ಸಂಪಾದಕೀಯ || ಕೋವಿಡ್ ಹಗರಣಗಳ ತನಿಖೆ ಭ್ರಷ್ಟರಿಗೆ ಕಠಿಣ ಶಿಕ್ಷೆ ಆಗಲಿ

ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾ ಇವರ ನೇತೃತ್ವದ ತಂಡ ತಮ್ಮ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು

ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ಹಾ ಇವರ ನೇತೃತ್ವದ ತಂಡ ತಮ್ಮ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು

03.09.2024 : ಮೂರು ವರ್ಷಗಳ ಹಿಂದೆ ಜಗತ್ತಿನಲ್ಲಿ ಕಾಣಿಸಿಕೊಂಡು ಲಕ್ಷಾಂತರ ಜೀವಗಳನ್ನು ಬಲಿ ಪಡೆದ ಕೋವಿಡ್ 19ರ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ ಭ್ರಷ್ಟ ವ್ಯವಹಾರಗಳಿಗೆ ಸಂಬಂಧಿಸಿ ನಡೆದ ನ್ಯಾಯಾಂಗ ತನಿಖೆಯ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

2020-23 ರವರೆಗೆಎರಡು ವರ್ಷಗಳ ರಾಜ್ಯವನ್ನು ಬಾಧಿಸಿದ ಕೊರೋನಾ ಸೋಂಕಿನ ನಿಯಂತ್ರಣ, ಚಿಕಿತ್ಸೆಯ ನೆಪದಲ್ಲಿ ರಾಜ್ಯದ ಆರೋಗ್ಯ ಇಲಾಖೆ  ಮತ್ತು ಸ್ಥಳೀಯ ಸಂಸ್ಥೆಗಳು ನಡೆಸಿದ ಭಾರೀ ಪ್ರಮಾಣದ ಅವ್ಯವಹಾರಗಳಿಗೆ ಸಂಬಂಧಿಸಿ ಬಂದ ದೂರುಗಳನ್ನು ಮತ್ತು ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ನಅವರ ಸಮಿತಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ.

ವರದಿಯನ್ನು ರಾಜ್ಯ ಸಂಪುಟ ಅಂಗೀಕರಿಸಿ ವರದಿಯ ಶಿಫಾರಸುಗಳನ್ನು ಆಧರಿಸಿ ವಿಚಾರಣೆಗೆ ತ್ವರಿತ ನ್ಯಾಯಾಲಯವನ್ನು ಆರಂಭಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.

ಕೋವಿಡ್ 19ರ ಚಿಕಿತ್ಸೆಯ ನೆಪದಲ್ಲಿ ಸಾವಿರಾರುಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ಕೊರೋನಾ ಸೋಂಕು ಜನತೆಯನ್ನು ಬಾಧಿಸುತ್ತಿದ್ದಾಗಲೇ ಆರೋಪಗಳು ಸಾಕ್ಷ್ಯಗಳ ಸಹಿತ ಬಹಿರಂಗವಾಗುತ್ತಿದ್ದಾಗ ಆಗಿದ್ದ ಸರ್ಕಾರದ ಸಂಬಂಧಿಸಿದ ಇಲಾಖೆ ಮುಖ್ಯಸ್ಥರು ಅದನ್ನು ಕಡೆಗಣಿಸಿದ್ದನ್ನು ಜನತೆ ಇನ್ನೂ ಮರೆತಿಲ್ಲ. ಕೊರೋನಾ ಸೋಂಕಿನ ಚಿಕಿತ್ಸೆಯ ಸಂದರ್ಭದಲ್ಲಿಕೊಂಡಿದ್ದ ಲಕ್ಷ ಲಕ್ಷ ಸಂಖ್ಯೆಯ ಮಾಸ್ಕ್ ಗಳಿಗೆ ಮಾರುಕಟ್ಟೆದರದ ಹತ್ತು ಪಟ್ಟು ವೆಚ್ಚವನ್ನು ತೋರಿಸಲಾಗಿದೆ. ವೆಂಟಿಲೇಟರ್ ವ್ಯವಸ್ಥೆಯನ್ನುಘಟಕಕ್ಕೆ ನಾಲ್ಕು ಲಕ್ಷ ರೂಪಾಯಿ ಮಾರುಕಟ್ಟೆಯಲ್ಲಿದರವಿದ್ದರೆ ಹದಿನೆಂಟು ಲಕ್ಷರೂಪಾಯಿ ವೆಚ್ಚ ನೀಡಿ ಕೊಳ್ಳಲಾಗಿದೆ ಎಂಬಂಥ ದೂರುಗಳನ್ನು ದಾಖಲೆಗಳ ಸಹಿತ ವಿಧಾನಸಭೆಯಲ್ಲಿ ಅಂದಿನ ವಿರೋಧಪಕ್ಷದ ನಾಯಕರು ಪ್ರಶ್ನಿಸುವುದಕ್ಕೆ ಸ್ಪೀಕರ್ ಅವರು ಅವಕಾಶ ನಿರಾಕರಿಸಿದ್ದು ಕೂಡ ಸಾರ್ವಜನಿಕರ ನೆನಪಿನಿಂದ ಮರೆಯಾಗಿಲ್ಲ.

ಕೊರೋನಾ ಸೋಂಕು ಏರುಗತಿಯಲ್ಲಿದ್ದಾಗ ಬೆಂಗಳೂರಿನ ಹೊರವಲಯದಲ್ಲಿ ಹತ್ತು ಸಾವಿರ ಹಾಸುಗೆಗಳ ಚಿಕಿತ್ಸಾ ಆವರಣವನ್ನು ಸಜ್ಜುಗೊಳಿಸಲು ಅವುಗಳನ್ನು ಕೊಳ್ಳುವುದಕ್ಕಿಂತಲೂ ಹೆಚ್ಚಿನದರದಲ್ಲಿ ಬಾಡಿಗೆ ಹಣ ನೀಡಲಾಗಿದೆ ಎಂಬುದನ್ನು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಅಂಕಿ ಅಂಶಗಳ ಸಹಿತ ಬಹಿರಂಗಪಡಿಸಿ  ಅದರಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿರುವ ಗುಮಾನಿಯನ್ನು ವ್ಯಕ್ತಪಡಿಸಿದ್ದಕ್ಕೂ ಆಗಿನ ಸರ್ಕಾರ ಸ್ಪಷ್ಟನೆ ನೀಡಿರಲಿಲ್ಲ.

ಚಾಮರಾಜನಗರದ ಸರ್ಕಾ ರಿ ಜಿಲ್ಲಾಸ್ಪತ್ರೆಯಲ್ಲಿಆಮ್ಲಜನಕದ ಕೊರತೆಯಿಂದ ಒಂದೇ ದಿನ ಮೂವತ್ತಕ್ಕೂ ಹೆಚ್ಚಿನ ಸೋಂಕಿತರು ಮೃತಪಟ್ಟಘಟನೆಗೆ ಸಂಬಂಧಿಸಿ ಹೈಕೋರ್ಟ್ ನ್ಯಾಯಾಧೀಶರೇ ಧ್ವನಿ ಎತ್ತಿದ ಪ್ರಕರಣವೂಜನರ ನೆನಪಿನಿಂದ ಮರೆಯಾಗಿಲ್ಲ.

ಕೋವಿಡ್ 19ರ ಕಾಲದಲ್ಲಿಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ತಲಾ ಒಂದು ಲಕ್ಷರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶ ಸರಿಯಾಗಿ ಪಾಲನೆಯಾಗಿಲ್ಲಎಂದು ಸಂತ್ರಸ್ತರ ಕುಟುಂಬದವರು ಸಾರ್ವಜನಿಕವಾಗಿ ಹೇಳಿಕೊಂಡ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು.ಅಂಥ ಪ್ರಕರಣಗಳಿಗೂ ಸರ್ಕಾರ ಇದುವರೆಗೆ ಸ್ಪಂದಿಸಿಲ್ಲ. ಕೋವಿಡ್ 19ರ ಸೋಂಕು ಸಂಪೂರ್ಣ ನಿವಾರಣೆ ಆಗದಿದ್ದರೂ ಮೊದಲಿನ ತೀವ್ರತೆ ಇಲ್ಲವಾದ ಕಾರಣ ಸಾರ್ವಜನಿಕರ ನೆನಪಿನ ಶಕ್ತಿ ಅಲ್ಪಾಯು ಎಂಬ ಪ್ರತೀತಿಯನ್ನು ಬಲವಾಗಿ ನಂಬಿರುವ ರಾಜ್ಯ ಸರ್ಕಾರ ಸಂತ್ರಸ್ತರಿಗೆ ನ್ಯಾಯಕೊಡಿಸಲು ಮುಂದಾಗದಿರುವುದು ವಿಷಾದಕರ ಸಂಗತಿ.

2019-23ರ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಲವಾರು ಹಗರಣಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಅವ್ಯವಹಾರ ನಡೆಸಿರುವುದು ಆ ದಿನಗಳಲ್ಲಿಯೇ ರ್ವಜನಿಕವಾಗಿ ಕೇಳಿ ಬಂದಿದ್ದ ಆರೋಪಗಳು.ಅಧಿಕಾರಿಗಳೊಂದಿಗೆ ಶಾಮೀಲಾಗಿ ನಡೆಸಿದ ಹಗರಣಗಳಲ್ಲಿ ದುರ್ಬಳಕೆಯಾಗಿರುವ ಹಣ ರಾಜ್ಯದ ಜನತೆಯದು ಎಂಬುದರಲ್ಲಿ ಸಂಶಯವಿಲ್ಲ.

ಏಕೆಂದರೆ ಹಗರಣಗಳಿಂದ ಅಪವ್ಯಯವಾಗುವ ಹಣ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವೈಯಕ್ತಿಕ ಸಂಪತ್ತನ್ನು ಹೆಚ್ಚಿಸುತ್ತದೆ.ಅದು ನಿಜವಾಗಿಯೂಜನರ ಅನುಕೂಲಕ್ಕಾಗಿ ಸೌಲಭ್ಯಗಳನ್ನು ಒದಗಿಸುವುದಕ್ಕೆ ಬಳಸಬೇಕಿದ್ದ ಹಣ.ಜನತೆಗಾಗಿ ಮತ್ತೆ ಮೂಲ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಜನರ ಬಳಿಯೇ ಸರ್ಕಾರ ಹೋಗಬೇಕಾಗುತ್ತದೆ. ನೇರತೆರಿಗೆ, ಪರೋಕ್ಷ ತೆರಿಗೆಯದರವನ್ನು ಹೆಚ್ಚಿಸುವ ಮೂಲಕ ಸಂಪನ್ಮೂಲ ಸಂಗ್ರಹಿಸಬೇಕಾಗುತ್ತದೆ. ಇದೂ ಸಾಲದೆ ಬಂದಾಗ ಹೊರಗಿನ ಮೂಲಗಳಿಂದ ಸಾಲ ಪಡೆದು ಕೆಲಸ ಮಾಡುತ್ತದೆ.ಆ ಸಾಲದ ಬಡ್ಡಿ ಮತ್ತು ಸಲನ್ನುತೀರಿಸುವ ಜವಾಬ್ದಾರಿ ಅಂತಿಮವಾಗಿ ಜನರದೇ ಆಗುತ್ತದೆ.ಆದ್ದರಿಂದ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಅವರು ಗಳಿಸಿದ ಅಕ್ರಮ ಸಂಪತ್ತನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಸರ್ಕಾರಜನತೆಗೆ ನ್ಯಾಯ ಒಡಗಿಸಬೇಕಾಗುತ್ತದೆ.

ಕೋವಿಡ್ 19ರ ಸೋಂಕಿನ ಕಾಲದಲ್ಲಿ ಸಾರ್ವಜನಿಕ ಹಣವನ್ನು ನಾನಾ ಮಾರ್ಗಗಳಿಂದ ಲೂಟಿ ಮಾಡಿದವರು ನಾಗರಿಕ ಮನುಷ್ಯರೆನ್ನಿಸಿಕೊಳ್ಳಲು ಅನರ್ಹರಾದದುಷ್ಟರು.ಜನರ ಜೀವದ ಜೊತೆ ಚೆಲ್ಲಾಟವಾಡುವಂತೆ ದುಬಾರಿ ಹಣತೆತ್ತು ಕಳಪೆ ಸಾಮಗ್ರಿಗಳನ್ನು ಕೊಂಡು ಜನರ ಜೀವಕ್ಕೆ ಕುತ್ತು ತಂದವರು. ಅಂಥವರನ್ನುತನಿಖಾಆಯೋಗ ಗುರುತಿಸಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯನೈತಿಕ ಹೊಣೆಗಾರಿಕೆ

Leave a Reply

Your email address will not be published. Required fields are marked *