ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ ಏಕೈಕ ಸಿನಿಮಾ ಎಂದರೆ ಅದು ‘ಉರಿ’. ಈಗ ಅವರು ‘ಧುರಂಧರ್’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಸಿನಿಮಾ ನಿರೀಕ್ಷೆಗಳನ್ನು ಹುಟ್ಟುಹಾಕುವಲ್ಲಿ ವಿಫಲವಾಗಿದೆ. ನಾಲ್ಕು ನಿಮಿಷದ ಟ್ರೇಲರ್ ಆಸಕ್ತಿ ಹುಟ್ಟಿಸಿಲ್ಲ. ಇನ್ನು, ಸಿನಿಮಾದ ಅವಧಿ ಮೂರುವರೆ ಗಂಟೆ ಇದೆ. ಇದೆಲ್ಲಕ್ಕಿಂತ ಮುಖ್ಯವಾಗಿ ರಣವೀರ್ ಸಿಂಗ್ ಅವರೇ ಚಿತ್ರಕ್ಕೆ ಮೈನಸ್ ಪಾಯಿಂಟ್ ಆಗುತ್ತಿದ್ದಾರೆ.
ದೊಡ್ಡ ಬಜೆಟ್ ಸಿನಿಮಾ ಮಾಡಿದಾಗ ಅದಕ್ಕೆ ಪ್ರಚಾರ ತುಂಬಾನೇ ಮುಖ್ಯವಾಗುತ್ತದೆ. ಅದರಲ್ಲೂ ಸಿನಿಮಾ ಪ್ರಚಾರ ಮಾಡುವಾಗ ವೇದಿಕೆ ಮೇಲೆ ಆಡುವ ಮಾತುಗಳು ತುಂಬಾನೇ ತೂಕದ್ದಾಗಿರಬೇಕು. ಇಲ್ಲವಾದಲ್ಲಿ ಟ್ರೋಲ್ ಆಗೋದು ಪಕ್ಕಾ.ಸಿನಿಮಾಗೆ ಬ್ಯಾನ್ ಬಿಸಿ ಕೂಡ ತಟ್ಟಬಹುದು. ಈಗ ರಣವೀರ್ ಸಿಂಗ್ಗೆ ಅದೇ ಆಗಿದೆ. ಅವರು ದೈವವನ್ನು ಅನುಕರಿಸುವ ಬದಲು ಅಣುಕಿಸಿದ್ದಾರೆ. ಸಿನಿಮಾಗೆ ಇದು ಸಾಕಷ್ಟು ಹಿನ್ನಡೆ ತಂದುಕೊಡುತ್ತಿದೆ.
‘ಧುರಂಧರ್’ ತಂಡದವರು ಎಲ್ಲಿಯೂ ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿಲ್ಲ. ಇದರಿಂದ ಅಡ್ವಾನ್ಸ್ ಬುಕಿಂಗ್ ಚೇತರಿಸಿಕೊಳ್ಳುತ್ತಿಲ್ಲ. ಈ ಸಿನಿಮಾದ ಬಜೆಟ್ 300-350 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಹೀಗಾಗಿ, ಈ ಚಿತ್ರ ಲಾಭ ಕಾಣಬೇಕು ಎಂದರೆ ಮೊದಲ ದಿನ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಬೇಕಿದೆ. ಆದರೆ, ಸದ್ಯದ ಲೆಕ್ಕಾಚಾರದ ಪ್ರಕಾರ ಈ ಸಿನಿಮಾ ಮೊದಲ ದಿನ 15-20 ಕೋಟಿ ರೂಪಾಯಿ ಗಳಿಸಬಹುದು ಎನ್ನಲಾಗುತ್ತಿದೆ.
ಧುರಂಧರ್ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರುತ್ತಿದೆ. ರಣವೀರ್ ಸಿಂಗ್ ಅವರೇ ಚಿತ್ರಕ್ಕೆ ದೊಡ್ಡ ಮೈನಸ್ ಪಾಯಿಂಟ್ ಆಗುತ್ತಿದ್ದಾರೆ ಎಂದು ತಂಡಕ್ಕೆ ಅನಿಸುತ್ತಿದೆ. ರಣವೀರ್ ಸಿಂಗ್ ಅವರು ಇತ್ತೀಚೆಗೆ ಸಾಲು ಸಾಲು ಸೋಲು ಕಂಡಿದ್ದಾರೆ. ಅವರ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಸಂಜಯ್ ಲೀಲಾ ಬನ್ಸಾಲಿ ಜೊತೆ ಅವರು ದ್ವೇಷ ಕಟ್ಟಿಕೊಂಡಿದ್ದಾರೆ. ಹೀಗಾಗಿ, ಯಶಸ್ಸಿಗಾಗಿ ಮತ್ತೆ ಅವರ ಜೊತೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಅವರ ಬಳಿ ಯಾವುದೇ ಹೊಸ ಸಿನಿಮಾ ಕೂಡ ಇಲ್ಲ. ಇದರಿಂದ ರಣವೀರ್ ವೃತ್ತಿ ಬದುಕು ಸಂಕಷ್ಟದಲ್ಲಿದೆ.
For More Updates Join our WhatsApp Group :
