ರಾಯಚೂರು: ಕೌಟುಂಬಿಕ ಕಲಹಕ್ಕೆ ಡಿ ಗ್ರೂಪ್ ನೌಕರನೊಬ್ಬ ಪತ್ನಿ ಹಾಗೂ ಅಜ್ಜಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ನಲ್ಲಿ ನಡೆದಿದೆ.
ಜ್ಯೋತಿ (23) ಹಾಗೂ ದ್ಯಾಮವ್ವ (66) ಕೊಲೆಯಾದ ದುರ್ದೈವಿಗಳು.
ಮುದ್ಗಲ್ ಆಸ್ಪತ್ರೆಯ ಡಿ ಗ್ರೂಪ್ ನೌಕರ ದುರಸಪ್ಪ ಈ ಕೃತ್ಯವೆಸಗಿದ್ದಾನೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ ಹಾಗೂ ಅಜ್ಜಿಯನ್ನೇ ಕೊಂದು ಎಸ್ಕೇಪ್ ಆಗಿದ್ದಾನೆ.
ಸರ್ಕಾರಿ ಆಸ್ಪತ್ರೆಯ ಕ್ವಾರ್ಟರ್ಸ್ ನಲ್ಲಿ ಕುಟುಂಬ ವಾಸವಾಗಿತ್ತು. ಈಗ ಅಜ್ಜಿ ಹಾಗೂ ಪತ್ನಿ ಬರ್ಬರವಾಗಿ ಕೊಲೆಯಾಗಿದ್ದು, ಆರೋಪಿ ದುರಸಪ್ಪ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮುದ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.