ಬೆಂಗಳೂರು: ಮೈಸೂರು ದಸರಾ ಕನ್ನಡ ನಾಡಿನ ಹಬ್ಬವಾಗಿದೆ. ಮೈಸೂರು ದಸರಾಕ್ಕೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಅತಿಥಿಯಾಗಿ ಸರ್ಕಾರ ಆಹ್ವಾನಿಸಿದೆ. ಯಾರಿಗೆ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲವೋ, ಯಾರಿಗೆ ಮೂರ್ತಿ ಪೂಜೆ ಮೇಲೆ ನಂಬಿಕೆ ಇಲ್ಲವೋ ಅವರು ದಸರಾ ಉದ್ಘಾಟನೆಗೆ ಬಂದು ಏನು ಮಾಡುತ್ತಾರೆ. ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಲೇಖಕಿ ಬಾನು ಮುಷ್ತಾಕ್ ಚಾಮುಂಡಿ ಬೆಟ್ಟ ಹತ್ತಬಾರದು. ಅವರು ದೇವರಿಗೆ ಪುಷ್ಪಾರ್ಚನೆ ಮಾಡಲ್ಲ ಅಂತ ಭಾವಿಸುತ್ತೇನೆ. ಅವರು ಕಾರ್ಯಕ್ರಮದಿಂದ ಹೊರಹೋಗಬೇಕೆಂದು ಮನವಿ ಮಾಡುವೆ. ಅವರಿಗೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆಯಾ ಹೇಳಲಿ. ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ರೆ ಪುಷ್ಪಾರ್ಚನೆಗೆ ನಮ್ಮ ವಿರೋಧವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೇಖಕಿ ಬಾನು ಮುಷ್ತಾಕ್ ನಮ್ಮ ಭುವನೇಶ್ವರಿ ದೇವಿಯನ್ನು ಒಪ್ಪಲ್ಲ. ಹಾಗಾದರೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೇಗೆ ಒಪ್ಪುತ್ತಾರೆ. ದಸರಾ ಕೇವಲ ಸಾಂಸ್ಕೃತಿಕ ಉತ್ಸವ ಅಲ್ಲ ಧಾರ್ಮಿಕ ಉತ್ಸವವಾಗಿದೆ.
ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲ್ಲ ಅಂತ ಭಾವಿಸುತ್ತೇನೆ. ಅವರು ಕಾರ್ಯಕ್ರಮದಿಂದ ಹೊರಗೆ ಉಳಿಯಬೇಕು ಎಂದು ಮನವಿ ಮಾಡುತ್ತೇನೆ. ಎಲ್ಲ ಭಕ್ತಾದಿಗಳು ವಿರೋಧ ಮಾಡುತ್ತೇವೆ. ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡೇಶ್ವರಿ ದೇವಿ ಮೇಲೆ ನಂಬಿಕೆ ಇದೆಯಾ ಹೇಳಲಿ. ನಂಬಿಕೆ ಇದ್ರೆ ಬನ್ನಿ, ನಮ್ಮ ವಿರೋಧ ಇಲ್ಲ. ಯಾವುದೇ ವಿಚಾರಕ್ಕೆ ನಮ್ಮ ವಿರೋಧ ಇಲ್ಲ. ಜಾತ್ಯಾತೀತೆಯ ಅರ್ಥ ಹಿಂದು ಧರ್ಮಕ್ಕೆ ವಿರೋಧ ಮಾಡು ಎಂಬುವುದಲ್ಲ. ಮೈಸೂರು ದಸರಾ ಉದ್ಘಾಟನೆಯಿಂದ ಬಾನು ಮುಷ್ತಾಕ್ ಅವರನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
For More Updates Join our WhatsApp Group :