ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಡಿಜೆ ವ್ಯವಸ್ಥೆಯ ಸೀಜ್ ಮಾಡಲು ಮುಂದಾದ ಪೊಲೀಸರು, ಈಗಾಗಲೇ ವಿವಾದವನ್ನು ಹುಟ್ಟಿಸಿದ್ದಾರೆ. ಗಣೇಶ ವಿಸರ್ಜನೆಗೆ ಸಿದ್ಧವಾಗಿದ್ದ ಡಿಜೆ, ಪೊಲೀಸರು ಏಕಕಾಲದಲ್ಲಿ ಜಪ್ತಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು, ಗಣೇಶ ಶೋಭಾಯಾತ್ರೆಗೆಂದು ತರಲಾಗಿದ್ದ ಡಿಜೆ ವಾಹನವನ್ನು ಸೀಜ್ ಮಾಡಿದ್ದು, ಡೀಸೆಲ್ ಟ್ಯಾಂಕ್ ಗೆ ನೀರು ಸುರಿದು ಆನ್ ಆಗದಂತೆ ಮಾಡಿದ್ದಾರ ಎಂದು ವೇದಿಕೆಯು ಆರೋಪಿಸಿದೆ.
ಇತ್ತೀಚೆಗೆ ಈ ಪ್ರಕರಣ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿ ಸೂಚಿಸಿ, ಚಳ್ಳಕೆರೆ ಗೇಟ್ ಬಳಿ ಪ್ರತಿಭಟನೆಯೂ ನಡೆದಿದೆ. ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ್ ಅವರ ಪುತ್ರ ಉಮೇಶ್ ಕಾರಜೋಳ್ ಮತ್ತು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಪುತ್ರ ಸಿದ್ದಾರ್ಥ ಅವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಡಿವೈಎಸ್ಪಿ ಪಿ.ಕೆ.ದಿನಕರ್, ಪ್ರತಿಭಟನಾಕಾರರನ್ನು ಗರಂ ಆಗಿ ಹೇಳಿದ್ದಾರೆ. “ನಿಮ್ಮ ದೇಶಭಕ್ತಿ ನೋಡಿದ್ದೇನೆ, ಸೈಡಿಗೆ ಸರಿಯಿರಿ!” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH