ಪ್ರತಿಯೊಬ್ಬ ತಂದೆಗೂ ಮಗಳೆಂದರೆ ಜೀವ, ಹೀಗಾಗಿ ಮಗಳ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಏಕೈಕ ಜೀವ ಅಪ್ಪ. ತನ್ನ ಮಗಳಿಗೆ ಕಷ್ಟ ಎಂದರೆ ಮಿಡಿಯುವ ಹೃದಯ ತಂದೆಯದ್ದು. ಆದರೆ ಇಲ್ಲೊಂದು ಹೃದಯವಿದ್ರಾವಕ ವಿಡಿಯೋ ವೈರಲ್ ಆಗಿದ್ದು, ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳನ್ನು ತಮ್ಮ ಪ್ರಾಣವನ್ನು ಲೆಕ್ಕಿಸದೇ ತಂದೆಯೊಬ್ಬನು ರಕ್ಷಿಸಿದ್ದು, ಮಗಳ ಪಾಲಿಗೆ ತಂದೆಯೇ ಸೂಪರ್ ಹೀರೋ ಆಗಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.

ಅಪ್ಪ ಅಂದ್ರೆ ಆಕಾಶ, ತನ್ನ ಮಕ್ಕಳ ಸಂತೋಷಕ್ಕಾಗಿ ತನಗೆ ಎಷ್ಟೇ ಕಷ್ಟ ಬಂದರೂ ಸರಿಯೇ, ಎಲ್ಲವನ್ನು ಸಹಿಸಿಕೊಳ್ಳುವ ಜೀವವೊಂದಿದ್ದರೆ ಅದು ತಂದೆ ಮಾತ್ರ. ಒಂದು ವೇಳೆ ಹೆಣ್ಣು ಮಗಳಿದ್ದರೆ ತಂದೆಗೆ ಆಕೆಯೇ ತನ್ನ ಪ್ರಪಂಚವಾಗಿರುತ್ತಾಳೆ. ತಂದೆಯಾದವನು ತನ್ನ ಮಗ ಹಾಗೂ ಮಗಳಿಗಾಗಿ ತನ್ನ ಪ್ರಾಣ ಬೇಕಾದ್ರೂ ಕೊಡಲು ಸಿದ್ಧವಿರುತ್ತಾನೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಂತಿದೆ. ಚಲಿಸುವ ರೈಲಿನ ಕೆಳಗೆ ಬಿದ್ದ ತನ್ನ ಮಗಳನ್ನು ತಂದೆಯೊಬ್ಬನು ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ತನ್ನ ಪ್ರಾಣವನ್ನು ಲೆಕ್ಕಿಸದೇ ಮಗಳನ್ನು ರಕ್ಷಿಸಿದ ಈ ವ್ಯಕ್ತಿಯ ಧೈರ್ಯವಂತಿಕೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.