ಧರ್ಮಸ್ಥಳ ಪ್ರಕರಣಕ್ಕೆ ED ಎಂಟ್ರಿ: ವಿದೇಶಿ ಹಣಕಾಸು ವ್ಯವಹಾರ ತನಿಖೆ ಆರಂಭ!

ಧರ್ಮಸ್ಥಳ ಪ್ರಕರಣಕ್ಕೆ ED ಎಂಟ್ರಿ: ವಿದೇಶಿ ಹಣಕಾಸು ವ್ಯವಹಾರ ತನಿಖೆ ಆರಂಭ!

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಿಂದ ಹಣಕಾಸು ವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಹೊರಬಿದ್ದಿದೆ. ಇದರಿಂದಾಗಿ ಈಗ ಜಾರಿ ನಿರ್ದೇಶನಾಲಯ (ED) ಅಧಿಕೃತವಾಗಿ ಪ್ರಕರಣಕ್ಕೆ ಎಂಟ್ರಿ ನೀಡಿ ತನಿಖೆ ಆರಂಭಿಸಿದೆ.

ವಿದೇಶಿ NGOಗಳಿಂದ ಹಣ ಫಂಡಿಂಗ್?

ವಿದೇಶಿ ಎನ್‌ಜಿಓಗಳಿಂದ ಹಣ ಬಂದಿದೆಯಾ ಎಂಬ ಅನುಮಾನ ಹಿನ್ನೆಲೆಯಲ್ಲಿ, ಇಡಿ ಒಡನಾಡಿ’ ಮತ್ತು ‘ಸಂವಾದ’ ಸಂಸ್ಥೆಗಳ ಅಕೌಂಟ್‌ಗಳ ಮಾಹಿತಿ ಸಂಗ್ರಹಿಸುತ್ತಿದೆ. ಕೆಲವು ಬ್ಯಾಂಕ್‌ಗಳಿಗೆ ಕಳೆದ 5 ವರ್ಷಗಳ ಹಣಕಾಸು ವ್ಯವಹಾರಗಳ ವಿವರನೀಡುವಂತೆ ಇಡಿ ಪತ್ರ ಬರೆದಿದೆ.ವಿದೇಶದಿಂದ ಬಂದಿರುವ ಹಣದ ಪ್ರತಿಗಳು, ಅದರ ಕಾರಣ ಹಾಗೂ ಮೂಲವನ್ನು ಸ್ಪಷ್ಟಪಡಿಸುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ.

ತನಿಖೆಯ ಹಿನ್ನೆಲೆ

ಧರ್ಮಸ್ಥಳದ ವಿರುದ್ಧ ಇತ್ತೀಚೆಗೆ ಅಪಪ್ರಚಾರ ನಡೆಯಿತು. ಶವಗಳನ್ನು ಹೂತಿಡಲಾಗಿದೆ ಎನ್ನುವ ಸುದ್ದಿಗಳು ಹರಿದಾಡಿದ್ದರೂ, ಎಸ್ಐಟಿ ಪರಿಶೀಲನೆ ವೇಳೆ ಕೇವಲ ಕೆಲ ಮೂಳೆಗಳು ಮಾತ್ರ ಪತ್ತೆಯಾದವು. ನಂತರ ವಿದೇಶಿ ಫಂಡಿಂಗ್ ಆರೋಪಗಳು ಕೇಳಿಬಂದಿದ್ದು, ಅದನ್ನಾಧರಿಸಿ ಇಡಿ ತನಿಖೆ ಆರಂಭಿಸಿದೆ.ಒಂದು ವೇಳೆ ಭಾರೀ ಪ್ರಮಾಣದ ಹಣ ವರ್ಗಾವಣೆ ಸಾಬೀತಾದರೆ, ಹಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಕೋಟ ಶ್ರೀನಿವಾಸ ಪೂಜಾರಿ ಪತ್ರ

 ಧರ್ಮಸ್ಥಳದ ವಿರುದ್ಧ ಯೂಟ್ಯೂಬರ್‌ಗಳಿಗೆ ವಿದೇಶಗಳಿಂದ ಹಣ ಬರುತ್ತಿದೆ ಎಂಬ ದೂರು ಆಧರಿಸಿ, ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಧರ್ಮಸ್ಥಳ ದೇವಾಲಯದ ಪಾವಿತ್ರ್ಯತೆ ಉಳಿಸಬೇಕಿದೆ. ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಬಾರದು. ಆದ್ದರಿಂದ ಇಡಿ ಮೂಲಕ ತನಿಖೆ ಅಗತ್ಯ”ಎಂದು ಅವರು ಒತ್ತಾಯಿಸಿದ್ದರು. ಅವರು ರಾಜ್ಯ ಸರ್ಕಾರದ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದರೂ, ಅನಾಮಧೇಯ ಭೀಮನಿಂದ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ” ಎಂದು ಟೀಕಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *