ಬೆಂಗಳೂರು : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆ ಮೂಲಕ ಮತ್ತೆ ಕೊಲೆ ಆರೋಪಿಗಳಿಗೆ ಜೈಲೇ ಗತಿ ಎನ್ನುವಂತಾಗಿದೆ. ಹಾಗಾದರೆ ದರ್ಶನ್ಗೆ ಮುಂದಿರುವ ಆಯ್ಕೆಗಳೇನು, ಪೊಲೀಸರ ಮುಂದಿನ ಕಾನೂನು ಕ್ರಮಗಳು.
ಮೊದಲಿಗೆ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಸುಪ್ರೀಂಕೋರ್ಟ್ನ ಜಾಮೀನು ರದ್ದು ಆದೇಶದ ಪ್ರತಿ ಪಡೆಯಲಿದ್ದಾರೆ. ಆ ಬಳಿಕ ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನು ರದ್ದು ಆದೇಶದ ಪ್ರತಿ ಸಲ್ಲಿಕೆ ಮಾಡಿ ಅರೆಸ್ಟ್ ವಾರೆಂಟ್ ಪಡೆಯಲಿದ್ದಾರೆ.
ಕೋರ್ಟ್ನಿಂದ ಅರೆಸ್ಟ್ ವಾರೆಂಟ್ ಪಡೆದು ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಲಿದ್ದಾರೆ. ಅದಕ್ಕೂ ಮೊದಲೇ ಆರೋಪಿಗಳು ಸರೆಂಡರ್ ಆದರೆ ಅರೆಸ್ಟ್ ವಾರೆಂಟ್ ಪಡೆಯುವ ಅವಶ್ಯಕತೆಯಿಲ್ಲ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಆಯಾ ಜೈಲುಗಳಿಗೆ ಆರೋಪಿಗಳನ್ನು ಪೊಲೀಸರು ವರ್ಗಾಯಿಸಲಿದ್ದಾರೆ.

ದರ್ಶನ್ ಮುಂದೆ ಸದ್ಯಕ್ಕಿಲ್ಲ ಬೇರೆ ಆಯ್ಕೆ
ದರ್ಶನ್ ಮುಂದೆ ಸದ್ಯಕ್ಕಿಲ್ಲ ಬೇರೆ ಆಯ್ಕೆಗಳಲಿಲ್ಲ. ಶೀಘ್ರದಲ್ಲೇ ಸೆಷನ್ಸ್ ಕೋರ್ಟ್ಗೆ ಶರಣಾಗಬೇಕಿದೆ. ಇಂದು ತೀರ್ಪಿನ ಪ್ರತಿ ಸಿಕ್ಕ ಬಳಿಕ ಈ ಬಗ್ಗೆ ಶರಣಾಗುವುದು ಯಾವಾಗ ಎಂದು ಸಂಜೆಯೊಳಗೆ ತೀರ್ಮಾನ ಸಾಧ್ಯತೆ ಇದೆ. ಸದ್ಯ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಗಾಗಿ ವಕೀಲರು ಕಾಯುತ್ತಿದ್ದಾರೆ.
ಮತ್ತೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಶಿಫ್ಟ್ ಮಾಡುವ ಸಾಧ್ಯತೆ
ಇನ್ನು ದರ್ಶನ್ ಮತ್ತೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಈ ಹಿಂದೆ 63 ದಿನಗಳ ಕಾಲ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಅಕ್ಟೋಬರ್ 30ಕ್ಕೆ ಅಲ್ಲಿಂದ ರಿಲೀಸ್ ಆಗಿದ್ದರು. ಇದೀಗ ಮತ್ತೆ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಮಾಡುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಜೈಲಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾಗ ತೀವ್ರ ಬೆನ್ನುನೋವಿನಿಂದ ದರ್ಶನ್ ಬಳಲಿದ್ದರು. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಸಹಿತ ಮಾಡಿಸಲಾಗಿತ್ತು. ಬಳಿಕ ತುರ್ತು ಸರ್ಜರಿಗೆ ಸೂಚಿಸಲಾಗಿತ್ತು. ಅದೇ ಆಧಾರದ ಮೇಲೆ ದರ್ಶನ್ ಜಾಮೀನು ಪಡೆದಿದ್ದರು.
For More Updates Join our WhatsApp Group :




