ಸಂಪಾದಕೀಯ || ಪಕ್ಷಾಂತರ ನಿಷೇಧಕ್ಕೆ ಮತ್ತೊಂದು ಪ್ರಯತ್ನ : ಪಿಂಚಣಿರದ್ದು ಚಿಂತನೆ

political-parties

ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಜನ ಸೇವೆಯನ್ನು ಕಡೆಗಣಿಸಿ ವೈಯಕ್ತಿಕ ಹಿತಾಸಕ್ತಿಯ ಪೂರೈಕೆಗಾಗಿ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿ ಕೊಂಡ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲ ಗೊಳ್ಳುತ್ತದೆ.

ಅವರನ್ನು ಆಯ್ಕೆ ಮಾಡಿದ ಜನ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಈ ಪರಿಸ್ಥಿತಿ ಯನ್ನು ಸುಧಾರಿಸಿ ರಾಜಕಾರಣದಲ್ಲಿ ಮೌಲ್ಯವನ್ನು ಉಳಸಿಕೊಂಡು ಪ್ರಜಾಪ್ರಭುತ್ವ ದ ತಳಹದಿಯನ್ನು ಸುಭದ್ರವಾಗಿಸಲು ಪಕ್ಷಾಂತರ ನಿಷೇಧ ದಂತಹಕಠಿಣ ಕ್ರಮ ಗಳನ್ನು  ಶಾಸನಬದ್ಧಗೊಳಿಸಲಾಗಿದೆ.ಅದು ಸಂವಿಧಾನದ ಹತ್ತನೇ ಷೆಡ್ಯೂಲಿನಲ್ಲಿ ಸೇರ್ಪಡೆಯಾಗಿ ಜನಪ್ರತಿನಿಧಿಗಳ ಅಧಿಕಾರಕ್ಕಾಗಿ ಪಕ್ಷದ ಚೌಕಟ್ಟನ್ನು ಉಲ್ಲಂಘಿಸುವ ದುಸ್ಸಾಹಸಕ್ಕೆ ತಡೆ ಒಡ್ಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು.

ಒಂದು ರಾಜಕೀಯ ಪಕ್ಷದ ತತ್ವ ಸಿದ್ಧಾಂತ ಮತ್ತು ನಿಯಮಗಳನ್ನು ಒಪ್ಪಿ ಸದಸ್ಯತ್ವ ಪಡೆದ ವ್ಯಕ್ತಿ ಪಕ್ಷದ ಟಿಕೆಟ್ ಪಡದು ಚುನಾವಣೆಯಲ್ಲಿ ಗೆದ್ದ ನಂತರ ಪಕ್ಷಕ್ಕೆ ನಿಷ್ಠರಾಗಿ ಇರುವಂತೆ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಶಾಸನ ಸಭೆ ಯಲ್ಲಿ ಪಕ್ಷದ ಆಣತಿಯನ್ನುಯಾವ ಕಾರಣಕ್ಕೂ ಮೀರದಂತೆ ವಿಪ್ ಜಾರಿ ಗೊಳಿಸುವ ಅವಕಾಶ ಸೃಷ್ಟಿಸಿ ಅದನ್ನು ಉಲ್ಲಂಘಿಸಿದವರಿಗೆ ಸದಸ್ಯತ್ವರದ್ದಾಗುವ ನಿಯಮವೂ ಕಾಯ್ದೆಯ ಚೌಕಟ್ಟಿನಲ್ಲಿದೆ. ಪಕ್ಷಾಂತರ ಮಾಡಿದರೆ ಮತ್ತು ಪಕ್ಷದ ಲ್ಲಿದ್ದಾಗ ವಿಪ್ ಉಲ್ಲಂಘಿಸಿದರೆ ಸದಸ್ಯತ್ವರದ್ದಾಗುವ ಕಾನೂನು ಜಾರಿಯಲ್ಲಿ ದ್ದಾಗಲೂ  ಅಧಿಕಾರ ದಾಹಿ ಸ್ವಾರ್ಥಿ ರಾಜಕಾರಣಿಗಳು ಹೊಸಹೊಸ ಕುತಂತ್ರಗಳನ್ನು ಅನ್ವೇಷಿಸಿ ರಾಜ ಕೀಯ ಅಧಿಕಾರ ಹಿಡಿಯುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ.ಕರ್ನಾಟಕದಲ್ಲಿ ಜನ ಪ್ರತಿನಿಧಿಯಿಂದ ರಾಜೀನಾಮೆ ಕೊಡಿಸಿ ಆಡಳಿತ ಪಕ್ಷವನ್ನು ಅಲ್ಪ ಮತಕ್ಕೆ ಇಳಿಸಿ ಸರ್ಕಾರವನ್ನು ಪತನಗೊಳಿಸುವ, ರಾಜೀನಾಮೆ ನೀಡಿದ್ದ ವ್ಯಕ್ತಿಯನ್ನು ಇನ್ನೊಂದು ಪಕ್ಷದ ಟಿಕೆಟ್ ನೀಡಿ ಅದೇ ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸಿ ಬಹು ಮತ ಗಳಿಸಿ ಅಧಿಕಾರ ಹಿಡಿಯುವ ಹೊಸದೊಂದು ರಾಜಕೀಯ ಕುತಂತ್ರವನ್ನು ಅನ್ವೇಷಿಸುವ ಮೂಲಕ ಪಕ್ಷಾಂತರ ನಿಷೇಧ ಕಾನೂನನ್ನು ನಿಷ್ಕಿಯಗೊಳಿಸುವ ಪ್ರಯತ್ನ 2008ರಲ್ಲಿಯೇ ನಡೆದಿತ್ತು. ಈ ರಾಜಕೀಯ ಕುತಂತ್ರ ಆಪರೇಷನ್ ಕಮಲ’ ಎಂಬ ಹೆಸರಿನಲ್ಲಿ ದೇಶದಾದ್ಯಂತ ಕುಖ್ಯಾತಿ ಪಡೆದಿದೆ.ಚುನಾವಣೆ ನಂತರ ಯಾವ ಪಕ್ಷಕ್ಕೂ ಸರ್ಕಾರ ರಚಿಸುವಷ್ಟು ಬಹುಮತ ಬರದಿದ್ದಾಗ ಹೀಗೆ ಆಪರೇಷನ್ ತಂತ್ರ ಬಳಸುವ ಕುತಂತ್ರ ಅನೇಕ ರಾಜ್ಯಗಳಲ್ಲಿ ನಡೆದು ಈ ತಂತ್ರವನ್ನು ಹುಟ್ಟು ಹಾಕಿದ ಬಜೆಪಿ ಅಧಿಕಾರ ಗಳಿಸಿರುವುದು ವರ್ತಮಾನದಲ್ಲಿ ದಾಖಲಾಗಿರುವ ಸಂಗತಿ.

ಪಕ್ಷಾಂತರ ನಿಷೇಧಕಾಯ್ದೆ, ವಿಪ್ ಉಲ್ಲಂಘನೆಗೆ ಕಠಿಣ ನಿಯಮಗಳಿದ್ದರೂ ಕಾನೂನು ವ್ಯಾಖ್ಯಾನಿಸುವ ಅವಕಾಶಗಳನ್ನು ಬಳಸಿಕೊಂಡು ಆಡಳಿತ ಪಕ್ಷದ ಸದಸ್ಯರೇ ವಿರೋಧ ಪಕ್ಷದ ಜೊತೆ ಸೇರಿಸಿಕೊಂಡುಪಕ್ಷಾಂತರ ಮಾಡದಿದ್ದರೂ ವಿಪ್ ಉಲ್ಲಂಘನೆ ಮಾಡಿ ಸರ್ಕಾರದ ಮಸೂದೆಯನ್ನು ಸೋಲಿಸಿದ ಪ್ರಕರಣ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ನಡೆದಿರುವುದುಈಚಿನ ಪ್ರಕರಣ.ಈ ಘಟನೆ ತಮ್ಮ ಎದುರು ವಿಚಾರಣೆಗೆ ಬಂದಾಗ ವಿಧಾನಸಭಾಧ್ಯಕ್ಷರು ವಿಪ್ ಉಲ್ಲಂಘಿಸಿದವರ ಸದಸ್ಯತ್ವವನ್ನು ಪಕ್ಷಾಂತರ ನಿಷೇಧಕಾಯ್ದೆಯನ್ನು ಅನ್ವಯಿಸಿ ರದ್ದುಪಡಿಸಿದರು.

ಹೀಗೆ ವಿಪ್ ಉಲ್ಲಂಘಿಸಿದ ಕಾರಣದಿಂದ ಸದಸ್ಯತ್ವಕ್ಕೆ ಅನರ್ಹರಾದವರಿಗೆ ಮಾಜಿ ಶಾಸಕರಿಗೆ ನೀಡಲಾಗುತ್ತಿರುವ ಪಿಂಚಣಿಯನ್ನು ಕೊಡುವುದನ್ನು ನಿಷೇಧಿಸುವ ಮಸೂದೆಯನ್ನು ಹಿಮಾಚಲ ಪ್ರದೇಶ ವಿಧಾನ ಸಭೆ ಅಂಗೀಕರಿಸಿದೆ. ಪಕ್ಷಾಂತರ ನಿಷೇಧವನ್ನು ನಿಷ್ಕಿಯಗೊಳಿಸುವಂತೆ ನಾನಾ ರೀತಿಯಲ್ಲಿ ನಡೆಸುತ್ತಿರುವ ಅಧಿಕಾರ ರಾಜಕಾರಣದ ಕುತಂತ್ರಕ್ಕೆ ಅನರ್ಹಗೊಂಡ ಮಾಜಿ ಶಾಸಕರಿಗೆ ಪಿಂಚಣಿ ನಿರಾಕರಿ ಸುವ ಕ್ರಮ ಪ್ರಜಾಪ್ರಭುತ್ವವನ್ನು ಜನಪರವಾಗಿ ಬಳಗೊಳಿಸುವ ನಿಟ್ಟಿನಲ್ಲಿ

ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ. ಅಧಿಕಾರ ಇಲ್ಲವೇ ರಾಜಕೀಯ ಲಾಭದ ಉದ್ದೇಶಕ್ಕಾಗಿ ನಿರ್ಲಜ್ಜೆಯಿಂದ, ಟಿಕೆಟ್ ನೀಡಿದ ಪಕ್ಷಕ್ಕೂ, ಆಯ್ಕೆ ಮಾಡಿದ ಮತದಾರರಿಗೂ ದ್ರೋಹ ಎಸಗುವಂತೆ ವರ್ತಿಸುವ ಜನನಾಯಕರಿಗೆ ಕಟುವಾದ ಸಂದೇಶ ನೀಡುವಂತೆ ರೂಪಿಸಿದ ಪಿಂಚಣಿ ನಿಷೇಧದ ಕಾಯ್ದೆಗೆ ಹಿಮಾಚಲ ಪ್ರದೇ ಶದ ವಿರೋಧ ಪಕ್ಷವಾದ ಬಿಜೆಪಿ ರಾಜಕೀಯ ಸೇಡಿನ ಕ್ರಮವಾಗಿ’ ಆಡಳಿತಾ ರೂಢ ಕಾಂಗ್ರೆಸ್ ಈ ಕಾನೂನು ರೂಪಿಸಿದೆ ಎಂದು ಆರೋಪಿಸಿದೆ. ಆಪ ರೇಷನ್ ಕಮಲ’ ಕುತಂತ್ರರಾಜಕಾರಣವನ್ನು ರೂಪಿಸುವ ಮೂಲಕ ಪಕ್ಷಾಂತರ ಕಾಯ್ದೆಯನ್ನು ನಿಷ್ಕಿಯಗೊಳಿಸುವ ಕುತಂತ್ರವನ್ನು ದೇಶದ ರಾಜಕಾರಣಕ್ಕೆ ಪರಿಚಯಿಸಿದ ಪಕ್ಷದಿಂದ ಇಂಥ ಪ್ರತಿಕ್ರಿಯೆ ಅನಿರೀಕ್ಷಿತವಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗುವುದಕ್ಕೆ ಜನಪ್ರತಿನಿಧಿಗಳಲ್ಲಿ ಹೊಣೆ ಗಾರಿಕೆಯ ನಡವಳಿಕೆಯ ಜೊತೆಗೆ ಎಲ್ಲ ರೀತಿಯಲ್ಲಿಯೂ ನಿಸ್ವಾರ್ಥ ಜನಸೇವೆಗೆ ಬದ್ಧರಾಗಿರುವವರನ್ನು ಆಯ್ಕೆ ಮಾಡುವ ಪ್ರಬುದ್ಧತೆಯನ್ನು ಮತದಾರರೂ ಪಡೆಯ ಬೇಕಾಗುತ್ತದೆ.ಮತದಾನ ಪೂರ್ವದಲ್ಲಿ ಅಭ್ಯರ್ಥಿಗಳ ಆಮಿಷಕ್ಕೆ ಒಳಗಾಗಿ ಅಯೋ ಗ್ಯರಿಗೆ ಮತ ನೀಡುವುದರಿಂದಆಗಿರುವ ಅಪಾಯಗಳನ್ನು ಅರ್ಥ ಮಾಡಿ ಕೊಂಡು ಜವಾಬ್ದಾರಿಯಿಂದ ತಮ್ಮ ಪ್ರತಿನಿಧಿಯನ್ನುಆಯ್ಕೆ ಮಾಡುವ ವಿವೇಕವನ್ನೂ ಮತದಾರರು ಪ್ರದರ್ಶಿಸಬೇಕಾಗುತ್ತದೆ.

Leave a Reply

Your email address will not be published. Required fields are marked *