ನಮ್ಮ ಆರೋಗ್ಯಕ್ಕೆ ಹಾಲು ಬಹಳ ಒಳ್ಳೆಯದು. ಇದನ್ನು ಕುಡಿಯುವುದರಿಂದ ದೇಹವು ಆರೋಗ್ಯವಾಗಿರುತ್ತದೆ. ಮಾತ್ರವಲ್ಲ ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕೂಡ ಇರುತ್ತವೆ. ಆದರೆ ನಿಮಗೆ ತಿಳಿದಿರಲಿ ಇವುಗಳನ್ನು ಸರಿಯಾಗಿ ಸೇವಿಸಿದಾಗ ಮಾತ್ರ ಅವು ನಮ್ಮ ದೇಹಕ್ಕೆ ಪ್ರಯೋಜನಗಳನ್ನು ನೀಡುತ್ತವೆ. ಇಲ್ಲವಾದಲ್ಲಿ ಇವು ಪ್ರಯೋಜನಕ್ಕಿಂತ ಹಾನಿಕಾರಕವೇ ಆಗಬಹುದು. ಹಾಗಾದರೆ ಹಾಲು ಕುಡಿಯುವುದಕ್ಕೆ ಯಾವ ಸಮಯ ಒಳ್ಳೆಯದು? ಯಾವ ಆಹಾರ ಹಾಲಿಗೆ ವಿರುದ್ಧ ಎಂಬುದನ್ನು ತಿಳಿದುಕೊಳ್ಳಿ.
ಹಾಲು ಭೂಮಿ ಮೇಲೆ ಸಿಗುವ ಅಮೃತದಂತೆ. ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಕುಡಿಯುವುದರಿಂದ ದೇಹ ಆರೋಗ್ಯವಾಗಿರುತ್ತದೆ. ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ, ಮಾತ್ರವಲ್ಲ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕವಿದೆ. ಇವು ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು. ಹಾಲು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುವುದಲ್ಲದೆ, ದುರ್ಬಲ ಮೂಳೆಗಳಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೆಚ್ಚುವರಿಯಾಗಿ, ಇದರಲ್ಲಿ ಪ್ರೋಟೀನ್ ಹೇರಳವಾಗಿದೆ. ಇದು ನಮ್ಮ ದೇಹವು ಪ್ರೋಟೀನ್ ಪಡೆಯಲು ಕಾರಣವಾಗುತ್ತದೆ. ಆದರೆ ನಿಮಗೆ ತಿಳಿದಿರಲಿ ಇವುಗಳನ್ನು ಸರಿಯಾಗಿ ಸೇವಿಸಿದಾಗ ಮಾತ್ರ ಅವು ನಮ್ಮ ದೇಹಕ್ಕೆ ಪ್ರಯೋಜನಗಳನ್ನು ನೀಡುತ್ತವೆ. ಇಲ್ಲವಾದಲ್ಲಿ ಇವು ಪ್ರಯೋಜನಕ್ಕಿಂತ ಹಾನಿಕಾರಕವೇ ಆಗಬಹುದು. ಹಾಗಾದರೆ ಹಾಲು ಕುಡಿಯುವುದಕ್ಕೆ ಯಾವ ಸಮಯ ಒಳ್ಳೆಯದು? ಯಾವ ಆಹಾರ ಹಾಲಿಗೆ ವಿರುದ್ಧ ಎಂಬುದನ್ನು ತಿಳಿದುಕೊಳ್ಳಿ.
ಹಾಲಿನಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ರೋಗಗಳನ್ನು ದೂರವಿಡುತ್ತವೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಯಾವುದೇ ವ್ಯಕ್ತಿಗಾಗಲಿ ಹಾಲು ಕುಡಿಯುವುದರಿಂದ ತ್ವರಿತ ಶಕ್ತಿ ದೊರೆಯುತ್ತದೆ ಮತ್ತು ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಆದರೆ ಹಾಲನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಈ ಪ್ರಯೋಜನಗಳನ್ನು ಆನಂದಿಸಬಹುದಾಗಿದೆ. ಇಲ್ಲದಿದ್ದರೆ, ಇದರಿಂದ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ತಜ್ಞರು ಹಾಲು ಕುಡಿದ ನಂತರ ಕೆಲವು ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ. ಹಾಗಾದರೆ ಅವು ಯಾವುವು? ಯಾಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
ಮಸಾಲೆಯುಕ್ತ ಆಹಾರ
ಹಾಲು ಕುಡಿದ ನಂತರ ಅನೇಕ ಜನರು ಚಿಪ್ಸ್, ಖಾರದ ಬಿಸ್ಕತ್ತುಗಳು ಮತ್ತು ಜಂಕ್ ಫುಡ್ ತಿನ್ನುತ್ತಾರೆ. ನೀವು ಕೂಡ ಇದೆ ರೀತಿ ತಕ್ಷಣ ಈ ಅಭ್ಯಾಸವನ್ನು ನಿಲ್ಲಿಸುವುದು ಒಳ್ಳೆಯದು. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಹಾಲು ಕುಡಿದ ತಕ್ಷಣ ಅಥವಾ ಹಾಲಿನ ಜೊತೆಗೆ ಉಪ್ಪು ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸಿಬಾರದು. ಇವು ಹೊಟ್ಟೆಗೆ ಸಂಬಂಧಿಸಿದ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಹಾಲು ಕುಡಿದ ತಕ್ಷಣ ಇಂತಹ ತಿಂಡಿಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು.
ಬೆಲ್ಲ ಬೆರೆಸಿದ ಹಾಲು
ಸಾಮಾನ್ಯವಾಗಿ ಬೆಲ್ಲ ಬೆರೆಸಿದ ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಹಲವರ ಅಭಿಪ್ರಾಯ. ವಾಸ್ತವದಲ್ಲಿ ಬೆಲ್ಲ ಬೆರೆಸಿದ ಹಾಲು ಒಳ್ಳೆಯದು. ಆದರೆ ಆ ಬೆಲ್ಲ ಸರಿಯಾದ ಗುಣಮಟ್ಟದ್ದಾಗಿರಬೇಕು ಮತ್ತು ತಾಜಾವಾಗಿರಬೇಕು. ಅದೇ ರೀತಿ, ಕೆಲವು ಬೆಲ್ಲದಲ್ಲಿ ಉಪ್ಪಿನಾಂಶ ಅಧಿಕವಾಗಿರುತ್ತದೆ. ಈ ರೀತಿ ಬೆಲ್ಲವನ್ನು ಹಾಲಿನ ಜೊತೆ ಸೇರಿಸುವುದು ಒಳ್ಳೆಯದಲ್ಲ. ಹಾಗೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ಸಿಟ್ರಸ್ ಹಣ್ಣುಗಳು
ಕಿತ್ತಳೆ ಮತ್ತು ನಿಂಬೆ ಹಣ್ಣಿನಂತಹ ಸಿಟ್ರಸ್ ಹಣ್ಣುಗಳನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬೇಡಿ. ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆಮ್ಲವಿದ್ದು, ಇದು ಹಾಲಿನಲ್ಲಿರುವ ಪ್ರೋಟೀನ್ ಅನ್ನು ಹೆಪ್ಪುಗಟ್ಟುವಂತೆ ಮಾಡುತ್ತದೆ, ಇದರಿಂದಾಗಿ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಇದು ಗ್ಯಾಸ್, ಉಬ್ಬುವುದು ಮತ್ತು ಹೊಟ್ಟೆ ಸೆಳೆತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಮಕ್ಕಳು ಮತ್ತು ವಯಸ್ಕರು ಹಾಲು ಕುಡಿದ ತಕ್ಷಣ ಸಿಟ್ರಸ್ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಯಾವುದೇ ರೀತಿಯ ಹಣ್ಣಾಗಲಿ ಹಾಲು ಕುಡಿದ 2 ರಿಂದ 3 ಗಂಟೆಗಳ ನಂತರ ಮಾತ್ರ ಸೇವನೆ ಮಾಡಬೇಕು.
ಮೀನು
ಸಾಮಾನ್ಯವಾಗಿ ಮೀನಿನಲ್ಲಿ ಆರೋಗ್ಯ ಪ್ರಯೋಜನಗಳು ಹೇರಳವಾಗಿರುತ್ತದೆ. ಆದರೆ ಹಾಲು ಮತ್ತು ಮೀನನನ್ನು ಒಟ್ಟಿಗೆ ಸೇವಿಸಬಾರದು. ಇದು ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಕಲ್ಲಂಗಡಿ
ಹಾಲು ಕುಡಿದ ತಕ್ಷಣ ಕಲ್ಲಂಗಡಿ ತಿನ್ನುವುದು ಒಳ್ಳೆಯದಲ್ಲ. ಹಾಲಿನಲ್ಲಿರುವ ಪ್ರೋಟೀನ್ ಕಲ್ಲಂಗಡಿಯಲ್ಲಿರುವ ಆಮ್ಲದೊಂದಿಗೆ ಸೇರಿಕೊಂಡಾಗ ಅದು ಹೆಪ್ಪುಗಟ್ಟುತ್ತದೆ. ಇದು ಹೊಟ್ಟೆ ನೋವು, ಅಜೀರ್ಣ ಮತ್ತು ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಹಾಲು ಕುಡಿದ ತಕ್ಷಣ ಸೇವಿಸಬಾರದ ಆಹಾರಗಳಾಗಿವೆ.
For More Updates Join our WhatsApp Group :
