ದೆಹಲಿ: ದೇಶಾದ್ಯಂತ ಹವಾಮಾನ ಬದಲಾಗಲು ಪ್ರಾರಂಭಿಸಿದೆ. ಕೆಲವು ಸ್ಥಳಗಳಲ್ಲಿ ಸುಡುವ ಶಾಖದ ಅಲೆ ಇದ್ದರೆ ಇತರ ಸ್ಥಳಗಳಲ್ಲಿ ಆಲಿಕಲ್ಲು, ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ ಮುಂದಿನ ಕೆಲವು ದಿನಗಳವರೆಗೆ ಭಾರತದ ವಿವಿಧ ಭಾಗಗಳಲ್ಲಿ ಬಲವಾದ ಗಾಳಿ, ಮಿಂಚು, ಮಳೆ ಮತ್ತು ತಾಪಮಾನದಲ್ಲಿ ಬದಲಾವಣೆಗಳಾಗಲಿವೆ

ದೆಹಲಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೊಂಚ ಮಳೆಯಾಗಿತ್ತು. ಇದೀಗ ತಾಪಮಾನ ಹೆಚ್ಚಾಗಿದ್ದು ಏಪ್ರಿಲ್ 16ರಿಂದ ತಾಪಮಾನ 40 ಡಿಗ್ರಿಗಳನ್ನು ದಾಟಬಹುದು. ಅಲ್ಲದೆ ಶಾಖದ ಅಲೆಯ ಸಾಧ್ಯತೆಯೂ ಇದೆ. ಹೀಗಾಗಿ ಸದ್ಯಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಮುನ್ಸೂಚನೆಗಳು ಇಲ್ಲ ಎಂದು ಐಎಂಡಿ ಹೇಳಿದೆ.
ಉತ್ತರ ಪ್ರದೇಶ ಹವಾಮಾನ ಉತ್ತರ ಪ್ರದೇಶದ ಲಕ್ನೋನಲ್ಲಿ ಇತ್ತೀಚೆಗೆ ಮಳೆಯಾಗಿತ್ತು. ಆದರೆ ಈಗ ತಾಪಮಾನ ಮತ್ತೆ ಏರಿಕೆಯಾಗಲು ಪ್ರಾರಂಭಿಸಿದೆ. ಏಪ್ರಿಲ್ 16 ರಿಂದ ಪಶ್ಚಿಮದ ವಾಯುಭಾರ ಕುಸಿತ ಸಕ್ರಿಯವಾಗುವುದರಿಂದ ಪೂರ್ವ ಯುಪಿ ಜಿಲ್ಲೆಗಳಾದ ಗೋರಖ್ಪುರ, ಡಿಯೋರಿಯಾ, ಮೌ, ಬಲ್ಲಿಯಾದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೆಚ್ಚಿನ ಪ್ರದೇಶಗಳಲ್ಲಿ ಶಾಖ ಮುಂದುವರಿಯಲಿದೆ. ಗುಡ್ಡಗಾಡು ರಾಜ್ಯಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಇಂದು (ಏಪ್ರಿಲ್ 16) ಬಲವಾದ ಗಾಳಿ (ಗಂಟೆಗೆ 40-50 ಕಿಮೀ) ಮತ್ತು ಮಿಂಚು ಜೊತೆಗೆ ಹಗುರದಿಂದ ಮಧ್ಯಮ ಮಳೆ ಬೀಳುವ ಸಾಧ್ಯತೆಯಿದೆ. ಹೀಗಾಗಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಈಶಾನ್ಯ ಭಾರತದಲ್ಲಿ ಭಾರಿ ಮಳೆ ಇನ್ನೂ ಏಪ್ರಿಲ್ 16ರಿಂದ 17ರವರೆಗೆ ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಏಪ್ರಿಲ್ 16-17 ರಂದು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಭಾರತ: ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಮಳೆ ಸಾಧ್ಯತೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಏಪ್ರಿಲ್ 16-17 ರಂದು ಮಳೆ, ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವೆಲ್ಲೂರು ಮತ್ತು ಮಧುರೈನಂತಹ ನಗರಗಳಲ್ಲಿ 40 ಡಿಗ್ರಿ ತಲುಪಿದ್ದ ತಾಪಮಾನ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಇತ್ತ ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಾದ್ಯಂತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರ, ಒಡಿಶಾ ಹವಾಮಾನ ಏಪ್ರಿಲ್ 16 ರಂದು ಮಹಾರಾಷ್ಟ್ರದಲ್ಲಿ ಗುಡುಗು, ಮಿಂಚು ಮತ್ತು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 17ರಂದು ಒಡಿಶಾದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.