ದೆಹಲಿ : ಶ್ರೀಮಂತ ಮಹಿಳೆಯರು ಯಾರು ಗೊತ್ತಾ?
ಜಾಗತಿಕವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದೆನಿಸಿರುವ ಭಾರತವು 2030 ರ ವೇಳೆಗೆ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಬೆಳೆಯಲಿದೆ. ಸಿಟಿ ಇಂಡೆಕ್ಸ್ನ ಅಧ್ಯಯನದ ಪ್ರಕಾರ ಭಾರತವು ವಿಶ್ವಾದ್ಯಂತ ಅತಿ ಹೆಚ್ಚು ಮಹಿಳಾ ಬಿಲಿಯನೇರ್‌ಗಳನ್ನು ಹೊಂದಿರುವ ಐದನೇ ದೇಶವಾಗಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ತನ್ನ ಸ್ಥಾನವನ್ನು ಉಳಿಸಿಕೊಂಡಿರುವ ಸಾವಿತ್ರಿ ಜಿಂದಾಲ್ 2025 ರಲ್ಲಿ ಭಾರತದ ಶ್ರೀಮಂತ ಮಹಿಳೆಯಾಗಿ ಗುರುತಿಸಿ ಕೊಂಡಿದ್ದಾರೆ. 38.5 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಸಾವಿತ್ರಿ ಜಿಂದಾಲ್ ಪ್ರಸ್ತುತ ಫೋರ್ಬ್ಸ್ ಇಂಡಿಯಾ ಬಿಲಿಯನೇರ್ಸ್ ಪಟ್ಟಿಯಲ್ಲಿ ಏಕೈಕ ಮಹಿಳಾ ಪ್ರತಿನಿಧಿಯಾಗಿದ್ದಾರೆ ಹಾಗೆಯೇ ಜಾಗತಿಕವಾಗಿ 52ನೇ ಸ್ಥಾನದಲ್ಲಿದ್ದಾರೆ.
ಜೋಹೋ ಕಾರ್ಪ್ನ ಸಹ-ಸಂಸ್ಥಾಪಕಿ, ರಾಧಾ ವೆಂಬು ಅವರು ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯಾಗಿದ್ದು ಶ್ರೇಯಾಂಕದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 2025 ರ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಭಾರತದ ಶ್ರೀಮಂತ ಮಹಿಳೆಯರಲ್ಲಿ 9 ನೇ ಸ್ಥಾನದಿಂದ 7 ನೇ ಸ್ಥಾನಕ್ಕೆ ಏರಿದ್ದಾರೆ.
ಇನ್ನು 2012ರಲ್ಲಿ ಪ್ರಾರಂಭವಾದ ಜನಪ್ರಿಯ ಸೌಂದರ್ಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನೈಕಾ ಸ್ಥಾಪಕರಾದ ಫಲ್ಗುಣಿ ನಾಯರ್ ಅವರು ಕೂಡ ಟಾಪ್ 10ನೇ ಸ್ಥಾನಕ್ಕೆ ಬಂದಿದ್ದಾರೆ. ಈ ಕೆಳಗೆ ದೇಶದ ಟಾಪ್ 10 ಬಿಲಿಯನೇರ್ ಮಹಿಳೆಯರ ಹೆಸರು ಹಾಗೂ ಅವರ ನಿವ್ವಳ ಮೌಲ್ಯವನ್ನು ನೀಡಲಾಗಿದೆ.