ಶಾಂಘೈ ವಿದ್ಯಾರ್ಥಿಯ ಐಷಾರಾಮಿ ಆಗಮನ ವೈರಲ್
ಶಾಂಘೈ: ವಿಶ್ವವಿದ್ಯಾಲಯಕ್ಕೆ ಬೈಕ್ ಅಥವಾ ಕಾರಿನಲ್ಲಿ ವಿದ್ಯಾರ್ಥಿಗಳು ಬರುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ ಸುಮಾರು 27 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರಿನಲ್ಲಿ ವಿದ್ಯಾರ್ಥಿಯೊಬ್ಬ ಕ್ಯಾಂಪಸ್ಗೆ ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಚೀನಾದ ಶಾಂಘೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ವಿಶ್ವದ ಅತ್ಯಂತ ದುಬಾರಿ ಮತ್ತು ಸೀಮಿತ ಆವೃತ್ತಿಯ ಕಾರುಗಳಲ್ಲಿ ಒಂದಾದ Aston Martin Valkyrie ಚಾಲನೆ ಮಾಡಿ ಕಾಲೇಜಿಗೆ ಬಂದಿದ್ದಾನೆ ಎನ್ನಲಾಗಿದೆ. ಸದ್ಯ, ಆತ ದುಬಾರಿ ಕಾರಿನಲ್ಲಿ ಬಂದ ವಿಡಿಯೋ ‘ಎಕ್ಸ್’ನಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಈ ಕಾರಿನ ಅಂದಾಜು ಮೌಲ್ಯ ಸುಮಾರು 3 ಮಿಲಿಯನ್ ಅಮೆರಿಕನ್ ಡಾಲರ್ ಎನ್ನಲಾಗಿದ್ದು, ಭಾರತೀಯ ಮೌಲ್ಯದಲ್ಲಿ ಅಂದಾಜು 27 ಕೋಟಿ ರೂ. ಆಗಿದೆ.
ಪಾರ್ಕಿಂಗ್ ಸ್ಥಳದಲ್ಲಿ ಹೊಳೆಯುವ ಐಷಾರಾಮಿ ಕಾರು ನಿಲ್ಲಿಸಿರುವುದು ಎಕ್ಸ್ ವಿಡಿಯೋದಲ್ಲಿ ಕಾಣುತ್ತದೆ. ಕಾರನ್ನು ನೋಡಲು ವಿದ್ಯಾರ್ಥಿಗಳ ಗುಂಪು ಕೂಡಿಕೊಂಡಿದ್ದು, ಕೆಲವರು ಫೋಟೋ ಮತ್ತು ವಿಡಿಯೋ ತೆಗೆಯುವುದರಲ್ಲಿ ಮುಳುಗಿದ್ದಾರೆ. ಬಳಿಕ ಯುವಕನೊಬ್ಬ ಬಂದು ಕಾರಿನ ಬಾಗಿಲು ತೆರೆಯುವ ಮೂಲಕ ಆರಾಮವಾಗಿ ಒಳಗೆ ಕುಳಿತುಕೊಳ್ಳುವುದು ವಿಡಿಯೋದಲ್ಲಿದೆ.
Aston Martin Valkyrie ಫಾರ್ಮುಲಾ-1 ತಂತ್ರಜ್ಞಾನದಿಂದ ಪ್ರೇರಿತವಾಗಿ ವಿನ್ಯಾಸಗೊಳಿಸಲಾದ ಅತ್ಯುನ್ನತ ಕಾರ್ಯಕ್ಷಮತೆಯ ಹೈಪರ್ ಕಾರ್ ಆಗಿದೆ. ಇಂತಹ ಅಪರೂಪದ ಕಾರನ್ನು ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ನೋಡುವುದು ಅಸಾಮಾನ್ಯ ಎನ್ನಲಾಗುತ್ತಿದೆ.
ಶಾಂಘೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಸುಮಾರು 3 ಮಿಲಿಯನ್ ಡಾಲರ್ ಮೌಲ್ಯದ ಕಾರಿನಲ್ಲಿ ಕ್ಯಾಂಪಸ್ನಿಂದ ಹೊರಡುತ್ತಿರುವುದು ಕಂಡುಬಂದಿದೆ ಎಂದು ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಒಟ್ಟಿನಲ್ಲಿ, ವಿದ್ಯಾರ್ಥಿಯೊಬ್ಬನ ಐಷಾರಾಮಿ ಜೀವನಶೈಲಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿಡಿಯೋ ವ್ಯಾಪಕವಾಗಿ ಶೇರ್ ಆಗುತ್ತಿದೆ.
For More Updates Join our WhatsApp Group :




