ಬೀದಿ ನಾಯಿಗಳ ಸಂಖ್ಯೆ ಹತೋಟಿ ಮಾಡುವುದು ಅಸಾಧ್ಯನಾ?

ಲೇಖನ : ಈಶ್ವರಪ್ರಸಾದ್,  ನೇರಳೇಕೆರೆ, ಮಧುಗಿರಿ ತಾಲ್ಲೂಕ್

ಇತ್ತೀಚಿಗೆ ಬೀದಿ ನಾಯಿಗಳು ಮಕ್ಕಳ ಮೇಲೆ ಎರಗಿ ಸಾಯಿಸುವುದು ಅಥವಾ ಕಡಿಯುವುದು ಕಂಡು ಬರುತ್ತಿದೆ. ಹಿಂದೆ ರೈತರು ಹೆಚ್ಚಿನದಾಗಿ ತಮ್ಮ ಜಮೀನುಗಳಿಗೆ ಕಾವಲು ಕಾಯಲು ತಮ್ಮ ಜೊತೆಯಲ್ಲಿ ನಾಯಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಬೀದಿನಾಯಿಗಳ ಸಂಖ್ಯೆ ಹೆಚ್ಚಳ ಇರಲಿಲ್ಲ ಆದರೆ ಕೆಲವು ದಶಕಗಳಿಂದ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ.

ಮೊದಲು ನಾಯಿಗಳು ಮಕ್ಕಳ ಮೇಲೆ ಎರಗುವುದು ಕಂಡು ಬರುತ್ತಿರಲಿಲ್ಲ ಮನೆಯ ಹತ್ತಿರ ಹೊಲದ ಹತ್ತಿರ ಅಪರಿಚಿತರು ಹೋದರೆ ಮಾತ್ರ ಭಯ ಹುಟ್ಟಿಸುವಂತೆ ಬೊಗಳುವುದು ಅಥಾವ ಕಚ್ಚುವುದು ಇತ್ತು ಆದರೆ ಇತ್ತೀಚೆಗೆ ಮಕ್ಕಳ ಮೇಲೆ ಎರಗುತ್ತಿರುವುದು ಕಂಡರೆ ಮಾಂಸ ರುಚಿ ಕಂಡ ನಾಯಿಗಳು ಮಕ್ಕಳ ಮೇಲೆ ಎರಗುತ್ತಿರುವುದು ತಿನ್ನುವ ಕಾರಣಕ್ಕೆ ಎಂಬುದು ಕಂಡು ಬರುತ್ತಿದೆ. ಅದೂ ಅಲ್ಲದೆ ರೈತರು ಸಾಕಾಣಿಕೆ ಮಾಡುವ ಕುರಿ ಮೇಕೆ ಕೋಳಿ ಜಾನುವಾರಗಳ ಮೇಲೂ ಎರಗುತ್ತಿರುವುದು ಮಾಂಸದ ಕಾರಣಕ್ಕಾಗಿ ಮೊದಲು ಎಂದರೆ ಕೆಲವಾರು ದಶಕಗಳ ಹಿಂದೆ ಈಗಿನಂತೆ ಕೋಳಿ ಅಂಗಡಿಗಳು ಮಾಂಸದ ಅಂಗಡಿಗಳು ಹೆಚ್ಚಿನದಾಗಿ ಇರಲಿಲ್ಲ ಆದರೆ ಈಗ ಮಾಂಸ ಅಂಗಡಿ ಕೋಳಿಗಳ ಅಂಗಡಿ ಹೆಚ್ಚಾಗುತ್ತಿದ್ದು ಈ ಅಂಗಡಿಗಳ ಮಾಂಸ ತ್ರಾಜ್ಯವನ್ನು ತಿಂದಂತಹ ನಾಯಿಗಳು ಮಕ್ಕಳ ಮೇಲೆ ಜಾನುವಾರಗಳ ಮೇಲೆ ಎರಗಿ ಪ್ರಾಣಕ್ಕೆ ಕುತ್ತು ತರುತ್ತಿವೆ.

