ಸೇವೆಯ ಮೂಲಕ ಶಿಕ್ಷಣವೇ ಸಾರ್ಥಕ ಜೀವನಕ್ಕೆ ದಾರಿ- ಗುರುಕುಲಶ್ರೀಗಳು

ಸೇವೆಯ ಮೂಲಕ ಶಿಕ್ಷಣವೇ ಸಾರ್ಥಕ ಜೀವನಕ್ಕೆ ದಾರಿ- ಗುರುಕುಲಶ್ರೀಗಳು

ತಿಪಟೂರಿನಲ್ಲಿ NSS ಶಿಬಿರ ಉದ್ಘಾಟನೆ.

ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು ವತಿಯಿಂದ ರಾಷ್ಟಿçÃಯ ಸೇವಾ ಯೋಜನೆ ಶಿಬಿರದ ದಿವ್ಯಸಾನಿಧ್ಯ ಮತ್ತು ಉದ್ಘಾಟನೆ ಮಾಡಿ ಮಾತನಾಡಿದ ಅವರು ಸೇವೆಯ ಮೂಲಕ ಶಿಕ್ಷಣ, ಶಿಕ್ಷಣದಿಂದ ಸೇವೆ ಮಾಡುವುದರಿಂದ ಲೋಕಕಲ್ಯಾಣ ಸಾಧ್ಯವಾಗುತ್ತದೆ. ರಾಷ್ಟಿçÃಯ ಸೇವಾ ಯೋಜನೆಯ ಜವಾಬ್ದಾರಿಯುತ ವ್ಯಕ್ತಿಯನ್ನು ರೂಪಿಸುತ್ತದೆ. ಜಾತಿ, ಮತ, ಜನಾಂಗ, ಧರ್ಮಗಳ ಬೇಧ-ಭಾವವಿಲ್ಲದೆ ಬೆಳೆಯಲು ಈ ಯೋಜನೆಯು ಸಹಕಾರಿಯಾದುದು. ಶ್ರದ್ಧೆ, ಏಕಾಗ್ರತೆ, ಪ್ರಾಮಾಣಿಕತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದರಿಂದ ಮಹತ್ತರವಾದ ಸಾಧನೆಯನ್ನು ಮಾಡಬಹುದಾಗಿದೆ. ಇದರ ಜೊತೆಗೆ ನಮ್ಮ ದೇಶದ ಸಂವಿಧಾನದ ಆಶಯದಂತೆ ಎಲ್ಲರೂ ಗೌರವಾನ್ವಿತವಾಗಿ ಬದುಕು ರಾಷ್ಟçಸೇವೆಗೆ ಕೈಜೋಡಿಸಿ ಎಂದು ಕರೆ ನೀಡಿದರು.

ಶಿಬಿರದ ಸಂಚಾಲಕರಾದ ಮೋಹನ ಕುಮಾರ ಎಚ್.ಆರ್ ಮಾತನಾಡಿ ರಾಷ್ಟಿçÃಯ ಸೇವಾ ಯೋಜನೆಯು ಗಾಂಧೀಜಿಯವರ ಕನಸಿನ ಕೂಸಾಗಿದೆ. ಸೇವೆಯ ಮೂಲಕ ಅರಿವು ಮೂಡಿಸುವುದು ಮುಖ್ಯ ಉದ್ದೇಶವಾಗಿದೆ.  ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಾಸಗೊಂಡು ಸಮಾಜ ಸೇವೆಯ ಪ್ರಜ್ಞೆಯನ್ನು ಬೆಳೆಸುತ್ತದೆ. ಶಿಬಿರಾರ್ಥಿಗಳು ಹೊಸ ಪರಿಸರಕ್ಕೆ ತಮ್ಮನ್ನು ಒಗ್ಗಿಸಿಕೊಂಡರೆ ಅಲ್ಲಿನ ಸಮಸ್ಯೆಗಳು ಅರಿವಾಗುತ್ತದೆ. ಇದರಿಂದ ಗ್ರಾಮೀಣ ಭಾರತದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ಥಿತಿಗಳನ್ನು ಅರಿವಂತೆ ಮಾಡುವಲ್ಲಿ ಶೀಬಿರವು ಸಹಕಾರಿಯಾಗಿದೆ ಎಂದರು.

ವಿಶೇಷ ಆಹ್ವಾನಿತರಾದ ಬಿಲ್ಲೇಮನೆ ಚಂದ್ರಶೇಖರ್ ಮಾತನಾಡಿ ವಿದ್ಯಾರ್ಥಿಗಳು ರಾಷ್ಟಿçÃಯ ಸೇವಾ ಯೋಜನೆಯು ಶಿಬಿರದಿಂದ ಉತ್ತಮವಾಗಿ ಬದುಕುವ ಮಾರ್ಗವನ್ನು ಕಲಿಯಬೇಕು. ತಮ್ಮ ಪೋಷಕರಿಗೆ ಹೆಚ್ಚಿನ ಗೌರವ ತರುವ ಕಾರ್ಯವನ್ನು ಮಾಡಿದರೆ ಸಾರ್ಥಕವಾಗುತ್ತದೆ ಎಂದರು.

ಹಿAಡಿಸ್ಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ದೇವರಾಜು ಮಾತನಾಡಿ ರಾಷ್ಟಿçÃಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಗುರು ಹಿರಿಯರನ್ನು ಗೌರವಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಯಾವ ಉದ್ಯೋಗ ಸಿಗದಿದ್ದರೂ ನಿರಾಶರಾಗದಿರಿ, ಹೈನುಗಾರಿಕೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಬದುಕನ್ನು ಕಟ್ಟಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಶಿಕುಮಾರ್ ಹೆಚ್.ಸಿ ಮಾತನಾಡಿ ವಿದ್ಯಾರ್ಥಿಗಳು ಶಿಬಿರದಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಶ್ರಮದಾನ ಮುಂತಾದ ಅನೇಕ ರೀತಿಯ ಕೌಶಲ್ಯಗಳನ್ನು ಕಲಿತುಕೊಂಡು ಬದುಕನ್ನು ರೂಪಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ರಾಷ್ಟಿçÃಯ ಸೇವಾ ಯೋಜನೆಯ ಅಧಿಕಾರಿಗಳಾದ ಸ್ಮಿತಾ ಹೆಚ್.ಎಸ್, ಭಾರತಿ ವೈ.ಕೆ , ಡಾ. ತುಕಾರಾಮ ವಿ, ಸಹ ಶಿಬಿರಾಧಿಕಾರಿಗಳಾದ ಜಾಯಿದಾಬಿ ಖಾನಬೋಗಿ, ಡಾ. ವೆಂಕಟೇಶ್ ಎಲ್. ಎಂ, ಜ್ಯೋತಿ ಎಸ್, ವೇದಮೂರ್ತಿ ಮುಂತಾದವರು ಭಾಗವಹಿಸಿದ್ದರು. ತದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *