ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎರಡನೇ ಬಾರಿಗೆ ಜೈಲು ಸೇರಿ ಎರಡೂವರೆ ತಿಂಗಳು ಕಳೆದಿದೆ. ಆಗಸ್ಟ್ 14ರಂದು ದರ್ಶನ್ ಜೈಲು ಸೇರಿದರು. ಸದ್ಯ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರು ಎರಡೂವರೆ ತಿಂಗಳಲ್ಲಿ ಬರೋಬ್ಬರಿ 13 ಕೆಜಿ ದೇಹದ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ.
ದರ್ಶನ್ ಅವರು ತಮಗೆ ಬೆಡ್ಶೀಟ್ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ತಿಂಗಳಿಗೆ ಒಮ್ಮೆ ಬೆಡ್ಶೀಟ್ ಹಾಗೂ ಬಟ್ಟೆ ನೀಡಲು ಕೋರ್ಟ್ ಅನುಮತಿ ಕೊಟ್ಟಿದೆ. ದರ್ಶನ್ ಈಗ ಹೇಗೆ ವಾಸ ಮಾಡುತ್ತಿದ್ದಾರೆ, ಜೈಲಿನಲ್ಲಿ ಅವರ ಪರಿಸ್ಥಿತಿ ಹೇಗಿದೆ ಎಂಬುದರ ಮಾಹಿತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.
ದರ್ಶನ್ ಅವರು ಸದ್ಯ ಕ್ವಾರಂಟೈನ್ ಸೆಲ್‌ನಲ್ಲಿ ಇದ್ದಾರೆ. ಸದ್ಯ ದರ್ಶನ್ ಜೊತೆ ಇದೇ ಪ್ರಕರಣದ ಆರೋಪಿಗಳಾದ ಅನು, ಜಗದೀಶ್, ಪ್ರದೋಶ್, ನಾಗರಾಜ್ ಹಾಗೂ ಲಕ್ಷ್ಮಣ್ ಇದ್ದಾರೆ. ಈ ಸೆಲ್‌ನಲ್ಲಿ ಯಾವುದೇ ಟಿವಿ ಇಲ್ಲ. ಸೆಲ್ಗೆ ಭದ್ರತಾ ದೃಷ್ಟಿಯಿಂದ ಎರಡು ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
For More Updates Join our WhatsApp Group :
