ಧರ್ಮಸ್ಥಳ ಬುರುಡೆ ಪ್ರಕರಣ ತೀವ್ರ ಹಂತ: 6 ಮಂದಿಗೆ ತಪ್ಪದ ಸಂಕಷ್ಟ, SIT ವಿಚಾರಣೆ ಗರಿಷ್ಠ ವೇಗ.

ಧರ್ಮಸ್ಥಳ ಬುರುಡೆ ಪ್ರಕರಣ ತೀವ್ರ ಹಂತ: 6 ಮಂದಿಗೆ ತಪ್ಪದ ಸಂಕಷ್ಟ, ಎಸ್ಐಟಿ ವಿಚಾರಣೆ ಗರಿಷ್ಠ ವೇಗ.

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ತೀವ್ರ ಹಂತ ತಲುಪಿದ್ದು, ಎಸ್ಐಟಿ ಹಲವು ಪ್ರಮುಖರನ್ನು ಗರಿಷ್ಠ ವಿಚಾರಣೆಗೆ ಒಳಪಡಿಸಿದೆ. ಈಗಾಗಲೇ ಬುರುಡೆ ಚಿನ್ನಯ್ಯನನ್ನು ಶಿಮೊಗ್ಗ ಜೈಲಿಗೆ ಸ್ಥಳಾಂತರಿಸಿ ತೀವ್ರ ವಿಚಾರಣೆ ನಡೆಸಲಾಗಿದ್ದು, ಆತನ ಹೇಳಿಕೆಯ ಆಧಾರದಲ್ಲಿ ಹಲವರಿಗೆ ಸಂಕಷ್ಟ ಎದುರಾಗುತ್ತಿದೆ.

ಕಳೆದ 7 ದಿನಗಳಿಂದ ಗಿರೀಶ್ ಮಟ್ಟಣ್ಣನವರ್ ವಿಚಾರಣೆಯಲ್ಲಿದ್ದು, ಜಯಂತ್ 8 ದಿನಗಳಿಂದ ಗ್ರಿಲ್ ಆಗುತ್ತಿದ್ದಾರೆ. ಸೌಜನ್ಯ ಮಾವ ವಿಠ್ಠಲ ಗೌಡ ಹಾಗೂ ಚಾಲಕ ಪ್ರದೀಪ್ ಕೂಡಾ ವಿಚಾರಣೆಗೆ ಒಳಪಟ್ಟಿದ್ದಾರೆ. ಯೂಟ್ಯೂಬರ್ ಅಭಿಷೇಕ್‌ಗೆ 7 ದಿನ, ಕೇರಳದ ಯೂಟ್ಯೂಬರ್ ಮನಾಫ್‌ಗೆ 3 ದಿನ ವಿಚಾರಣೆ ನಡೆಸಲಾಗಿದೆ.

ಎಸ್ಐಟಿ ಅಧಿಕಾರಿಗಳು ಬಿಎನ್ಎಸ್ ಕಾಯ್ದೆ 161ರಡಿ ಹೇಳಿಕೆ ದಾಖಲಿಸುತ್ತಿದ್ದು, ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದರೆ ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ ಇದೆ. ಸಾಕ್ಷ್ಯಾಧಾರ ಸಿಕ್ಕರೆ ಸೆಕ್ಷನ್ 41ರಡಿ ಬಂಧಿಸಿ ಮತ್ತಷ್ಟು ವಿಚಾರಣೆ ನಡೆಸುವ ತಯಾರಿ ನಡೆದಿದೆ.

ಅಭಿಷೇಕ್‌ನ ಲ್ಯಾಪ್‌ಟಾಪ್ ಮತ್ತು 2 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಮನಾಫ್ ಹೇಳಿಕೆ ದಾಖಲಿಸಿ ಹಿಂತಿರುಗಿಸಲಾಗಿದೆ. ನೋಟಿಸ್ ನೀಡಿದಂತೆ ಮುಂದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.ವಿಠ್ಠಲ ಗೌಡ ಹಾಗೂ ಚಾಲಕ ಪ್ರದೀಪ್ ಹಿಂದೆ ಬಂಗ್ಲೆಗುಡ್ಡದ ಕಾಡಂಚಿನಲ್ಲಿ ಬುರುಡೆ ಅಡಗಿಸಿದ್ದರು ಎಂಬ ಮಾಹಿತಿ ಹೊರಬಂದಿದ್ದು, ಮಹಜರು ವೇಳೆ ಜಾಗವನ್ನು ತೋರಿಸಲಾಗಿದೆ. ಈ ಕಾರಣದಿಂದ ವಿಠ್ಠಲ ಗೌಡನಿಗೂ ಸಂಕಷ್ಟ ಹೆಚ್ಚಿದೆ.

ಸದ್ಯ ಎಲ್ಲರ ಹೇಳಿಕೆಗಳನ್ನು ಎಸ್ಐಟಿ ಹೋಲಿಕೆ ಮಾಡುತ್ತಿದ್ದು, ವ್ಯತ್ಯಾಸ ಹೊರಬಿದ್ದರೆ ಬಂಧನಗಳು ತಪ್ಪದೇ ನಡೆಯುವ ಸಾಧ್ಯತೆ ಗಟ್ಟಿಯಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *