ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ನಾನು ಬಾಯಿ ತಪ್ಪಿನಿಂದ ಏನಾದರೂ ತಪ್ಪು ಮಾತನಾಡಿದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ ಸ್ಪಷ್ಟನೆ ನೀಡಿದರು.
ಗಾದೆ ಮತು ಹೇಳುವ ಮೂಲಕ ನನ್ನ ಬಾಯಿಂದ ಕೆಟ್ಟ ಶಬ್ದ ಬಂದಿರುವ ಬಗ್ಗೆ ಕೆಲವು ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ, ದೇವೇಗೌಡ, ಯಡಿಯೂರಪ್ಪ ಅವರು ರಾಜ್ಯದ ದೊಡ್ಡ ನಾಯಕರು ಎಂಬುದನ್ನು ಭಾವಿಸಿದ್ದೇನೆ. ಅವರ ನಗ್ಗೆ ನನಗೆ ಗೌರವ ಹಾಗೂ ಹೆಮ್ಮೆ ಇದೆ. ಆದರೆ ಮಾತನಾಡುವ ಭರದಲ್ಲಿ ತಪ್ಪು ಆಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ನಾನು ಯಾರಿಗೂ ಕೆಟ್ಟದಾಗಿ ಮಾತನಾಡಿಲ್ಲ ಎಂದು ಹೇಳಿದರು.
ಕಳೆದ ಸಲ ಕೆಲ ಮಹಿಳೆಯರಿಗೆ ಹಣ ಕೊಟ್ಟು ನಮ್ಮ ಮನೆ ಎದುರು ಪ್ರತಿಭಟನೆ ನಡೆಸಲಾಗಿತ್ತು. ಕಾಂಗ್ರೆಸ್ನ ಕೆಲ ಕಾರ್ಯಕರ್ತರು ನಮ್ಮ ಮನೆ ಎದುರು ಪೊಲೀಸರನ್ನು ಬಳಸಿಕೊಂಡು ಧರಣಿ ನಡೆಸಿದ್ದರು. ನಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡ, ಗುಂಡಾಗಿರಿ, ದಬ್ಬಾಳಿಕೆ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಇದೆ ಎಂದು ಪೊಲೀಸರನ್ನು ಬಳಸಿಕೊಂಡು ನಮ್ಮ ಮನೆ ಕಡೆ ದಂಗೆ ಮಾಡುತ್ತಿದ್ದಾರೆ. ಒಬ್ಬ ಮಾಜಿ ಜನಪ್ರತಿನಿಧಿ ಮನೆ ಎದುರು ಹೀಗೆ ದಬ್ಬಾಳಿಕೆ ನಡೆಸಿದರೆ ಜನರು ಸುರಕ್ಷಿತವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಾನು ಕೆಟ್ಟದ್ದಾಗಿ ಮಾತನಾಡಿದ್ದರೆ ಪೊಲೀಸರಿದ್ದಾರೆ, ಕೋರ್ಟ್ ಇದೆ. ನನ್ನ ಮನೆ ಎದುರು ಯಾರೂ ದಂಗೆ ಮಾಡಬಾರದು ಎಂದು ಪೊಲೀಸರಿಗೆ ಮನವಿ ಮಾಡಿದ್ದೇನೆ. ನಮ್ಮ ಮನೆ ಎದುರು ಗಲಾಟೆ ಮಾಡಿದರೆ ಪಕ್ಕದ ಮನೆಯವರಿಗೂ ತೊಂದರೆ ಆಗುತ್ತದೆ. ಆದರ ಮೇಲೆ ಆಗುವ ಕೆಟ್ಟ ಪರಿಣಾಮದ ಬಗ್ಗೆ ಯಾರೂ ಉತ್ತರಿಸುತ್ತಾರೆ. ಸರ್ಕಾರ ಆಗಲಿ ಅಥವಾ ಪೊಲೀಸರು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಹೇಳಿದರು.
‘ಮುಡಾ ಹಗರಣದಲ್ಲಿ ಮಗನ ನೀ ಶೆಗಣಿ ತಿಂದಿ ವಾಂತಿ ಮಾಡು’ಎಂದು ಸಂಜಯ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು.