ಬೆಂಗಳೂರು: ಮೈಸೂರು ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ನೇಮಕಗೆ ಈಗ ರಾಜಕೀಯ ಹಾಗೂ ಧಾರ್ಮಿಕ ಒತ್ತಡಗಳು ಹೆಚ್ಚಾಗಿವೆ. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರದ ನಿರ್ಧಾರಕ್ಕೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಪ್ರತಾಪ್ ಸಿಂಹ ಆರೋಪಿಸಿದ್ದು, “ಬಾನು ಮುಷ್ತಾಕ್ ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ. ದಸರಾ ಉದ್ಘಾಟನಾ ಸಂಪ್ರದಾಯ ಧಾರ್ಮಿಕವಾಗಿದೆ. ಪುಷ್ಪಾರ್ಚನೆ, ವೇದಘೋಷದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಇಂತಹ ವ್ಯಕ್ತಿಯನ್ನು ಆಯ್ಕೆ ಮಾಡುವುದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ” ಎಂಬುದಾಗಿ ಹೇಳಿದ್ದಾರೆ.
ಇದೀಗ ಕೇವಲ ರಾಜಕೀಯವಲ್ಲ, ಮೈಸೂರು ರಾಜವಂಶದವರು ಸಹ ಈ ಆಯ್ಕೆ ವಿರೋಧಿಸಿದ್ದು, “ದಸರಾ ಸಂಸ್ಕೃತಿಯ ಶುದ್ಧತೆಗೆ ಧಕ್ಕೆ ಆಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಹಿಂದೂಪರ ಸಂಘಟನೆಗಳು, ರಾಷ್ಟ್ರೀಯ ರಕ್ಷಣಾ ಸೇನೆ ಸದಸ್ಯರು ಕೂಡ ಬಾನು ಮುಷ್ತಾಕ್ ಅವರನ್ನು ಭೇಟಿ ಮಾಡಿ, ದಸರಾ ಉದ್ಘಾಟನೆಗಿರುವ ಆಹ್ವಾನವನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ.
ಆದರೆ, ಬಾನು ಮುಷ್ತಾಕ್ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ, “ದಸರಾ ಎಲ್ಲರ ಮನೆಯ ಹಬ್ಬ. ನಾನು ಈ ಆಹ್ವಾನಕ್ಕೆ ಧನ್ಯವಾದಗಳಿಸುತ್ತೇನೆ” ಎಂದಿದ್ದಾರೆ.
For More Updates Join our WhatsApp Group :