ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೆರಳಿದ ಡಿಸಿಎಂ ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತೇಜ್ವಸಿ ಸೂರ್ಯ ‘ವೇಸ್ಟ್ ಮೆಟೀರಿಯಲ್’. ಆತನ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದಿದ್ದಾರೆ. ಸೂರ್ಯಗೆ ಇನ್ನೂ ಅನುಭವ ಇಲ್ಲ, ಇಡೀ ಪ್ರಪಂಚ ಎಲ್ಲಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.
ಸುರಂಗ ಮಾರ್ಗ ಬೇಡ ಎನ್ನಲು ಇವರು ಯಾರು? ಇವರು ಕೇಂದ್ರ ಸಚಿವರಾಗಿ ಅಥವಾ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿ, ಈ ದೇಶದಲ್ಲಿ ಸುರಂಗ ಮಾರ್ಗವೇ ಬೇಡ ಎಂದು ಹೇಳಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ. ಸೂರ್ಯ ಅವರ ಮಾತುಗಳು ‘ಖಾಲಿ ಟ್ರಂಕ್’ ಇದ್ದಂತೆ ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಸದ್ಯ 1.3 ಕೋಟಿ ವಾಹನಗಳಿವೆ. ಈ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆ ಮಾತ್ರವೇ ಸಂಪೂರ್ಣ ಪರಿಹಾರವಲ್ಲ ಎಂದು ಡಿಕೆಶಿ ವಾದಿಸಿದ್ದಾರೆ. ಎಲ್ಲರೂ ಕಾರು ಬಿಟ್ಟು ಮೆಟ್ರೋ, ಸರ್ಕಾರಿ ಬಸ್ ಅಥವಾ ಆಟೋದಲ್ಲಿ ಓಡಾಡಲು ಆಗುತ್ತದೆಯೇ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಅಥವಾ ಮಾಧ್ಯಮದವರು ಕ್ಯಾಮರಾ ಹಿಡಿದು ಸಾರ್ವಜನಿಕ ಸಾರಿಗೆಯಲ್ಲಿ ಬರಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಮೆಟ್ರೋ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ತಂದಿಲ್ಲ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ‘ನಿಮಗೆ ಅಧಿಕಾರ ಇತ್ತಲ್ಲ, ನೀವು ಏನು ಮಾಡಿದ್ದೀರಿ? ನಿಮ್ಮ ಸರ್ಕಾರ ಎಷ್ಟು ಕಂಬ ಹಾಕಿದೆ? ಎಷ್ಟು ಹಣ ತಂದಿದ್ದೀರಿ’ ಎಂದು ಸೂರ್ಯ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ. ಅಲ್ಲದೆ, ಮೆಟ್ರೋ ಯೋಜನೆಗೆ ಶೇ 11 ರಿಂದ 12 ರಷ್ಟು ಹಣವನ್ನು ರಾಜ್ಯ ಸರ್ಕಾರವೇ ನೀಡುತ್ತದೆ. ಭೂಸ್ವಾಧೀನದಂತಹ ಸವಾಲುಗಳೂ ಇವೆ ಎಂದು ವಿವರಿಸಿದ್ದಾರೆ.
For More Updates Join our WhatsApp Group :
