5 ದಿನಗಳಲ್ಲಿ150 ಕೋಟಿ! ಊಹೆಗೂಮೀರಿದಯಶಸ್ಸು..
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಇದೆ. ಈ ಚಿತ್ರ ಊಹೆಗೂ ಮೀರಿ ಗೆಲವು ಕಂಡಿದೆ. ಐದು ದಿನಕ್ಕೆ ಚಿತ್ರ 150 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ಅನಾಯಾಸವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಊಹಿಸಲಾಗಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾನ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಲಾಗುತ್ತಾ ಇದೆ.
‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ಗೂ ಮೊದಲೇ ವಿವಾದ ಸೃಷ್ಟಿ ಮಾಡಿತ್ತು. ದೈವ ಅನುಕರಣೆ ಮಾಡಿ ರಣವೀರ್ ಟೀಕೆಗೆ ಗುರಿಯಾಗಿದ್ದು ಇದರಲ್ಲಿ ಮುಖ್ಯವಾದುದ್ದು. ನೆಗೆಟಿವ್ ವಿಷಯಗಳನ್ನು ಸಿನಿಮಾ ಮೆಟ್ಟಿ ನಿಂತಿದೆ.
‘ಧುರಂಧರ್’ ಸಿನಿಮಾ ಮೊದಲ ದಿನ ಗಳಿಸಿದ್ದು, 28 ಕೋಟಿ ರೂಪಾಯಿ. ಶನಿವಾರ 32 ಕೋಟಿ ರೂಪಾಯಿ, ಭಾನುವಾರ 43 ಕೋಟಿ ರೂಪಾಯಿ, ಸೋಮವಾರ 23.35 ಕೋಟಿ ರೂಪಾಯಿ ಗಳಿಸಿ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಮಂಗಳವಾರ (ಡಿಸೆಂಬರ್ 10) ಸಿನಿಮಾದ ಕಲೆಕ್ಷನ್ 26.50 ಕೋಟಿ ರೂಪಾಯಿ.
ಸಾಮಾನ್ಯವಾಗಿ ವಾರದ ದಿನ ಬಂದರೆ ಸಿನಿಮಾದ ಗಳಿಕೆ ಕುಸಿತ ಕಾಣುತ್ತದೆ. ಸೋಮವಾರಕ್ಕಿಂತ ಮಂಗಳವಾರ ಕಲೆಕ್ಷನ್ ಮತ್ತಷ್ಟು ಕುಗ್ಗುತ್ತದೆ. ಆದರೆ, ‘ಧುರಂಧರ್’ ವಿಷಯದಲ್ಲಿ ಅದು ಉಲ್ಟಾ ಆಗಿದೆ. ಸೋಮವಾರಕ್ಕಿಂತ ಮಂಗಳವಾರ ಸಿನಿಮಾ ಹೆಚ್ಚುವರಿಯಾಗಿ 3 ಕೋಟಿ ರೂಪಾಯಿ ಗಳಿಸಿದೆ. ಈ ವಾರಾಂತ್ಯದಲ್ಲಿ ಚಿತ್ರದ ಪ್ರತಿ ದಿನದ ಕಲೆಕ್ಷನ್ 30-40 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
For More Updates Join our WhatsApp Group :




