ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಜರ್ಮನಿ ಜನಪ್ರಿಯ ಆಯ್ಕೆಯಾಗಿದೆ ಇದರ ಹಿಂದಿನ ಕಾರಣವೇನು ಗೊತ್ತಾ. ಜರ್ಮನಿಯಲ್ಲಿ ವಿದೇಶಿ ವಿದ್ಯರ್ಥಿಗಳ ಪೈಕಿ, ಭಾರತೀಯ ವಿದ್ಯಾರ್ಥಿಗಳ ದೊಡ್ಡ ಗುಂಪೆ ಇದೆ. ಡ್ಯೂಷರ್ ಅಕಾಡೆಮಿಶರ್ ಆಸ್ಟಾಸ್ಚ್ಡಿಯನ್ಸ್ಟ್ (ಡಿಎಎಡಿ) ಪ್ರಕಾರ ಕಳೆದ ವರ್ಷಕ್ಕಿಂತ ಭಾರತೀಯ ವಿದ್ಯಾರ್ಥಿಗಳಲ್ಲಿ 15.1% ಹೆಚ್ಚಳವಾಗಿದೆ. ಈ ಹೆಚ್ಚಳಕ್ಕೆ ಒಂದು ಕಾರಣವೆಂದರೆ ಜರ್ಮನಿಯ ಕೈಗೆಟುಕುವ ಟ್ಯಶನ್ ಅಥವ ಬೋಧನಾ ಶುಲ್ಕ. ಜರ್ಮನಿಯಲ್ಲಿನ ಜೀವನ ವೆಚ್ಚವು ವಿದ್ಯಾರ್ಥಿಗಳಿಗೆ ಸಮಂಜಸವಾಗಿದೆ. ವೆಚ್ಚಗಳನ್ನು ಭರಿಸಲು ಸಹಾಯ ಮಾಡಲು ಅನೇಕ ವಿದ್ಯಾರ್ಥಿವೇತನಗಳು ಜರ್ಮನಿಯಲ್ಲಿ ಲಭ್ಯವಿದೆ. ಇನ್ನು ಜರ್ಮನಿಯು ಅತ್ಯುತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾದ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳವರೆಗೆ ಪಾರ್ಟ್ ಟೈಮ್ ಕೆಲಸ ಮಾಡಬಹುದು. ಇದೆಲ್ಲದರ ಜೋತೆಗೆ ಜರ್ಮನಿಯಲ್ಲಿ ಅಧ್ಯಯನ ಮಾಡಲು ವೀಸಾ ಪ್ರಕ್ರಿಯೆಯು ಸರಳವಾಗಿದೆ ಮತ್ತು ನ್ಯಾವಿಗೇಟ್ ಮಾಡಲು ಸುಲಭವಾಗಿದೆ.
ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ಜರ್ಮನಿಯನ್ನು ಏಕೆ ಆರಿಸಿಕೊಳ್ಳುತ್ತಿದ್ದಾರೆ ಗೊತ್ತಾ?
