ಬೆಂಗಳೂರು : ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರು ನಗರದ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ರಿಜ್ವಾನ್ ಅರ್ಷದ್, ಸಿಎಲ್ಪಿ ಸಭೆಯ ನಂತರ ಡಿಸಿಎಂ ಸಭೆ ನಡೆಸಿದರು, ಬಿಬಿಎಂಪಿ ಚುನಾವಣೆಗಳು ಹತ್ತಿರದಲ್ಲೇ ಇವೆ, ಅದಕ್ಕಾಗಿ ಪಕ್ಷದ ಸಂಘಟನೆ, ಬಲವರ್ಧನೆ ಬಗ್ಗೆ ಅವರು ಚರ್ಚಿಸಿದರು ಮತ್ತು ಶಾಸಕರ ಅಭಿಪ್ರಾಯಗಳನ್ನೂ ಕೇಳಿದರು ಎಂದು ಹೇಳಿದರು. ಅನುದಾನ ಬಿಡುಗಡೆಯ ಬಗ್ಗೆ ಶಿವಕುಮಾರ್ ಏನನ್ನೂ ಚರ್ಚಿಸಲಿಲ್ಲ ಎಂದು ರಿಜ್ವಾನ್ ಹೇಳಿದರು.
For More Updates Join our WhatsApp Group :
