ಹುಬ್ಬಳ್ಳಿ: ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಪಶ್ಚಿಮ ರೈಲ್ವೆ ಕರ್ನಾಟಕದ ಪ್ರಮುಖ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ನಿರ್ವಹಣೆಗೆ ಮುಂದಾಗಿದೆ. ಈ ವಿಶೇಷ ಎಕ್ಸ್‌ಪ್ರೆಸ್‌ಗಳು ಹುಬ್ಬಳ್ಳಿ–ಯಶವಂತಪುರ, ಯಶವಂತಪುರ–ವಿಜಯಪುರ, ಹಾಗೂ ವಿಜಯಪುರ–ಎಸ್‌ಎಂವಿಟಿ ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿವೆ.
ಇದು ಹಬ್ಬದ ಪ್ರಯಾಣದ ಯೋಜನೆ ಮಾಡುವವರಿಗೆ ಅತೀವ ಉಪಯುಕ್ತ.
ವಿಶೇಷ ರೈಲುಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಗಳು:
07379 – ಎಸ್ಎಸ್ಎಸ್ ಹುಬ್ಬಳ್ಳಿ – ಯಶವಂತಪುರ ಒನ್ ವೇ ಎಕ್ಸ್ಪ್ರೆಸ್ (ಸೆಪ್ಟೆಂಬರ್ 30)
- ಹೊರಡುವುದು: ಮಧ್ಯಾಹ್ನ 12:00 @ ಎಸ್‌ಎಸ್‌ಎಸ್ ಹುಬ್ಬಳ್ಳಿ
- ತಲುಪುವುದು: ರಾತ್ರಿ 08:15 @ ಯಶವಂತಪುರ
- ನಿಲ್ದಾಣಗಳು: ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ, ತುಮಕೂರು
06277 – ಯಶವಂತಪುರ → ವಿಜಯಪುರ ಎಕ್ಸ್ಪ್ರೆಸ್ ಸ್ಪೆಷಲ್ (ಸೆಪ್ಟೆಂಬರ್ 30)
- ಹೊರಡುವುದು: ರಾತ್ರಿ 09:50 @ ಯಶವಂತಪುರ
- ತಲುಪುವುದು: ಮರುದಿನ ಬೆಳಿಗ್ಗೆ 09:30 @ ವಿಜಯಪುರ
06278 – ವಿಜಯಪುರ → ಎಸ್‌ಎಂವಿಟಿ ಬೆಂಗಳೂರು (ಅಕ್ಟೋಬರ್ 1)
- ಹೊರಡುವುದು: ಸಂಜೆ 05:30 @ ವಿಜಯಪುರ
- ತಲುಪುವುದು: ಮರುದಿನ ಬೆಳಿಗ್ಗೆ 06:40 @ ಎಸ್‌ಎಂವಿಟಿ ಬೆಂಗಳೂರು
06279 – ಯಶವಂತಪುರ → ವಿಜಯಪುರ ಎಕ್ಸ್ಪ್ರೆಸ್ ಸ್ಪೆಷಲ್ (ಅಕ್ಟೋಬರ್ 2)
- ಹೊರಡುವುದು: ಸಂಜೆ 07:40 @ ಯಶವಂತಪುರ
- ತಲುಪುವುದು: ಮರುದಿನ ಬೆಳಿಗ್ಗೆ 07:45 @ ವಿಜಯಪುರ
06280 – ವಿಜಯಪುರ → ಎಸ್‌ಎಂವಿಟಿ ಬೆಂಗಳೂರು (ಅಕ್ಟೋಬರ್ 3)
- ಹೊರಡುವುದು: ಸಂಜೆ 05:30 @ ವಿಜಯಪುರ
- ತಲುಪುವುದು: ಮರುದಿನ ಬೆಳಿಗ್ಗೆ 08:10 @ ಎಸ್‌ಎಂವಿಟಿ ಬೆಂಗಳೂರು
ನಿಲುಗಡೆಗಳು (06277/78 ಮತ್ತು 06279/80 ರೈಲುಗಳಿಗೆ ಸಾಮಾನ್ಯ):
ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್ಎಂಎಂ ಹಾವೇರಿ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ
ಬೋಗಿಗಳ ರಚನೆ:
ಒಂದು 1st AC cum 2nd AC,
ಎರಡು 2nd AC,
ಒಂದು 3rd AC,
ಹನ್ನೊಂದು ಸ್ಲೀಪರ್ ಕ್ಲಾಸ್,
ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ,
ಎಸ್ಸೆಲ್ಆರ್‌ಡಿ ಸಹಿತ ಒಟ್ಟು 21 ಬೋಗಿಗಳು
For More Updates Join our WhatsApp Group :