ಮಾರ್ಚ್ 8-10ರಂದು ಟ್ರೇಲರ್? ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಯಶ್ ನಟನೆಯ‘ಟಾಕ್ಸಿಕ್’ ಸಿನಿಮಾದ ಟೀಸರ್ ರಿಲೀಸ್ ಆಗಿ ಹಲವು ದಿನಗಳು ಕಳೆದರೂ ಅದರ ಬಗ್ಗೆ ಶುರುವಾದ ಚರ್ಚೆ ನಿಂತಿಲ್ಲ. ಅನೇಕರು ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್ನಲ್ಲಿ ಯಶ್ ಹೆಚ್ಚಿನ ವಿಷಯವನ್ನು ಬಿಟ್ಟುಕೊಟ್ಟಿಲ್ಲ. ಕೆಲ ಬೋಲ್ಡ್ ದೃಶ್ಯಗಳು ಚರ್ಚೆ ಹುಟ್ಟುಹಾಕಿದ್ದವು. ಟ್ರೇಲರ್ ರಿಲೀಸ್ಗೆ ಅಭಿಮಾನಿಗಳು ಕಾದಿದ್ದಾರೆ. ಇದಕ್ಕಾಗಿ ಮತ್ತಷ್ಟು ದಿನ ಕಾಯಬೇಕಾಗಿ ಬರಬಹುದು ಎಂದು ಹೇಳಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.
‘ಟಾಕ್ಸಿಕ್’ ಸಿನಿಮಾ ರಿಲೀಸ್ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈದ್ ಹಾಗೂ ಯುಗಾದಿ ಪ್ರಯುಕ್ತ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್ಗೆ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಸಿನಿಮಾ ಟೀಸರ್ ಈಗಾಗಲೇ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ಕೆಲವರು ಟೀಸರ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆಯಾದರೂ ಇದರಿಂದ ಚಿತ್ರಕ್ಕೆ ಪ್ರಚಾರ ಆಗಿದೆ. ಈಗ ಟ್ರೇಲರ್ ಮೂಲಕ ಜನರ ಎದುರು ಬರಲು ಯಶ್ ರೆಡಿ ಆಗುತ್ತಿದ್ದಾರೆ ಎಂದು ವರದಿ ಆಗಿದೆ.
ಮಾರ್ಚ್ 8-10ನೇ ತಾರಿಕಿನ ಸಮಯದಲ್ಲಿ ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಮಾಡುವ ಆಲೋಚನೆ ‘ಟಾಕ್ಸಿಕ್’ ತಂಡಕ್ಕೆ ಇದೆಯಂತೆ. ಟ್ರೇಲರ್ ಅದ್ದೂರಿಯಾಗಿ, ಗಮನ ಸೆಳೆಯುವ ರೀತಿಯಲ್ಲಿ ಇದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾಗೆ ಬರುತ್ತಾರೆ. ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್. ಅದಕ್ಕೂ 8-10 ದಿನ ಮೊದಲು ಟ್ರೇಲರ್ ರಿಲೀಸ್ ಮಾಡಿದರೆ ಟಾಕ್ ಜೋರಾಗಿಯೇ ಇರುತ್ತದೆ ಎಂಬ ಊಹೆ ಪ್ರೇಕ್ಷಕರದ್ದು.
‘ಟಾಕ್ಸಿಕ್’ ಸಿನಿಮಾದ ಟೀಸರ್ನಲ್ಲಿ ಯಶ್ ಅವರನ್ನು ಮಾತ್ರ ತೋರಿಸಲಾಗಿದೆ. ಈ ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕರಿದ್ದಾರೆ. ಅವರೆಲ್ಲರನ್ನೂ ಟ್ರೇಲರ್ನಲ್ಲಿ ಪರಿಚಯೋ ಸಾಧ್ಯತೆ ಇದೆ. ಒಂದಷ್ಟು ಮಾಸ್ ಡೈಲಾಗ್ಗಳು ಇದ್ದರಂತೂ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ‘ಟಾಕ್ಸಿಕ್’ ಚಿತ್ರಕ್ಕೆ ದೊಡ್ಡ ಎದುರಾಳಿ ರೆಡಿ ಆಗಿದೆ. ಬಾಲಿವುಡ್ನ ‘ಧುರಂಧರ್ 2’ ಇದೇ ಸಮಯದಲ್ಲಿ ತೆರೆಗೆ ಬರುತ್ತಿದೆ.
For More Updates Join our WhatsApp Group :




