ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಮೆ ಯಾಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ವಿರೋಧ ಪಕ್ಷದ ಸಿದ್ಧಾಂತದ ಅರಿವಿದೆ ಎಂಬುದನ್ನು ನಿರೂಪಿಸಿವುದಕ್ಕಾಗಿ ಹಾಗೆ ಹೇಳಿದೆ ಅಷ್ಟೆ.
ಆದರೂ, ಒಂದು ವೇಳೆ ತಪ್ಪು ಮಾಡಿದ್ದೇನೆ ಎಂದು ನೀವು ಭಾವಿಸುವುದೇ ಆದರೆ, ಎಲ್ಲ ಕಾಂಗ್ರೆಸ್ ನಾಯಕರ-ಕಾರ್ಯಕರ್ತರ, ಇಂಡಿ ಒಕ್ಕೂಟದ ನಾಯಕರ ಕ್ಷಮೆ ಕೇಳುತ್ತೇನೆ ಎಂದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಕುರಿತಾದ ತಮ್ಮ ನಿಷ್ಠೆಯನ್ನು ಮತ್ತೆ ಸ್ಪಷ್ಟಪಡಿಸಿದರು. ಅಲ್ಲದೆ, ಹೈಕಮಾಂಡ್ ಆಗಲೀ ಇತರ ಯಾರೂ ತಮ್ಮ ಕ್ಷಮೆ ಕೇಳಿಲ್ಲ ಎಂದರು. ಯಾರ ಮನಸನ್ನೂ ನೋಯಿಸುವ ಉದ್ದೇಶ ತಮಗಿಲ್ಲ ಎಂದೂ ಹೇಳಿದರು.
For More Updates Join our WhatsApp Group :




