ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮ ಅವರ ವಿಚ್ಛೇದನದ ಸಮಯದಲ್ಲಿ ಚಹಲ್ ಅವರು ಧರಿಸಿದ್ದ “ಬಿ ಯುವರ್ ಓನ್ ಶುಗರ್ ಡ್ಯಾಡಿ” ಎಂಬ ಟಿ-ಶರ್ಟ್ ಸಾಕಷ್ಟು ಗಮನ ಸೆಳೆಯಿತು. ಈ ಬಗ್ಗೆ ಧನಶ್ರೀ ತಮ್ಮ ಮೌನವನ್ನು ಮುರಿದು ಪ್ರತಿಕ್ರಿಯಿಸಿದ್ದಾರೆ. ವಿಚ್ಛೇದನದ ದಿನದ ಘಟನೆಗಳ ಬಗ್ಗೆ ಮತ್ತು ಟಿ-ಶರ್ಟ್ನ ಅರ್ಥದ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟರ್ ಯಜುವೇಂದ್ರ ಚಹಲ್ ಹಾಗೂ ನಟಿ, ಕೊರಿಯೋಗ್ರಾಫರ್ ಧನಶ್ರೀ ವರ್ಮ ವಿವಾಹ ಆಗಿ ಕೆಲವೇ ವರ್ಷಗಳಲ್ಲಿ ಬೇರೆ ಆದರು. ವಿಚ್ಛೇದನ ಪಡೆದುಕೊಳ್ಳುವ ದಿನ ಕೋರ್ಟ್ನಲ್ಲಿ ಇಬ್ಬರೂ ಮುಖಾ ಮುಖಿ ಆದರು. ಈ ವೇಳೆ ಚಹಲ್ ಅವರು ಧರಿಸಿದ್ದ ಟಿ-ಶರ್ಟ್ ಗಮನ ಸೆಳೆದಿತ್ತು. ಇದು ಧನಶ್ರೀಗೆ ಟಾಂಗ್ ಕೊಡುವ ರೀತಿಯಲ್ಲಿ ಇತ್ತು. ಈ ಬಗ್ಗೆ ಧನಶ್ರೀ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಟಿ-ಶರ್ಟ್ ಮೇಲೆ ಏನಿತ್ತು?
ಚಹಾಲ್ ಅವರು ‘ಬಿ ಯುವರ್ ಓನ್ ಶುಗರ್ ಡ್ಯಾಡಿ’ ಎಂಬ ಸಾಲಿರುವ ಟಿ ಶರ್ಟ್ನ ಧರಿಸಿ ಬಂದಿದ್ದರು. ‘ನಿಮ್ಮ ಅಗತ್ಯತೆಗಳು ಮತ್ತು ಆಸೆಗಳಿಗಾಗಿ ಶ್ರೀಮಂತ ವ್ಯಕ್ತಿಯನ್ನು ಅವಲಂಬಿಸುವ ಬದಲು ಆರ್ಥಿಕವಾಗಿ ಸ್ವತಂತ್ರರಾಗಿ ಮತ್ತು ಸ್ವಾವಲಂಬಿಯಲಾಗಿ’ ಎಂಬ ಅರ್ಥವನ್ನು ಈ ಸಾಲುಗಳು ನೀಡುತ್ತವೆ.
ಧನಶ್ರೀ ಉತ್ತರ..
‘ಆ ನಿರ್ದಿಷ್ಟ ದಿನದಂದು ನೀವು ಹೇಗೆ ವರ್ತಿಸುತ್ತೀರಿ ಎಂಬುದರ ಆಧಾರದ ಮೇಲೆ ನೀವು ಯಾರು ಎಂಬುದು ಗೊತ್ತಾಗುತ್ತದೆ. ಸಂಸಾರದಲ್ಲಿ ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳು ಇರುತ್ತವೆ.ಆದರೆ, ದಾಂಪತ್ಯ ಕೊನೆಗೊಂಡಿದೆ ಎಂದರೆ ಆ ದಿನಗಳು ನಿಜವಾಗಿಯೂ ಕೆಟ್ಟದಾಗಿತ್ತು ಎಂದೇ ಅರ್ಥ. ಆ ವೇಳೆ ನೀವು ಪ್ರಬುದ್ಧರಾಗಿ ನಡೆದುಕೊಳ್ಳಬೇಕು. ನಿಮಗೆ ಮೆಸೇಜ್ ಕೊಡಬೇಕು ಎಂದಿದ್ದರೆ ವಾಟ್ಸಾಪ್ ಮಾಡಬಹುದಿತ್ತಲ್ಲ’ ಎಂದು ಧನಶ್ರೀ ಹೇಳಿದ್ದಾರೆ.
‘ಆ ದಿನ ನಿಜಕ್ಕೂ ಭಾವನಾತ್ಮಕವಾಗಿತ್ತು. ನಾನು ಅಲ್ಲಿ ನಿಂತುಕೊಂಡಿದ್ದಾಗ ತೀರ್ಪನ್ನು ನೀಡಲಾಗುತ್ತಿತ್ತು. ನಾನು ಮಾನಸಿಕವಾಗಿ ಸಿದ್ಧನಾಗಿದ್ದರೂ ನಾನು ಭಾವುಕಳಾಗಿದ್ದೆ. ನಾನು ಎಲ್ಲರ ಎದುರೇ ಅಳುತ್ತಿದ್ದೆ. ಆ ಸಮಯದಲ್ಲಿ ಏನಾಗುತ್ತಿತ್ತು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಅವರು.
ಚಹಲ್ ಹಾಗೂ ಧನಶ್ರೀ ಡ್ಯಾನ್ಸ್ ಕ್ಲಾಸ್ನಲ್ಲಿ ಭೇಟಿ ಆದರು. ಚಹಲ್ಗೆ ಧನಶ್ರೀ ಡ್ಯಾನ್ಸ್ ಹೇಳಿಕೊಟ್ಟರು.ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಆ ಬಳಿಕ ಡೇಟ್ ಮಾಡಿ ಇವರು ವಿವಾಹ ಆದರು. ಈಗ ವಿಚ್ಛೇದನ ಪಡೆದು ದೂರ ಆಗಿದ್ದಾರೆ.
For More Updates Join our WhatsApp Group :