05.09.2024 : ಆಪರೇಷನ್ ಕಮಲದ ಕುತಂತ್ರದ ಮೂಲಕ 2019-23ರ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆದಿದ್ದಾಗ ವರದಿಯಾದ ಭ್ರಷ್ಟಾಚಾರ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿ ಅವುಗಳಿಗೆ ತಾರ್ಕಿಕ ಮುಕ್ತಾಯ ಹಾಕುವುದಕ್ಕೆ ರಾಜ್ಯ ಸರ್ಕಾರ ಬದ್ಧತೆಯನ್ನು ಪ್ರಕಟಿಸಿರುವುದು ತಡವಾದರೂ ಸ್ವಾಗತಾರ್ಹವಾಗಿರುವಕ್ರಮ.ಕಳೆದ ವಿಧಾನಸಭೆಚುನಾವಣೆಯಲ್ಲಿ ವ್ಯಕ್ತವಾದ ಜನಾದೇಶ ಹಿಂದಿನ ಸರ್ಕಾರದ ಭ್ರಷ್ಟಾಚಾರಕ್ಕೆ ಜನತೆ ವ್ಯಕ್ತಪಡಿಸಿದ ಸ್ಪಷ್ಟತೀರ್ಪು ಎಂಬುದನ್ನುಕಾAಗ್ರೆಸ್ ಸರ್ಕಾರ ಆಗಲೇ ಅರ್ಥ ಮಾಡಿಕೊಂಡು ಕರ್ಯೋನ್ಮುಖವಾಗಿದ್ದರೆ ಕೆಲವಾದರೂ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿತ್ತು.
ರಾಜ್ಯದ ಜನತೆ ತಮ್ಮ ಚುನಾವಣೆ ಭರವಸೆಗಳನ್ನು ನೋಡಿಯೇ ಮತಕೊಟ್ಟು ಅಧಿಕಾರಕ್ಕೆ ತಂದಿದ್ದಾರೆ ಎAಬುದನ್ನು ಕಾAಗ್ರೆಸ್ ನಾಯಕರು ಪದೇ ಪದೇ ಹೇಳುತ್ತಾ ಇದ್ದುದು ಆಂಶಿಕವಾಗಿ ಸರಿಯಾಗಿದ್ದರೂ ಮತದಾರರು ಭರವಸೆಗಳನ್ನು ನಂಬಿ ಬೆಂಬಲ ನೀಡುತ್ತಾರೆಎಂಬುದು ವಾಸ್ತವ ಸಂಗತಿಯಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯದಜನತೆಅಧಿಕಾರ ನಡೆಸಿದ ರಾಜಕೀಯ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಲ್ಲ. ಆಡಳಿತ ವಿರೋಧಿ ಅಲೆ ಇಲ್ಲದಿದ್ದರೂಒಮ್ಮೆಅಧಿಕಾರ ನಡೆಸಿದವರಿಗೆ ತಕ್ಷಣಕ್ಕೆಇನ್ನೊಂದು ಅವಕಾಶ ನೀಡದ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ರಾಜ್ಯದ ಮತದಾರರು 2023ರ ವಿಧಾನಸಭೆಚುನಾವಣೆಯಲ್ಲಿ ನಿರ್ಣಾಯಕತೀರ್ಪನ್ನು ನೀಡುವುದಕ್ಕೆ ಗ್ಯಾರಂಟಿಗಳ ಬಗೆಗಿನ ನಿರೀಕ್ಷೆಗಳ ಜೊತೆಗೆ ಹಿಂದಿನ ಸರ್ಕಾರದಅವಧಿಯಲ್ಲಿ ವ್ಯಾಪಕವಾಗಿ ವರದಿಯಾಗಿದ್ದ ಭ್ರಷ್ಟಾಚಾರದ ಪ್ರಕರಣಗಳಿಗೆ ವಿರೋಧವೂಕಾರಣವಾಗಿತ್ತು ಎಂಬುದನ್ನು ಚುನಾವಣಾ ವೀಕ್ಷಕರು ವಿಶ್ಲೇಷಿಸಿದ್ದರೂ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ಸಿಗರು ತಮ್ಮ ಗ್ಯಾರಂಟಿಗಳ ಭರವಸೆಯನ್ನೇ ಪ್ರಧಾನವಾಗಿ ಮುಂದೆ ಮಾಡುತ್ತಿದ್ದರು. ತಾವುಅಧಿಕಾರಕ್ಕೆ ಬರುವುದಕ್ಕೆ ಹಿಂದಿದ್ದ ಸರ್ಕಾರ ನಡೆಸಿದ್ದ ಹಗರಣಗಳಿಗೆ ಜನತೆ ವಿರೋಧ ವ್ಯಕ್ತಪಡಿಸಿದ್ದು ಕಾರಣಎಂಬುದನ್ನು ತಡವಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತುಜೆಡಿಎಸ್ ನಾಯಕರು ಆರೋಪ ಮಾಡುತ್ತಿದ್ದಾಗ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರೇ ಅವುಗಳಿಗೆ ಉತ್ತರ ನೀಡುತ್ತಿದ್ದ ಪರಿಸ್ಥಿತಿ ಈಚೆಗೆ ಬದಲಾಗುತ್ತಿದೆ.ಸಂಪುಟದ ಸದಸ್ಯರು ಸರ್ಕಾರದ ಸಾಮೂಹಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದನ್ನು ಸ್ಪಷ್ಟಪಡಿಸುವಂತೆ ಬೃಹತ್ ಮತ್ತು ಮಧ್ಯಮಕೈಗಾರಿಕೆ ಖಾತೆಗಳನ್ನು ನಿರ್ವಹಿಸುತ್ತಿರುವ ಸಚಿವರು ಬೆಂಗಳೂರಿನಲ್ಲಿ ಹಿಂದಿನ ಸರ್ಕಾರದಅವಧಿಯಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನೂ ವಿಚಾರಣೆಗೆಗುರಿಪಡಿಸುವ ಭರವಸೆಯನ್ನು ನೀಡಿದ್ದಾರೆ.2013ರಲ್ಲಿ ಅಸ್ತಿತ್ವಕ್ಕೆ ಬಂದಿದ್ದಕಾAಗ್ರೆಸ್ ಸರ್ಕಾರದ ನೀತಿ ನಿರ್ಧಾರಗಳ ಬಗ್ಗೆ ವಿರೋಧಪಕ್ಷಗಳ ಯಾವುದೇ ಟೀಕೆಗಳಿಗೆ ಆಗ ಮುಖ್ಯಮಂತ್ರಿಯವರೇ ಸಮಜಾಯಿಷಿ ನೀಡುವ ಪರಿಸ್ಥಿತಿ ಇತ್ತುಎಂಬುದನ್ನು ನೆನಪು ಮಾಡಿಕೊಂಡರೆ ಈಗ ಕೈಗಾರಿಕೆ ಸಚಿವರು ನೀಡಿರುವ ಹೇಳಿಕೆ ಸಚಿವ ಸಂಪುಟದ ಸಾಮೂಹಿಕ ಹೊಣೆಗಾರಿಕೆಯನ್ನು ದೃಢಪಡಿಸಿದಂತಾಗಿದೆ.
ಮುಖ್ಯಮAತ್ರಿಯವರ ವಿರುದ್ಧಆಧಾರವಿಲ್ಲದಆರೋಪ ಕೇಳಿ ಬಂದಾಗ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳು ಬೆಂಗಳೂರಿನಿAದ ಮೈಸೂರಿಗೆ ಪಾದಯಾತ್ರೆಕೈಗೊಂಡಿದ್ದ ಸಂದರ್ಭದಲ್ಲಿಅದಕ್ಕೆ ತಕ್ಕ ಉತ್ತರವನ್ನು ಉಪಮುಖ್ಯಮAತ್ರಿಯವರ ನೇತೃತ್ವದಲ್ಲಿಜನಾಂದೋಲನ ಸಮಾವೇಶಗಳನ್ನು ಸಂಘಟಿಸಿ ವಾಸ್ತವ ಪರಿಸ್ಥಿತಿಯನ್ನು ರಾಜ್ಯದಜನರಎದುರು ವಿವರಿಸುವ ಕೆಲಸವಾಗಿತ್ತು. ಅದೇ ಸಂದರ್ಭದಲ್ಲಿಯೇ ಮುಖ್ಯಮಂತ್ರಿಯವರು ಹಿಂದಿನ ಸರ್ಕಾರದಅವಧಿಯಲ್ಲಿವರದಿಯಾದಎಲ್ಲ ಹಗರಣಗಳ ತನಿಖೆಯನ್ನುತುರ್ತಾಗಿ ಕೈಗೊಳ್ಳುವ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದರು.
ರಾಜ್ಯ ಸರ್ಕಾರ ಈಚೆಗೆ ಹೊರಡಿಸಿದ ಪ್ರಕಟಣೆಯಂತೆ ಬಿಟ್ಕಾಯಿನ್ ಹಗರಣ, ಕೋವಿಡ್ 19ರ ಕಾಲದಲ್ಲಿ ವರದಿಯಾದ ಅವ್ಯವಹಾರ, ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕ ಸಂದರ್ಭದಲ್ಲಿಆದ ಹಗರಣ ಸೇರಿದಂತೆ ನಲವತ್ತು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಅವ್ಯವಹಾರಗಳ ಆರೋಪಗಳು ತನಿಖೆಯಾಗಬೇಕಿದ್ದು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿಕೋವಿಡ್ ಸೋಂಕಿನ ಕಾಲದ ಅವ್ಯವಹಾರ ಕುರಿತ ನ್ಯಾಯಮೂರ್ತಿ ಮೈಕೆಲ್ಡಿಕುನ್ನಅವರ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಿ ಮುಂದಿನ ಪ್ರಕ್ರಿಯೆ ನಡೆಸುವುದಕ್ಕೆ ಸರ್ಕಾರ ಮುಂದಾಗಬೇಕಿದೆ.
ಯಾವ ಸರ್ಕಾರವೇಇ ರಲಿ, ಎಷ್ಟು ಪ್ರಮಾಣದ ಹಣದಅಕ್ರಮ ಅವ್ಯವಹಾರಗಳು ನಡೆದಿದ್ದರೂ ಅವೆಲ್ಲವೂ ರಾಜ್ಯದ ಜನತೆಯ ಹಣವಾಗಿದ್ದುಅದನ್ನುಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಲಪಟಾಯಿಸಿ ಸ್ವಂತಕ್ಕೆ ಮಾಡಿಕೊಂಡಿದ್ದರೆಅವೆಲ್ಲವನ್ನೂ ಕಾನೂನು ಪ್ರಕಾರ ವಿಚಾರಣೆ ನಡೆಸಿ ಅಕ್ರಮ ಗಳಿಕೆಯ ಸಂಪತ್ತನ್ನು ಸ್ವಾಧೀನ ಪಡಿಸಿಕೊಳ್ಳುವ ಕರ್ತವ್ಯವನ್ನು ಸರ್ಕಾರ ನಿರ್ವಹಿಸಬೇಕಾಗುತ್ತದೆ. ಅದು ಸರ್ಕಾರದ ಬಗ್ಗೆ ಮತದಾರರಿಗೆಇರುವ ವಿಶ್ವಾಸ. ಆ ನಿಟ್ಟಿನಲ್ಲಿರಾಜ್ಯ ಸರ್ಕಾರದೃಢವಾದ ಹೆಜ್ಜೆಯನ್ನುಇಡಬೇಕಾಗಿದೆ.