ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಪಟ್ಟದ ಆಟ ಜೋರಾಗಿದೆ. ಕಾಂಗ್ರೆಸ್ ಮನೆಯೊಳಗಣ ಕ್ರಾಂತಿಯ ಕಿಚ್ಚು ದೆಹಲಿ ಅಂಗಳ ತಲುಪಿದೆ. ಭಾನುವಾರ ಮಧ್ಯಾಹ್ನ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಲ್ಲ, ಹೋಗಲ್ಲ ಎನ್ನುತ್ತಲೇ ರಾಜಧಾನಿಗೆ ದೌಡಾಯಿಸಿದ್ದಾರೆ. ಹೈಕಮಾಂಡ್ ನಾಯಕರ ಭೇಟಿಯಾಗಿ ಭಾನುವಾರವೇ ವಾಪಸ್ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ದೆಹಲಿಯಲ್ಲೇ ವಾಸ್ತವ್ಯ ಹೂಡಿರುವ ಡಿಕೆಶಿ, ಇಂದು ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಒಬ್ಬೊಬ್ಬರೇ ನಾಯಕರು ಒಂದೊಂದು ದಾಳ ಉರುಳಿಸತೊಡಗಿದ್ದಾರೆ.
ಸಿಎಂ ಸಿದ್ದರಾಮಯ್ಯ ನಂತರ ಉತ್ತರಾಧಿರಾರಿ ಯಾರು ಎಂಬ ಚರ್ಚೆ ಗರಿಗೆದರಿರುವ ಸಂದರ್ಭದಲ್ಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್, ದಲಿತ ಸಿಎಂ ದಾಳ ಉರುಳಿಸಿದ್ದಾರೆ. ಕೆ.ಹೆಚ್ ಮುನಿಯಪ್ಪ ಸಮರ್ಥರಿದ್ದಾರೆ. ಅವರು ಅರ್ಹರಿದ್ದಾರೆ. ಮುನಿಯಪ್ಪ ಸಿಎಂ ಆದ್ರೆ ಸ್ವಾಗತಿಸುತ್ತೇನೆ. ನಮ್ಮ ವರ್ಗದವರು ಸಿಎಂ ಆಗುತ್ತಾರೆ ಎಂದು ಖುಷಿ ವಿಚಾರ ಎಂದಿದ್ದಾರೆ.
ಪರಮೇಶ್ವರ್ ಸಿಎಂ ಆಗಲಿ ಎಂದ ಘೋಷಣೆ!
ಈ ಮಧ್ಯೆ ಬೆಂಗಳೂರಿನ ಪರಮೇಶ್ವರ್ ನಿವಾಸದ ಮುಂದೆ ಅಭಿಮಾನಿಗಳು ಮುಂದಿನ ಸಿಎಂ ಘೋಷಣೆ ಕೂಗಿದ್ದಾರೆ. ಮುಂದಿನ ಸಿಎಂ ಪರಮೇಶ್ವರ್ ಅಂತಾ ಘೋಷಣೆ ಕೂಗಿದ್ದು, ಕ್ರಾಂತಿ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.
ಸತೀಶ್ ಜಾರಕಿಹೊಳಿ ಹೇಳಿದ್ದೇನು?
ದಲಿತ ಸಿಎಂ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಅವಕಾಶ ಸಿಕ್ಕರೆ ಒಳ್ಳೆಯದು. ನಾವು ಈಗಾಗಲೇ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಅಂತಿಮವಾಗಿ ಯಾರನ್ನು ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ.
ಕ್ರಾಂತಿ ಕಾದು ನೋಡೋಣ, ಶಿಂಧೆ, ಪವಾರ್ ಯಾರಿಲ್ಲ ಎಂದ ಸತೀಶ್
ನವೆಂಬರ್ ಕ್ರಾಂತಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಇನ್ನೇನು ನವೆಂಬರ್ ಬರುತ್ತಿದೆ. ಕಾದು ನೋಡೋಣ ಎಂದಿದ್ದಾರೆ. ಕಾಂಗ್ರೆಸ್‌ನಲ್ಲಿ ಶಿಂಧೆ, ಪವಾರ್ ಯಾರು ಹುಟ್ಟಿಕೊಳ್ಳಲ್ಲ ಎಂದೂ ಹೇಳಿದ್ದಾರೆ.
For More Updates Join our WhatsApp Group :
