ದೆಹಲಿ || ಪ್ರಧಾನಿ ನರೇಂದ್ರ ಮೋದಿ ಕೆಣಕಿದ ಅರವಿಂದ್ ಕೇಜ್ರಿವಾಲ್!

ದೆಹಲಿ || Delhi Election 2025: ಸೌಲಭ್ಯ ನಿಲ್ಲಲಿದೆ ಎಚ್ಚರಿಕೆ ಎಂದ ಎಎಪಿ!

ಪ್ರಧಾನಿ ನರೇಂದ್ರ ಮೋದಿಗೆ ಎಎಪಿ ಸಂಸ್ಥಾಪಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ಪತ್ರ ಬರೆದಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ಈ ರೀತಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಜ್ರಿವಾಲ್ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ಕಳೆದ ಎರಡು ವಾರದ ಅವಧಿಯಲ್ಲಿ ಕೇಜ್ರಿವಾಲ್ ಸರಣಿ ಪತ್ರಗಳನ್ನು ಬರೆದಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ 5ರಂದು ನಡೆಯಲಿದೆ. ಈಗಾಗಲೇ ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಅಂತಿಮ ಕಸರತ್ತು ನಡೆಸಿವೆ. ಇದರ ನಡುವೆ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಣಕುವುದನ್ನು ಮುಂದುವರಿಸಿದ್ದಾರೆ.

ಹೌದು ದೆಹಲಿ ವಿಧಾನಸಭೆ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಈ ಬಾರಿ ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬರುವುದು ಸರ್ಕಸ್ ಅಂತಲೇ ಹೇಳಲಾಗುತ್ತಿದೆ. ಕಳೆದ ಎರಡು ವಾರದಿಂದ ಕೇಜ್ರಿವಾಲ್ ಅವರು ಸರಣಿ ಪತ್ರಗಳನ್ನು ಬರೆಯುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತಿದ್ದಾರೆ. ಇದರ ಉದ್ದೇಶದ ಈ ಬಾರಿ ದೆಹಲಿಯಲ್ಲಿ ಎಎಪಿ – ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ನಾವು ಮನವಿ ಮಾಡಿದರೂ ಕೇಂದ್ರ ಬಿಜೆಪಿ ಸರ್ಕಾರ ನಮ್ಮ ಮನವಿಗಳಿಗೆ ಸ್ಪಂದಿಸಿಲ್ಲ ಎಂದು ತೋರಿಸುವುದಕ್ಕೆ ಎಎಪಿ ಸರ್ಕಸ್ ಮಾಡುತ್ತಿದೆ. ಇದರ ಭಾಗವಾಗಿ ಕಳೆದ ಒಂದು ತಿಂಗಳಿನಿಂದಲೂ ಎಎಪಿ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರು ಸರಣಿ ಪತ್ರಗಳನ್ನು ಬರೆದಿದ್ದಾರೆ.

ಇದೀಗ ಮತ್ತೆ ಪತ್ರ ಬರೆದಿರುವ ಕೇಜ್ರಿವಾಲ್ ಅವರು, ದೇಶದಲ್ಲಿ ಕೇವಲ ಶ್ರೀಮಂತರ ಸಾಲವನ್ನು ಮಾತ್ರ ಮನ್ನಾ ಮಾಡುವುದಕ್ಕಿಂತ ರೈತರು ಹಾಗೂ ಮಧ್ಯಮ ವರ್ಗದಲ್ಲಿರುವವರ ಸಾಲವನ್ನು ಮನ್ನಾ ಮಾಡಿ. ಈ ಬಗ್ಗೆಯೂ ಗಮನಹರಿಸಿ ಅಂತ ಪತ್ರ ಬರೆದಿದ್ದಾರೆ. ನಿಮಗೆ ನಿಜವಾಗಿಯೂ ಸಾಲ ಮನ್ನಾ ಮಾಡಬೇಕು ಅಂತ ಅಂದುಕೊಂಡಿದ್ದರೆ.

ರೈತರ ಹಾಗೂ ಮಧ್ಯಮ ವರ್ಗಕ್ಕೆ ಸಂಬಂಧಿಸಿದವರ ಸಾಲವನ್ನು ಮನ್ನಾ ಮಾಡಿ ಎಂದು ಸವಾಲು ಹಾಕಿರುವ ಅವರು, ಈ ರೀತಿ ನೀವು ಸಾಲ ಮನ್ನಾ ಮಾಡಿದರೆ ಕೋಟ್ಯಾಂತರ ಜನರಿಗೆ ಅನುಕೂಲ ಆಗಲಿದೆ ಎಂದಿದ್ದಾರೆ. ಇಲ್ಲದಿದ್ದರೆ ಇನ್ಮುಂದೆ ಯಾವುದೇ ಶ್ರೀಮಂತರ ಸಾಲ ಸಹ ಮನ್ನಾ ಮಾಡಲ್ಲ ಎಂದು ಘೋಷಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಮಧ್ಯಮ ವರ್ಗದವರ ಕಡೆಯೂ ಸರ್ಕಾರ ಗಮನಕೊಡಬೇಕು. ಬಡವರು ಹಾಗೂ ಮಧ್ಯಮ ವರ್ಗದವರ ಸಾಲ ಮನ್ನಾ ಮಾಡಿದರೆ ಒಳ್ಳೆಯದು. ಶ್ರೀಮಂತರ ಸಾಲ ಮನ್ನಾ ಮಾಡಿದರೆ ಸರ್ಕಾರವು ತೆರಿಗೆ ದರ ಕಡಿಮೆ ಮಾಡಲು ಅವಕಾಶ ಇದೆ. ಶ್ರೀಮಂತರ ಸಾಲ ಮನ್ನಾ ಮಾಡದಿದ್ದರೆ ತೆರಿಗೆ ದರ ಅರ್ಧದಷ್ಟು ಕಡಿಮೆ ಮಾಡಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5ರಂದು ನಡೆಯಲಿದ್ದು. ಚುನಾವಣೆಯ ಫಲಿತಾಂಶವು ಫೆಬ್ರವರಿ 8ಕ್ಕೆ ಪ್ರಕಟವಾಗಲಿದೆ.

Leave a Reply

Your email address will not be published. Required fields are marked *