ಸರ್ಕಾರದ ಅಂಗ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆಗಳು, ಗ್ರಾಮ ಪಂಚಾಯಿತಿಗಳು ಮಾಂಸದ ಅಂಗಡಿ ಮೇಲೆ ಸೂಕ್ತ ನಿರ್ಹ ವಣೆ ಇಲ್ಲದ ಕಾರಣ ಬೀದಿ ನಾಯಿಗಳು ಮಕ್ಕಳ ಮೇಲೆ ಎರುಗುತ್ತಿವೆ. ಈ ಎಲ್ಲಾ ಕಾರಣದಿಂದ ಸರ್ಕಾರ ಬೀದಿ ನಾಯಿಗಳ ಸಂಖ್ಯೆ ಹತೋಟಿ ಮಾಡಲು ಈ ಅಂಗ ಸಂಸ್ಥೆಗಳಿಗೆ ತವ್ಮ ಅನುದಾನಗಳಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಮಾಡುವ ಯೋಜನೆಯನ್ನು ರೂಪಿಸಿಕೊಟ್ಟಿದೆ ಆದರೆ ಇಲ್ಲಿಯವರೆಗೂ ಪಂಚಾಯತ್ ರಾಜ್ ಸಂಸ್ಥೆಗಳು ಬೀದಿನಾಯಿಗಳ ಹತೋಟಿ ಕ್ರಮವನ್ನು ಬದ್ದತೆಯಿಂದ ಕಾರ್ಯನಿರ್ವಣೆ ಮಾಡುತ್ತಿಲ್ಲ, ಬೀದಿ ನಾಯಿಗಳಲ್ಲಿ ಹೆಣ್ಣು ಅಥವಾ ಗಂಡು ಸಂತತಿಯಲ್ಲಿ ಯಾವುದು ಕಡಿಮೆ ಇದ್ದಾವೂ ಗಂಡು / ಹೆಣ್ಣು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸುವುದು ಅಗತ್ಯ ಇದೆ,ಆದರೆ ಬೀದಿ ನಾಯಿಗಳ ಸಮಸ್ಯೆಯಿಂದ ಮಕ್ಕಳ ಮೇಲೆ ಎರಗುತ್ತಿರುವುದು ನಮ್ಮ ಜನಪ್ರತಿನಿಧಿಗಳಿಗೆ ಗಮನಕ್ಕೆ ಬರುತ್ತಿಲ್ಲವಾ ಅಥವಾ ಜಾಣ ಮೌನವಾ ತಿಳಿಯುವುತ್ತಿಲ್ಲ,

ವಿಧಾನಸಭೆಯಲ್ಲಿ ಅಗಲಿ ಕೆ,ಡಿ,ಬಿ. ಸಭೆಯಲ್ಲಿ ಅಗಲಿ ಜನಪ್ರತಿನಿಧಿಗಳು ಖಡಕ್ ಆಗಿ ಅಧಿಕಾರಿಗಳಿಗೆ ಬೀದಿ ನಾಯಿಗಳನ್ನು ಹತೋಟಿ (ಸತಾನಹರಣ / ಇತರೆ ರೀತಿಯಲ್ಲಿ) ಮಾಡಲು ಸೂಚನೆ ನೀಡಿದ ಕಾರಣ ಸಮಸ್ಯೆ ನಿವಾರಣೆ ಆಗುತಿಲ್ಲ. ಬೀದಿ ನಾಯಿಗಳನ್ನು ಹತೋಟಿ ಮಾಡುವುದು ಅಸಾಧ್ಯನ ? ಎಂಬ ಪ್ರಶ್ನೆಗಳು ನಾಗರೀಕರಿಂದ ಕೇಳಿ ಬರುತ್ತದೆ, ಸರ್ಕಾರ ಅಂಟು ರೋಗಗಳಾದ ಕುಷ್ಟರೋಗ ಟೀಬಿ ಕಾಯಿಲೆ ಸಿಡುಬು ಇಂತಾ ಕಾಯಿಲೆಗಳನ್ನು ಹತೋಟಿ ಮಾಡಿರುವಾಗ ಬೀದಿ ನಾಯಿಗಳನ್ನು ಹತೋಟಿ ಮಾಡುವುದು ಅಸಾಧ್ಯನಾ ಎನ್ನಿಸುತ್ತದೆ,? ನಗರ ಪಾಲಿಕೆಗಳು ನಗರಸಭೆ ಗ್ರಾಮ ಪಂಚಾಯಿಗಳಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಮಾಡಿಸುವುದು ಹಣ ಮೀಸಲು ಇರುತ್ತದೆ ಆದರೂ ಮೀನಾ.-ಮೇಷ ಎಣಿಸುವುದು ಏಕೆ ಎಂಬ ಪ್ರಶ್ನೆಗಳು ನಾಗರೀಕರಿಂದ ಕೇಳಿ ಬರುತ್ತದೆ. ಬೀದಿ ನಾಯಿಗಳು ಮಕ್ಕಳ ಮೇಲೆ ಎರಗಿದರೆ / ದಾಳಿ ಮಾಡಿರುವ ನಗರ ಗ್ರಾಮಗಳಲ್ಲಿ ಬೀದಿ ನಾಯಿಗಳಿಗೆ ಕಡಿವಾಣ ಹಾಕುವರಿಗೂ ಆ ನಗರ ಗ್ರಾಮಗಳಲ್ಲಿ ಹೋರಾಟಗಳನ್ನು ಮಾಡಿ ಯಶಸ್ಸು ಆಗುವರಿಗೂ ಬಿಡಬಾರದು ಇದು ರಾಜ್ಯವ್ಯಾಪ್ತಿ ನಡೆದರೆ ಬೀದಿ ನಾಯಿಗಳಿಗೆ ವಿಧಿ ಇಲ್ಲದೆ ಕಡಿವಾಣವನ್ನು ನಗರಸಭೆಗಳು. ಮಹಾನಗರ ಪಾಲಿಕೆ ಗ್ರಾಮ ಪಂಚಾಯಿತಿಗಳು ಆಳವಡಿಸಿಕೊಳ್ಳುತ್ತವೆ. ನಾಗರೀಕರು ಸಾಧಕರು ಆಗಲೇ ಬೇಕಾಗಿದೆ

Leave a Reply

Your email address will not be published. Required fields are marked *