“ಅಂಡರ್ವಲ್ಡ್ ದಿ ರಿಯಲ್ ಡಾನ್” ಎಂದು ಬರೆಯಲಾಗಿದೆ; ಭಜರಂಗದಳ ಆಕ್ರೋಶ.
ಚಿಕ್ಕಮಗಳೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಬರೆದಿರುವ ಖಾಸಗಿ ಬಸ್ವೊಮದು ಚಿಕ್ಕಮಗಳೂರು ನಗರದಲ್ಲಿ ಕಂಡುಬಂದಿದೆ. ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಕರೆತಂದಿದ್ದ ಖಾಸಗಿ ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರೆಸಲಾಗಿದೆ.
ಸದ್ಯ ಇದು ಭಜರಂಗದಳ ಕಾರ್ಯಕರ್ತರು ಹಾಗೂ ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದ್ದು, ಬಸ್ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಗೆ ಪೊಲೀಸರು ಬಸ್ ಕರೆತಂದಿದ್ದಾರೆ.
For More Updates Join our WhatsApp Group :



