ವಿಧಾನಸಭೆಯಲ್ಲಿ ಸಿಲಿಂಡರ್ ಕೊರತೆ ಗದ್ದಲ: ಆಡಳಿತ-ವಿಪಕ್ಷ ವಾಕ್ಸಮರ

ವಿಧಾನಸಭೆಯಲ್ಲಿ ಸಿಲಿಂಡರ್ ಕೊರತೆ ಗದ್ದಲ: ಆಡಳಿತ-ವಿಪಕ್ಷ ವಾಕ್ಸಮರ

 ಬೆಂಗಳೂರು – ಎಲ್ಪಿಜಿ ಗ್ಯಾಸ್ ಪೂರೈಕೆ ವ್ಯತ್ಯಯ, ಸದನದಲ್ಲಿ ಗದ್ದಲ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಸಿಲಿಂಡರ್​​ ಪೂರೈಕೆ ವ್ಯತ್ಯಯದಿಂದಾಗಿ ರಾಜ್ಯದಲ್ಲಿ ಹೋಟೆಲ್​​ ಉದ್ಯಮಗಳು, ಜನ ಸಾಮಾನ್ಯರು ವಿಪರೀತ ಸಂಕಷ್ಟಕ್ಕೆ ಸಿಲುಕಿರುವ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಶೂನ್ಯವೇಳೆಯಲ್ಲಿ ಸಿಲಿಂಡರ್​ ಕೊರತೆ ಬಗ್ಗೆ ಚರ್ಚೆಗೆ ಸ್ಪೀಕರ್​​ ಅವಕಾಶ ನೀಡಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಮಾತಿಗೆ ಮಾತು ಬೆಳೆದ ಪರಿಣಾಮ ಸದನದ ರಣಾಂಗಣವಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್​​ ಶಾಸಕರು ಪರಸ್ಪರ ದೂಷಿಸಿಕೊಂಡಿದ್ದಾರೆ. ಚರ್ಚೆ ಮಧ್ಯೆ ಪ್ರಧಾನಿ ಮೋದಿ ಅವರ ಹೆಸರು ಪ್ರಸ್ತಾಪವಾಗಿರೋದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದೆ.

ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಮುನಿಯಪ್ಪ ತೈಲ ಕಂಪನಿಯವರ ಜೊತೆ ಮಾತನಾಡಿದ್ದಾರೆ. ಗ್ಯಾಸ್ ಪೂರೈಕೆ ಮಾಡುವುದು ಕೇಂದ್ರ ಸರ್ಕಾರ ಅಲ್ಲವೇ? ಅವರು ಉತ್ತರ ಹೇಳೋಕೆ ಅವಕಾಶ ಕೊಡಿ. ಕೇಂದ್ರ ಸಚಿವರು ಹೇಳಿದ್ದನ್ನು ಅವರು ಪ್ರಸ್ತಾಪ ಮಾಡಿದ್ರು. ನೀವು ಕೇಂದ್ರ ಸರ್ಕಾರ ಅಂದರೆ ಎದ್ದು ನಿಂತಿಕೊಳ್ಳುತ್ತೀರಾ ಎಂದು ಸಿಎಂ ಹೇಳಿದ್ದಾರೆ. ಇದು ಸಿಎಂ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ವಾಣಿಜ್ಯ ಬಳಕೆ ಸಿಲಿಂಡರ್ ಬರಲಿಲ್ಲ ಅಂದ್ರೆ ಚಳವಳಿ ಮಾಡ್ಬೇಕಾಗುತ್ತೆ ಎಂದು ಸಿಎಂ ಹೇಳಿರೋದಾಗಿ ಅಶೋಕ್ ಕಿಡಿ ಕಾರಿದ್ದಾರೆ. ಆದ್ರೆ ಚಳವಳಿ ಮಾಡಿ ಅಂತಾ ಪ್ರಚೋದನೆ ಮಾಡಿಲ್ಲ ಎಂದು ಈ ವೇಳೆ ಸಿಎಂ ಸ್ಪಷ್ಟಪಡಿಸಿದರೂ ಕೇಳದ ಅಶೋಕ್​​, ಚಳವಳಿ ಮಾಡಿ ಎಂದಿದ್ದೀರಿ ಅಂತಾ ಮಾಧ್ಯಮಗಳಲ್ಲಿ ಬಂದಿದೆ. ಸ್ಟ್ರೈಕ್ ಮಾಡೋಕೆ ಬೆಂಬಲ ಇದೆ ಎಂದಿದ್ದೀರಿ ಎಂದಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟಾದ ಪ್ರಸಂಗಕ್ಕೂ ವಿಧಾನಸಭೆ ಸಾಕ್ಷಿಯಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *