ಖರ್ಜೂರ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ, ನಮ್ಮ ದೇಹಕ್ಕೂ ಒಳ್ಳೆಯದು. ಇವುಗಳನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ನಮಗೆ ಗೊತ್ತಿಲ್ಲದಂತೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಮಾತ್ರವಲ್ಲ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳು ಬರುವ ಅಪಾಯ ಕೂಡ ಕಡಿಮೆಯಾಗುತ್ತದೆ. ಅಂತಹ ಶಕ್ತಿ ಈ ಖರ್ಜೂರದಲ್ಲಿದೆ. ಹಾಗಾದರೆ ದಿನನಿತ್ಯ ತಪ್ಪದೆ ಒಂದು ಖರ್ಜೂರ ತಿಂದರೆ ಏನೆಲ್ಲಾ ಲಾಭಗಳಿವೆ? ಈ ಅಭ್ಯಾಸ ಯಾರಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಖರ್ಜೂರ ರುಚಿಕರವಾಗಿರುವುದಲ್ಲದೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಬಹುತೇಕ ಎಲ್ಲರಿಗೂ ತಿಳಿದಿರುವ ವಿಚಾರ. ಪ್ರತಿದಿನ ಖರ್ಜೂರ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಅದರಲ್ಲಿಯೂ ನೆನೆಸಿಟ್ಟ ಖರ್ಜೂರವನ್ನು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಖರ್ಜೂರ ನಮ್ಮ ದೇಹಕ್ಕೆ ಅಗತ್ಯವಾಗಿರುವ ಅನೇಕ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ. ನಿಮಗೆ ಗೊತ್ತಾ? ಪ್ರತಿನಿತ್ಯ ಒಂದೇ ಒಂದು ಖರ್ಜೂರವನ್ನು ಸೇವನೆ ಮಾಡಿದರೂ ಸಾಕು ನಮ್ಮ ದೇಹ ಆರೋಗ್ಯವಾಗಿರುತ್ತೆ ಮಾತ್ರವಲ್ಲ, ಕ್ಯಾನ್ಸರ್ ನಂತಹ ಕಾಯಿಲೆಗಳು ಬರುವ ಅಪಾಯ ಕೂಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾದರೆ ದಿನನಿತ್ಯ ತಪ್ಪದೆ ಒಂದು ಖರ್ಜೂರ ತಿಂದರೆ ಏನೆಲ್ಲಾ ಲಾಭಗಳಿವೆ? ಈ ಅಭ್ಯಾಸ ಯಾರಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಖರ್ಜೂರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳು:
• ಖರ್ಜೂರದಲ್ಲಿ ಕಂಡುಬರುವ ಪೋಷಕಾಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಅಧಿಕ ರಕ್ತದೊತ್ತಡ ಇರುವವರು ಇವುಗಳನ್ನು ತಿನ್ನುವುದು ತುಂಬಾ ಒಳ್ಳೆಯದು.
• ರಕ್ತ ಕೆಡಿಮೆ ಇರುವವರು ಕೂಡ ಪ್ರತಿದಿನ ತಪ್ಪದೆ ಖರ್ಜೂರ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಏಕೆಂದರೆ ಇದು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
• ಖರ್ಜೂರದಲ್ಲಿ ಕಂಡುಬರುವಂತಹ ಜೀವಸತ್ವಗಳು ಮೂಳೆಗಳನ್ನು ಬಲಪಡಿಸುತ್ತವೆ. ಮಾತ್ರವಲ್ಲ ಖರ್ಜೂರವನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗೆ ಸಂಬಂಧಿಸಿದ ಕಾಯಿಲೆಗಳನ್ನು ನಿವಾರಿಸಬಹುದು.
• ಖರ್ಜೂರದಲ್ಲಿರುವ ಹೆಚ್ಚಿನ ನಾರಿನ ಅಂಶವು ಮಲಬದ್ಧತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
• ಖರ್ಜೂರವನ್ನು ನಿಯಮಿತವಾಗಿ ತಿನ್ನುವ ಜನರಿಗೆ ಹೃದಯ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಖರ್ಜೂರದಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
• ಖರ್ಜೂರದಲ್ಲಿರುವ ಪೊಟ್ಯಾಸಿಯಮ್ ಮತ್ತು ವಿಟಮಿನ್ಗಳ ಜೊತೆಗೆ ಫೈಬರ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
• ಖರ್ಜೂರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಖರ್ಜೂರವನ್ನು ತಿನ್ನುವುದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
• ಖರ್ಜೂರದಲ್ಲಿರುವ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತವೆ.
• ಪ್ರತಿದಿನ ಖರ್ಜೂರವನ್ನು ತಿನ್ನುವುದರಿಂದ ಕ್ಯಾನ್ಸರ್ನಂತಹ ಕಾಯಿಲೆಗಳು ಬರುವ ಅಪಾಯವನ್ನು ಕಡಿಮೆ ಮಾಡಬಹುದು.