12 ಕೋಟಿ ಜೀವನಾಂಶಕ್ಕಾಗಿ ಬೇಡಿಕೆ : ನೀವೇ ದುಡಿದು ಸಂಪಾದಿಸಿ ಎಂದ Supreme Court.

12 ಕೋಟಿ ಜೀವನಾಂಶಕ್ಕಾಗಿ ಬೇಡಿಕೆ : ನೀವೇ ದುಡಿದು ಸಂಪಾದಿಸಿ ಎಂದ Supreme Court.

ಇತ್ತೀಚೆಗಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ದಂಪತಿಗಳು ಸಣ್ಣ ಸಣ್ಣ ವಿಷಯಕ್ಕೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಮಹಿಳೆಯೊಬ್ಬರು ಜೀವನಾಂಶಕ್ಕಾಗಿ ಕೋಟಿಗಟ್ಟಲೇ ಹಣ , ಮನೆ ಹಾಗೂ ಐಷಾರಾಮಿ ಕಾರು ಹೀಗೆ ಭಾರಿ ಬೇಡಿಕೆ ಇಟ್ಟಿದ್ದಾಳೆ. ಈ ಮಹಿಳೆಯಯ ಬೇಡಿಕೆ ನೋಡಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಾಕ್ ಆಗಿದ್ದು, ಈ ಮಹಿಳೆಯ ವಿರುದ್ಧ ಚಾಟಿ ಬೀಸಿದ್ದಾರೆ. ಅಷ್ಟಕ್ಕೂ ಈ ಮಹಿಳೆಯ ದುಬಾರಿ ಬೇಡಿಕೆಗೆ ಮುಖ್ಯ ನ್ಯಾಯಮೂರ್ತಿ ಏನು ಹೇಳಿದ್ರು ಗೊತ್ತಾ? ಈ ಕುರಿತಾದ ಮಾಹಿತಿ ಇಲ್ಲಿದೆ.

ಇತ್ತೀಚೆಗಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪ, ಜಗಳಗಳು ಡಿವೋರ್ಸ್ ಪಡೆಯುವ ಹಂತಕ್ಕೆ ಹೋಗಿ ತಲುಪುತ್ತಿದೆ. ಹೀಗೆ ಪತಿ ಪತ್ನಿಯರ ನಡುವೆ ಡಿವೋರ್ಸ್ ಆದ್ರೆ ಪತಿಯಾದವನು ಮಾಜಿ ಪತ್ನಿಗೆ ಇಂತಿಷ್ಟು ಜೀವನಾಂಶ ನೀಡಬೇಕು ಎಂಬುದು ಕಾನೂನು ಇದೆ. ಕೆಲವರು ಇದನ್ನೇ ಬಂಡವಾಳವಾಗಿಟ್ಟುಕೊಂಡು ಜೀವನಾಂಶಕ್ಕೆ ಭಾರಿ ಬೇಡಿಕೆ ಇಟ್ಟಿರುವ ಘಟನೆಗಳು ಈ ಹಿಂದೆ ನಡೆದಿದೆ. ಇದೀಗ ಮಹಿಳೆಯೊಬ್ಬರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಪತಿಯ ಬಳಿ 12 ಕೋಟಿ ರೂ, ಮುಂಬೈನಲ್ಲಿ ಮನೆ ಹಾಗೂ ಬಿಎಂಡಬ್ಲ್ಯೂ ಕಾರು ಬೇಕೆಂದು ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾಳೆ. ಈ ಮಹಿಳೆಯ ಬೇಡಿಕೆ ನೋಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಆಕೆಯನ್ನು ತರಾಟೆಗೆ ತೆಗೆದುಕೊಂಡು ನೀವು ಕೆಲಸಕ್ಕೆ ಹೋಗಿ ಸಂಪಾದಿಸಿ ಎಂದು ಖಡಕ್ ಆಗಿ ಹೇಳಿದ್ದಾರೆ.

ಹೌದು, 18 ತಿಂಗಳ ದಾಂಪತ್ಯದ ಬಳಿಕ ವಿಚ್ಛೇದನ ಪಡೆದಿದ್ದ ಮಹಿಳೆಯೊಬ್ಬರು ಪತಿಯಿಂದ ವಿಶೇಷ ಬೇಡಿಕೆಯಿಟ್ಟಿದ್ದು, ಈ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ನೀವು ಐಟಿ ವೃತ್ತಿಪರರು, ಎಂಬಿಎ ಪದವೀಧರಾಗಿದ್ದೀರಿ. ಮದುವೆಗೂ ಮೊದಲು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀರಾ. ನಿಮ್ಮ ಸ್ವ ಇಚ್ಛೆಯಿಂದ ಮದುವೆಯ ಬಳಿಕ ಕೆಲಸ ಮಾಡುವುದಿಲ್ಲ ಎನ್ನುವ ನಿರ್ಧಾರ ತೆಗೆದುಕೊಂಡಿದ್ದೀರಿ.

ನಿಮ್ಮಲ್ಲಿರುವ ಕೆಲಸದ ಅನುಭವಕ್ಕೆ ಬೆಂಗಳೂರು, ಹೈದರಾಬಾದ್ ನಲ್ಲಿ ಕೈತುಂಬಾ ಸಂಬಳ ಇರುವ ಕೆಲಸ ಸಿಗುತ್ತದೆ. ಆದರೆ ನೀವು ಜೀವನಾಂಶಕ್ಕೆ ಬೇಡಿಕೆ ಇಡುತ್ತಿದ್ದೀರಾ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ನಿಮಗೆ ನೀಡಲು ಒಪ್ಪಿರುವಂತಹ 4 ಕೋಟಿ ರೂ. ಜೀವನಾಂಶ ಹಾಗೂ ಫ್ಲ್ಯಾಟ್ ಪಡೆದು ನಿಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಬಹುದು. ನೀವು ವಿದ್ಯಾವಂತರಾಗಿದ್ದೀರಿ, ಹೀಗಾಗಿ ನೀವು ನಿಮಗಾಗಿ ಭಿಕ್ಷೆ ಬೇಡಬಾರದು. ನೀವು ನಿಮಗಾಗಿ ಸಂಪಾದಿಸಿ ತಿನ್ನಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *