚಂಡಮಾರುತಕ್ಕೆ ಒಡಿಶಾ, ಪಶ್ಚಿಮ ಬಂಗಾಳ ತತ್ತರ! ಭಾರೀ ಬಿರುಗಾಳಿ, ಮಳೆ ..

ಡಾನಾ ಚಂಡಮಾರುತಕ್ಕೆ ಒಡಿಶಾ, ಪಶ್ಚಿಮ ಬಂಗಾಳ ತತ್ತರ! ಭಾರೀ ಬಿರುಗಾಳಿ, ಮಳೆ ..

ಗಂಟೆಗೆ 110ರಿಂದ 120 ಕಿ.ಮೀ ವೇಗದಲ್ಲಿ ಒಡಿಶಾ ಕರಾವಳಿ ಭಾಗವನ್ನು ಅಪ್ಪಳಿಸಿರುವ ಡಾನಾ ಚಂಡಮಾರುತದ ಒಡಿಶಾ ಕಡಲ ತೀರದಲ್ಲಿ ದೊಡ್ಡ ಹೊಡೆತವನ್ನು ನೀಡಿದ್ದು, ಅಪಾರ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದೆ. ಡಾನಾ ಸೈಕ್ಲೋನ್ ಬಗ್ಗೆ ಎಚ್ಚರಿಕೆ ಕೊಟ್ಟಿದ್ದ ಭಾರತೀಯ ಹವಾಮಾನ ಇಲಾಖೆ (IMD) ಪ್ರವಾಹ ಭೀತಿಯ ಮುನ್ಸೂಚನೆಯನ್ನು ಸಹ ಸೂಚಿಸಿತ್ತು.

ಡಾನಾ ಚಂಡಮಾರುತದ ತೀವ್ರತೆ ಹಲವು ರಾಜ್ಯಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದಿದ್ದ ಐಎಂಡಿ, ಇದೀಗ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳವಿದ್ಯುತ್ ಸ್ಪರ್ಶದಿಂದ ಮೃತ

ಒಡಿಶಾ ಮತ್ತು ಪಶ್ಚಿಮ ಬಂಗಾಳ

ನಿನ್ನೆ ಒಡಿಶಾದ ಪೂರ್ವ ಕರಾವಳಿಯಲ್ಲಿ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಮಳೆ ಮತ್ತು ಬಲವಾದ ಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಮೂಲಸೌಕರ್ಯ ಮತ್ತು ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿಯೂ ಸೈಕ್ಲೋನ್ ಪರಿಣಾಮ ಹೆಚ್ಚಿನ ಹಿನ್ನಲೆ ವಿಮಾನ ಹಾರಾಟ, ರೈಲು ಸಂಚಾರ ಮತ್ತು ಬಸ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಹವಾಮಾನ ವೈಪರೀತ್ಯ ನೋಡಿಕೊಂಡು ಪುನಾರಂಭ ಮಾಡುವುದರ ಬಗ್ಗೆ ಚರ್ಚೆ ನಡೆದಿವೆ ಎನ್ನಲಾಗಿದೆ.

ವಿದ್ಯುತ್ ಸ್ಪರ್ಶದಿಂದ ಮೃತ

ದಕ್ಷಿಣ 24 ಪರಗಣದ ಪಥರ್ಪ್ರತಿಮಾ ಬ್ಲಾಕ್ನಲ್ಲಿದ್ದ ಓರ್ವ ವ್ಯಕ್ತಿ ಚಂಡಮಾರುತದ ಅಲೆಗೆ ಸಿಕ್ಕಿ ಸಾವಿಗೀಡಾದರೆ, ಮತ್ತೋರ್ವ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಚಂಡಮಾರುತದ ಪರಿಣಾಮ ಕೇರಳ ರಾಜ್ಯಕ್ಕೆ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಐಎಂಡಿ, ತ್ರಿಶೂರ್, ಎರ್ನಾಕುಲಂ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ

Leave a Reply

Your email address will not be published. Required fields are marked *