ಬೆಂಗಳೂರು: ರಸ್ತೆ ಗುಂಡಿ ಗುರುತಿಸಲು ‘ಗುಂಡಿ ಗಮನ’ ಆ್ಯಪ್ ಬಿಡುಗಡೆ

ಬೆಂಗಳೂರು: ನಗರದ ರಸ್ತೆಗಳಲ್ಲಿನ ಗುಂಡಿಗಳ ಮುಚ್ಚಲು ಅನುಕೂಲ ಆಗುವಂತೆ ಸಾರ್ವಜನಿಕರೇ ರಸ್ತೆಗುಂಡಿಗಳನ್ನು ಗುರುತಿಸಿ ಫೋಟೋಗಳನ್ನು ಕಳಿಸುವುಕ್ಕೆ ‘ರಸ್ತೆ ಗುಂಡಿ ಗಮನ’ (Fix Pothole) ಎಂಬ ಆ್ಯಪ್’ನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಭಿವೃದ್ಧಿಪಡಿಸಿದ್ದು, ಬಿಡುಗಡೆ ಮಾಡಿದೆ.

ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೊತೆಯಲ್ಲಿ ಶನಿವಾರ ‘ರಸ್ತೆ ಗುಂಡಿಗಳ ಗಮನ’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದರು.

ಬೆಂಗಳೂರು ನಗರದಲ್ಲಿ ಸುಮಾರು 12,878 ಕಿ.ಮೀ ಉದ್ದದ ರಸ್ತೆ ಇದ್ದು, ಈ ಪೈಕಿ ಸುಮಾರು 1,344.84 ಕಿ.ಮೀ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ 11,533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆಗಳಾಗಿವೆ.

ಬೆಂಗಳೂರು ನಗರದ ರಸ್ತೆಗಳ ತಳಭಾಗದಲ್ಲಿ ಸಾಂಪ್ರದಾಯಿಕವಾಗಿ ಬೆಸ್ಕಾಂ ಕೇಬಲ್, ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳು, ಗೇಲ್ ಗ್ಯಾಸ್‌ನ ಕೊಳವೆಗಳು. ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆ ಮತ್ತು ಒಎಫ್‌ಸಿ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಯ ಮೇಲೆ ಭಾಗವು ಹದಗೆಟ್ಟು ನಿರಂತರವಾಗಿ ರಸ್ತೆ ಗುಂಡಿಗಳು ಉಂಟಾಗುತ್ತಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆಗಳನ್ನು ಜಿಪಿಎಸ್ ಆಧಾರದ ಮೇಲೆ ಗುರುತಿಸಿ, ಆ ರಸ್ತೆಗಳಲ್ಲಿ ಬೀಳಬಹುದಾದ ರಸ್ತೆ ಗುಂಡಿಗಳನ್ನು ಅಕ್ಷಾಂಶ ಮತ್ತು ರೇಖಾಂಶ (Latitude and Longitude)ನಲ್ಲಿ ನಿಖರವಾಗಿ ಗುರುತಿಸಿ, ಮೊಬೈಲ್‌ನಲ್ಲಿ ರಸ್ತೆ ಗುಂಡಿಯ ಅಳತೆಯನ್ನು ನಮೂದಿಸಿ ಪ್ರತಿಯೊಂದು ರಸ್ತೆ ಗುಂಡಿಯನ್ನು ಮುಚ್ಚಲು ಪ್ರತ್ಯೇಕ ಕಾರ್ಯಾದೇಶವನ್ನು ತಯಾರಿಸಿ ಅದನ್ನು ಮುಚ್ಚಲು ಈ ಆಪ್ ಸಹಕಾರಿಯಾಗಲಿದೆ.

Leave a Reply

Your email address will not be published. Required fields are marked *