‘Dhurandhar 2’ ಟ್ರೇಲರ್ ರಿಲೀಸ್; ರಣವೀರ್ ಆ್ಯಕ್ಷನ್ ತೋರಿಸಿದರೂ ಅಕ್ಷಯ್ ಖನ್ನಾ ಕೊರತೆ.

'Dhurandhar 2' ಟ್ರೇಲರ್ ರಿಲೀಸ್; ರಣವೀರ್ ಆ್ಯಕ್ಷನ್ ತೋರಿಸಿದರೂ ಅಕ್ಷಯ್ ಖನ್ನಾ ಕೊರತೆ.

 ಟ್ರೇಲರ್ ಬಗ್ಗೆ ಅಭಿಮಾನಿಗಳ ಅಭಿಪ್ರಾಯ.

ಬಹು ನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ಈ ಟ್ರೇಲರ್ ಗಮನ ಸೆಳೆದಿದೆ. ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಇದೆ. ರಣವೀರ್ ಸಿಂಗ್ ಅವರು ಟ್ರೇಲರ್ ಅಲ್ಲಿ ರಕ್ತ ಹರಿಸಿದ್ದಾರೆ. ಟ್ರೇಲರ್ ನೋಡಿದರೆ ಸಿನಿಮಾ 2 ಸಾವಿರ ಕೋಟಿ ಕಲೆಕ್ಷನ್ ಮಾಡೋದು ಪಕ್ಕಾ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿವೆ. ಆದರೂ ಒಂದು ಕೊರತೆ ಕಾಣುತ್ತಿದೆ.

‘ಧುರಂಧರ್ 2’ ಸಿನಿಮಾ ಟ್ರೇಲರ್ ಉದ್ದಕ್ಕೂ ಆ್ಯಕ್ಷನ್ ಮೆರೆಯಲಾಗಿದೆ. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಅದ್ಭುತ ಫೀಲ್ ಆಗಿದೆ. ಹಮ್ಜಾ ಅಲಿ ಮಜಾರಿ ಪಾಕಿಸ್ತಾನದಲ್ಲಿ ರೆಹಮಾನ್ ಡಕಾಯಿತ್​​ನ ಕೊಲೆ ಮಾಡುತ್ತಾನೆ. ಈ ಕೊಲೆ ಬಳಿಕ ಹಮ್ಜಾ ಪಾಕಿಸ್ತಾನದ ಡಾನ್ ಆಗುವ ರೀತಿಯಲ್ಲಿ ತೋರಿಸಲಾಗಿದೆ. ಅಲ್ಲದೆ, ಹಮ್ಜಾನ ಹಿಂದಿನ ಕಥೆಯನ್ನು ಕೂಡ ತೋರಿಸಲಾಗಿದೆ.

ಟ್ರೇಲರ್ ಉದ್ದಕ್ಕೂ ‘ಧುರಂದರ್ 2’ ಚಿತ್ರದಲ್ಲಿ ಆ್ಯಕ್ಷನ್ ಇದೆ. ಇದು ಆ್ಯಕ್ಷನ್ ಪ್ರಿಯರಿಗೆ ಸಾಕಷ್ಟು ಇಷ್ಟ ಆಗುವ ಸಾಧ್ಯತೆ ಇದೆ. ಆದರೆ, ಟ್ರೇಲರ್ ಅಲ್ಲಿ ಎಲ್ಲಿಯೂ ಅಕ್ಷಯ್ ಖನ್ನಾ ಕಾಣಿಸಿಲ್ಲ. ಮೊದಲ ಭಾಗದಲ್ಲಿ ಅವರು ರೆಹಮಾನ್ ಡಕಾಯಿತ್ ಪಾತ್ರ ಮಾಡಿದ್ದರು. ಈ ಪಾತ್ರ ಎಲ್ಲಿಯೂ ತೋರಿಸಿಲ್ಲ. ಇದು ಕೆಲವರ ಬೇಸರಕ್ಕೆ ಕಾರಣ ಆಗಿದೆ. ಕೆಲವು ದೃಶ್ಯಗಳಲ್ಲಿಯಾದರೂ ಅವರು ಕಾಣಿಸಿಕೊಳ್ಳಬೇಕಿತ್ತು ಎಂದು ಅನೇಕರು ಹೇಳಿದ್ದಾರೆ.

‘ಧುರಂಧರ್ 2’ ಸಿನಿಮಾಗೆ ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋ ಜೊತೆ ಆದಿತ್ಯ ಧಾರ್ ಕೂಡ ಸಿನಿಮಾದ ನಿರ್ಮಾಪಕ. ಭಾರತದ ವ್ಯಕ್ತಿಯೋರ್ವ ಪಾಕಿಸ್ತಾನದಲ್ಲಿ ಸ್ಪೈ ಆಗುತ್ತಾನೆ. ಅಲ್ಲಿಯವರ ಜೊತೆ ಸೇರಿ, ಭಾರತದ ಪರವಾಗಿ ಕೆಲಸ ಮಾಡುತ್ತಾನೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *