Nayanthara ಹಾಗೂ Vignesh Shivan ಜೋಡಿಯನ್ನು ನೋಡಿದ ಅನೇಕರಿಗೆ ಬೇಸರ ಹೀಗೆ ಹೇಳಿದ್ರಾ..?

Nayanthara ಹಾಗೂ Vignesh Shivan ಜೋಡಿಯನ್ನು ನೋಡಿದ ಅನೇಕರಿಗೆ ಬೇಸರ ಹೀಗೆ ಹೇಳಿದ್ರಾ..?

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ವಿಚ್ಛೇದನದ ಸುಳ್ಳು ಸುದ್ದಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನಯನತಾರಾ ಪೋಸ್ಟ್ ಹಾಕಿದ್ದಾರೆ ಎಂಬುದು ಸುಳ್ಳು ಎಂದು ತಿಳಿದುಬಂದಿದೆ. ಈ ವದಂತಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಜೋಡಿ, ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕೆಲವು ಸೆಲೆಬ್ರಿಟಿ ಜೋಡಿಗಳನ್ನು ನೋಡಿದರೆ ಅಭಿಮಾನಿಗಳಿಗೆ ಇಷ್ಟ ಆಗೋದಿಲ್ಲ. ಇಂಥ ಸಂದರ್ಭದಲ್ಲಿ ಕೆಟ್ಟ ಕೆಟ್ಟದಾಗಿ ಕಮೆಂಟ್ ಹಾಕುವ ಕೆಲಸ ಮಾಡುತ್ತಾರೆ. ಇನ್ನೂ ಕೆಲವೊಮ್ಮೆ ಫೇಕ್ ಸುದ್ದಿ ಹರಡುತ್ತಾರೆ. ಈಗ ನಯನತಾರಾ ವಿಚಾರದಲ್ಲೂ ಹಾಗೆಯೇ ಆಗಿದೆ. ಅವರು ಪತಿ ಬಗ್ಗೆ ಅಸಮಾಧಾನವಾಗಿ ಪೋಸ್ಟ್ ಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ವಿಚಾರಕ್ಕೆ ಅವರು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿಯನ್ನು ನೋಡಿದ ಅನೇಕರಿಗೆ ಬೇಸರ ಇದೆ. ನಯನತಾರಾ ಸೂಪರ್ಸ್ಟಾರ್. ಆದರೆ, ವಿಘ್ನೇಶ್ ಆ ರೀತಿ ಅಲ್ಲ. ಅವರು ನಿರ್ದೇಶನ ಮಾಡಿದ್ದೇ ಕೆಲವು ಸಿನಿಮಾಗಳು. ಈಗ ಅವರಿಗೆ ಸರಿಯಾದ ಆಫರ್ ಕೂಡ ಸಿಗುತ್ತಿಲ್ಲ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಯೋರ್ವ ಪೋಸ್ಟ್ ಒಂದನ್ನು ಮಾಡಿದ್ದ. ಇದು ನಯನತಾರಾ ಇನ್ಸ್ಟಾಗ್ರಾಮ್ ಸ್ಟೇಟಸ್ ಎಂದು ಕೂಡ ಹೇಳಿಕೊಂಡಿದ್ದ.

ಈ ಪೋಸ್ಟ್ನಲ್ಲಿ ನಯನತಾರಾ ಅವರು, ‘ಅವಿವೇಕಿಯನ್ನು ಮದುವೆ ಆಗೋದು ನಿಮ್ಮ ತಪ್ಪಲ್ಲ. ಅವನ ತಪ್ಪುಗಳಿಗೆ ನೀವು ಜವಾಬ್ದಾರರಲ್ಲ’ ಎಂದು ಬರೆದಿತ್ತು. ಇದನ್ನು ನಯನತಾರಾ ಅವರೇ ಹೇಳಿದರು ಎಂದು ಹೇಳಲಾಗಿತ್ತು. ಆದರೆ, ಇದು ಫೇಕ್ ಸುದ್ದಿ ಅನ್ನೋದು ಬಳಿಕ ಗೊತ್ತಾಗಿದೆ.

ಇದಾದ ಬಳಿಕ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಬೇರೆ ಆಗುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕೆ ನಯನತಾರಾ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಒಂದು ಕಡೆ ಮಲಗಿ ಎತ್ತಲೋ ನೋಡುತ್ತಿರುವ ರೀತಿಯಲ್ಲಿ ಫೋಟೋ ಇದೆ. ‘ನಮ್ಮ ಬಗ್ಗೆ ಕೇಳಿ ಬರುವ ವದಂತಿ ನೋಡಿದ ನಂತರ ನಮ್ಮ ರಿಯಾಕ್ಷನ್’ ಎಂದು ನಯನತಾರಾ ಹೇಳಿದ್ದಾರೆ.

Leave a Reply

Your email address will not be published. Required fields are marked *