ಬೆಂಗಳೂರು: ಕನ್ನಡ ಚಿತ್ರರಂಗದ ನಟ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ತೂಗುದೀಪ ಅವರು ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಸೆಲ್ನಲ್ಲಿ ಇರಿಸಲಾಗಿದ್ದು, ಅವರಿಗೆ ಕೋರ್ಟ್ ಆದೇಶಿತ ಸವಲತ್ತುಗಳನ್ನು ನೀಡದಿದ್ದಾರೆ ಎಂದು ಆರೋಪಿಸಿ, ದರ್ಶನ್ ಪರ ವಕೀಲರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿಆರ್ಪಿಸಿ 310ರ ಅಡಿ ಅರ್ಜಿ – ಖುದ್ದು ಪರಿಶೀಲನೆಗೆ ಮನವಿ
ದರ್ಶನ್ ಪರ ವಕೀಲ ಅಡ್ವೊಕೇಟ್ ಸುನಿಲ್ ಅವರು ಬೆಂಗಳೂರು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸಿಆರ್ಪಿಸಿ ಸೆಕ್ಷನ್ 310ರ ಅಡಿ ನ್ಯಾಯಮೂರ್ತಿ ಖುದ್ದಾಗಿ ಜೈಲು ಪರಿಶೀಲನೆ ನಡೆಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.“ಕೋರ್ಟ್ ಆದೇಶಗಳನ್ನ ಪಾಲಿಸಿಲ್ಲ. ಪಾಲಿಸಿದಂತೆ ತಪ್ಪು ಮಾಹಿತಿ ನೀಡಲಾಗಿದೆ” ಎಂಬುದು ಅರ್ಜಿ ಮೂಲ ವಾದ.
ಹಿಂದೆ ಜಾಮೀನು, ಈಗ ಪುನಃ ಬಂಧನ
- ದರ್ಶನ್ ಅವರು ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ನಿಯಮ ಉಲ್ಲಂಘನೆ ಆರೋಪಗಳ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಯಿತು.
- ನಂತರ ಜಾಮೀನು ಸಿಕ್ಕಿದ್ದರೂ, ಸುಪ್ರೀಂ ಕೋರ್ಟ್ ಜಾಮೀನನ್ನು ರದ್ದುಪಡಿಸಿ, ಅವರನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿತು.
- ಈ ಬಾರಿ ಜೈಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸುತ್ತಿವೆ.
ಮುಂದಿನ ವಿಚಾರಣೆ ಅಕ್ಟೋಬರ್ 9ಕ್ಕೆ
ಅರ್ಜಿಯ ವಿಚಾರಣೆ ಅಕ್ಟೋಬರ್ 9ಕ್ಕೆ ಮುಂದೂಡಲಾಗಿದೆ. ಈ ನಡುವೆ ಜೈಲು ಅಧಿಕಾರಿಗಳು ತಮ್ಮ ಸ್ಪಷ್ಟನೆ ನೀಡಬೇಕಾಗಿದೆ.
ಈ ಕುರಿತು ನ್ಯಾಯಾಲಯದ ಕ್ರಮ, ರಾಜ್ಯದ ಕಾರಾಗೃಹ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಹೈಪ್ರೊಫೈಲ್ ಕೇಸ್ – ರಾಷ್ಟ್ರದ ಗಮನ ಸೆಳೆದ ಪ್ರಕರಣ
ದರ್ಶನ್ ಅವರ ಪ್ರಕರಣವು ದೇಶದ ಟಾಪ್- ಕೇಸ್ಗಳಲ್ಲಿ ಒಂದಾಗಿ ದಾಖಲಾಗಿದೆ.
ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮೊದಲ ಸ್ಥಾನದಲ್ಲಿದ್ದು, ಬೇಲೂರು ರೈತ ರೇಣುಕಾಸ್ವಾಮಿ ಹತ್ಯೆ ಎರಡನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




