ಬೆಂಗಳೂರು: ‘ಭೀಮಾ ಸಿನಿಮಾದಲ್ಲಿ ಹಾಸ್ಯ ಪಾತ್ರ ನಿರ್ವಹಿಸಿದ್ದ ಜಾಕ್ ಅಲಿಯಾಸ್ ಪಳನಿ ಸ್ವಾಮಿ ಅವರಿಗೆ ಸೈಮಾ ಅವಾರ್ಡ್ ದೊರೆತಿದೆ. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ದುನಿಯಾ ವಿಜಯ್ ಅವರು ಆಯೋಜಕರ ವಿರುದ್ಧ ಕೋಪ ವ್ಯಕ್ತಪಡಿಸಿದ್ದನ್ನು ಜಾಕ್ ಬೆಂಬಲಿಸಿದ್ದಾರೆ.
ಜಾಕ್ ಪ್ರತಿಕ್ರಿಯೆಯಲ್ಲಿ“ಕನ್ನಡ ಕಲಾವಿದರಿಗೆ ಅವಾರ್ಡ್ ನೀಡುವಾಗ ಬೇರೆ ಭಾಷೆಯ ನಿರೂಪಕರು ಇದ್ದರು. ಅವರಿಗೆ ನಮ್ಮ ಬಗ್ಗೆ ಯಾವುದೇ ಅರಿವು ಇರಲಿಲ್ಲ. ಕನ್ನಡಿಗರಿಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲೇ ಪ್ರೇಕ್ಷಕರ ಹಾಜರಾತಿ ಕೂಡ ಕಡಿಮೆ ಇತ್ತು. ಇವುಗಳ ಕಾರಣಕ್ಕೆ ವಿಜಿ ಕೋಪಗೊಂಡರು. ಅವರ ಕೋಪದಲ್ಲಿ ತಪ್ಪೇನೂ ಇಲ್ಲ” ಎಂದು ಹೇಳಿದ್ದಾರೆ.
ಸೈಮಾ 2025 ಸಮಾರಂಭದಲ್ಲಿ ವಿಜಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ.
For More Updates Join our WhatsApp Group :