ಸಹೋದರ ದಿನಕರ್ ನಿರ್ದೇಶನದ ‘ರಾಯಲ್’ ಸಿನಿಮಾ ವೀಕ್ಷಿಸಿದ ಡಿಬಾಸ್

ಸಹೋದರ ದಿನಕರ್ ನಿರ್ದೇಶನದ 'ರಾಯಲ್' ಸಿನಿಮಾ ವೀಕ್ಷಿಸಿದ ಡಿಬಾಸ್

ನಟ ದರ್ಶನ್ ಮತ್ತೆ ಸಿನಿಮಾಗಳ ಕಡೆ ಮುಖ ಮಾಡಿದಂತೆ ಕಾಣುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ದರ್ಶನ್ ಹೊರ ಬಂದಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಹೋದರ ದಿನಕರ್ ನಿರ್ದೇಶನದ ‘ರಾಯಲ್’ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಇತ್ತೀಚೆಗೆ ಸಿನಿಮಾ ನೋಡಿ ದರ್ಶನ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ತಾಯಿ ಮೀನಾ ತೂಗುದೀಪ ಹಾಗೂ ಪತ್ನಿ ವಿಜಯಲಕ್ಷ್ಮಿ ಸಮೇತ ದರ್ಶನ್ ‘ರಾಯಲ್’ ಸಿನಿಮಾ ವೀಕ್ಷಿಸಿದರು. ಮಲ್ಲೇಶ್ವರದ ಎಸ್ಆರ್ವಿ ಥಿಯೇಟರ್ನಲ್ಲಿ ಚಿತ್ರದ ಸ್ಪೆಷಲ್ ಶೋ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರದ ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ, ನಾಯಕ ವಿರಾಟ್, ನಾಯಕಿ ಸಂಜನಾ ಆನಂದ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು. ಸ್ಟೈಲಿಶ್ ಲುಕ್ನಲ್ಲಿ ಸಿನಿಮಾ ನೋಡಲು ದರ್ಶನ್ ಆಗಮಿಸಿದ್ದರು

ದರ್ಶನ್ ಕೆಂಪು ಬಣ್ಣದ ಟೀ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕನ್ನಡಕ ಧರಿಸಿದ್ದರು. ಇನ್ನು ಕೈಯಲ್ಲಿ ದುಬಾರಿ ವಾಚ್ ಕೂಡ ಇತ್ತು. ಸದ್ಯ ಅಭಿಮಾನಿಗಳು ದರ್ಶನ್ ತೊಟ್ಟಿದ್ದ ಟೀಶರ್ಟ್ ಹಾಗೂ ಕೈಯಲ್ಲಿದ್ದ ವಾಚ್ ದರ ಎಷ್ಟು ಎಂದು ಊಹಿಸುತ್ತಿದ್ದಾರೆ. ಆನ್ಲೈನ್ನಲ್ಲಿ ಅದರ ಬೆಲೆ ಎಷ್ಟು ಎಂದು ಹುಡುಕಾಡುತ್ತಿದ್ದಾರೆ. ಈ ಹಿಂದೆ ಕೂಡ ದುಬಾರಿ ಟೀ-ಶರ್ಟ್, ಪ್ಯಾಂಟ್ ಧರಿಸಿ ದರ್ಶನ್ ಕಾಣಿಸಿಕೊಂಡಿದ್ದರು.

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ದರ್ಶನ್. ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ನಡೆಸುತ್ತಾರೆ. ದುಬಾರಿ ಕಾರುಗಳು ಅವರ ಬಳಿಯಿದೆ. ಇನ್ನು ಆತ್ಮೀಯ ಸ್ನೇಹಿತರು ಕೂಡ ಅವರಿಗೆ ಬೆಲೆ ಬಾಳುವ ಉಡುಗೊರೆಗಳನ್ನು ಕೊಡುತ್ತಿರುತ್ತಾರೆ. ಹಾಗಾಗಿ ಭಾರೀ ವೆಚ್ಚದ ಬಟ್ಟೆ, ಆಕ್ಸಸರೀಸ್ ಧರಿಸುತ್ತಾರೆ. ಅಂದಹಾಗೆ ‘ರಾಯಲ್’ ಸಿನಿಮಾ ನೋಡಲು ಬಂದಿದ್ದ ವೇಳೆ ದರ್ಶನ್ 30 ಸಾವಿರ ರೂ. ಬೆಲೆ ಟೀ-ಶರ್ಟ್, 34 ಲಕ್ಷ ರೂ. ವಾಚ್ ಧರಿಸಿದ್ದರು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *