ಧ್ರುವ ಸರ್ಜಾ ಮ್ಯಾನೇಜರ್ ಬಂಧನ; ಏನಿದು ಪ್ರಕರಣ?

ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಟ ಧ್ರುವ ಸರ್ಜಾಗೆ ಆಪ್ತರಾಗಿರುವ, ಜಿಮ್ ತರಬೇತುದಾರ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅಶ್ವಿನ್ನನ್ನು ಬಂಧಿಸಲಾಗಿದೆ.

ಮೇ 26 ರಂದು ಕನಕಪುರ ಮೂಲದ ಹರ್ಷ ಹಾಗೂ ಸುಭಾಷ್ ಎಂಬುವರು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದರು. ದೂರಿನ ಬಳಿಕ ಅವರಿಬ್ಬರನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಹಲ್ಲೆ ಹಿಂದಿನ ಮಾಸ್ಟರ್ ಮೈಂಡ್ ನಟ ಧ್ರುವ ಸರ್ಜಾ ಮ್ಯಾನೇಜರ್ ಆಗಿರುವ ಅಶ್ವಿನ್ ಎಂಬುದು ಗೊತ್ತಾಗಿದೆ.

ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿ ಕೂಡ ಧ್ರುವ ಸರ್ಜಾಗೆ ಜಿಮ್ ಟ್ರೈನರ್ ಆಗಿದ್ದರು. ಧ್ರುವ ಅವರಿಗೆ ಪ್ರಶಾಂತ್ ಒಳ್ಳೆತನ ಕಂಡು ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಕೊಟ್ಟಿದ್ದರು. ಇದರಿಂದ ಅಸೂಯೆಗೊಂಡ ಅಶ್ವಿನ್ ಧ್ರುವ ಜತೆಗಿನ ಆತ್ಮೀಯತೆ ಮುರಿಯಬೇಕು ಎಂದು ನಿರ್ಧರಿಸಿ ಧ್ರುವ ಕಾರು ಚಾಲಕನ ಜತೆ ಸೇರಿ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದರು.

Leave a Reply

Your email address will not be published. Required fields are marked *