ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆಯಲ್ಲಿ ಹೊಸ ತಿರುವು ಎದುರಾಗಿದೆ. ಸತತ ನಾಲ್ಕು–ಐದು ದಿನಗಳ ವಿಚಾರಣೆಯ ಬಳಿಕ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಕೊನೆಗೂ SIT ಮುಂದೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದುವರೆಗೂ ತನಿಖೆಯ ವೇಳೆ ಯಾರೇ ವಿಚಾರಣೆಗೊಳಗಾದರೂ ಪರಸ್ಪರರ ಮೇಲೆ ಆರೋಪ ಹಾಕುತ್ತಿದ್ದರು. ಜಯಂತ್.ಟಿ, “ನಾನು ಅಲ್ಲ, ಗಿರೀಶ್ ಮಟ್ಟಣ್ಣನವರ್ ಬುರುಡೆ ಕೊಟ್ಟವರು” ಎಂದು ಹೇಳಿದ್ದರೆ, ಗಿರೀಶ್ ತಮ್ಮ ವಿಚಾರಣೆಯ ಸಮಯದಲ್ಲಿ “ನನಗೇನೂ ಗೊತ್ತಿಲ್ಲ” ಎಂದು ಹೇಳಿ ತಪ್ಪಿಸಿಕೊಂಡಿದ್ದರು.
ಆದರೆ ಇದೀಗ SIT ಒತ್ತಾಯದ ವಿಚಾರಣೆಯ ಬಳಿಕ ಗಿರೀಶ್ ಮಟ್ಟಣ್ಣವರ್, ಸೌಜನ್ಯ ಮಾವ ವಿಠ್ಠಲ್ ಗೌಡರೇ ಬುರುಡೆ ತಂದುಕೊಟ್ಟವರು ಎಂದು ಬಾಯ್ಬಿಟ್ಟಿದ್ದಾರೆ.ಈ ಹೇಳಿಕೆಯಿಂದ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದ್ದು, SIT ಅಧಿಕಾರಿಗಳು ಮುಂದಿನ ಹಂತದ ತನಿಖೆಗೆ ತಯಾರಿ ನಡೆಸುತ್ತಿದ್ದಾರೆ.
For More Updates Join our WhatsApp Group :