ಬೆಂಗಳೂರು: ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದು ಬೆಂಗಳೂರಿನ ನಿವಾಸಿಗಳಿಗೆಲ್ಲ ಗೊತ್ತಿರುವ ಸಂಗತಿ. ಆದರೆ ಕಾಮಗಾರಿ ವೀಕ್ಷಿಸುವುದು ಇದ್ಯಾವ ವಿಧಾನ ಮಾರಾಯ್ರೇ? ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇವತ್ತು ಹೆಬ್ಬಾಳ ಮೇಲ್ಸೇತುವೆ ಕಾಮಗಾರಿಯನ್ನು ಹೀಗೆ ವೀಕ್ಷಿಸಿದರು.
ಹೆಲ್ಮೆಟ್ ಧಾರಿಯಾಗಿ ಸ್ಕೂಟರೊಂದನ್ನು ಹತ್ತಿ ಅವರು ಕಾಮಗಾರಿ ನಡೆಯುತ್ತಿರುವ ಸೇತುವೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋದರು. ಅವರೇನೋ ವಾಹನ ಹತ್ತಿ ಹೊರಟರು, ಅದರೆ ಭದ್ರತಾ ಸಿಬ್ಬಂದಿ, ಪೊಲೀಸ್ ಮತ್ತು ಕೆಮೆರಾಮನ್ಗಳ ಅವಸ್ಥೆ ನೋಡಿ! ಡಿಸಿಎಂ ವಾಹನದ ಹಿಂದೆ ಬಿದ್ನೋ ಸತ್ನೋ ಅಂತ ಓಡುತ್ತಿದ್ದಾರೆ. ಗಾತ್ರದಲ್ಲಿ ಧಡೂತಿ ಅನಿಸುವ ಪೊಲೀಸರು ಸ್ವಲ್ಪಮಾತ್ರ ಓಡಿ ಏದುಸಿರು ಬಿಡುತ್ತಾ ನಿಂತುಬಿಡುತ್ತಾರೆ.
For More Updates Join our WhatsApp Group :