ಬಹುಬಲಿ ಖ್ಯಾತಿಯ ಕಟ್ಟಪ್ಪ ಎಲ್ಲರಿಗೂ ಪರಿಚಯವಿದ್ದಾರೆ, ಆದರೆ ನಿಮಗೆ ಕಟ್ಟಪ್ಪನ ಪುತ್ರಿಯ ಪರಿಚಯವಿದಿಯ?

ಬಹುಬಲಿ ಖ್ಯಾತಿಯ ಕಟ್ಟಪ್ಪ ಎಲ್ಲರಿಗೂ ಪರಿಚಯವಿದ್ದಾರೆ, ಆದರೆ ನಿಮಗೆ ಕಟ್ಟಪ್ಪನ ಪುತ್ರಿಯ ಪರಿಚಯವಿದಿಯ?

ಕಟ್ಟಪ್ಪ ಅಂದ್ರೆ ನಟ ಸತ್ಯರಾಜ ಅವರ ಪುತ್ರಿಯ ಹೆಸರು ದಿವ್ಯಾ ಸತ್ಯರಾಜ್. ಇವರೇನು ನಟಿಯಲ್ಲ ಆದರೂ ಸೆಲೆಬ್ರಿಟಿ. ಬಾಹುಬಲಿ ಸಿನಿಮಾದ ಕಟ್ಟಪ್ಪ ಮಾತ್ರ ಮರೆಯುವುದುಂಟೆ. ಆ ಪಾತ್ರವನ್ನು ನಿರ್ವಹಿಸಿದ್ದು ದಕ್ಷಿಣ ಭಾರತದ ಜನಪ್ರಿಯ ನಟ ಸತ್ಯರಾಜ್. ಇವರ ಪುತ್ರ ಸಿಬಿ ಸಹ ನಟರೇ ಆದರೆ ಪುತ್ರಿ ನಟಿಯಲ್ಲ, ಆದರೂ ಸೆಲೆಬ್ರಿಟಿ. ಯಾವ ಕ್ಷೆತ್ರದಲ್ಲಿ ಇವರು ಪ್ರಸಿದ್ಧರು ಅನ್ನೊದನ್ನ ತಿಳಿಯೋಣ ಬನ್ನಿ.

ಕಟ್ಟಪ್ಪ ಸತ್ಯರಾಜ್ ಪುತ್ರಿಯ ಹೆಸರು ದಿವ್ಯಾ ಸತ್ಯರಾಜ್. ಈಕೆ ನ್ಯೂಟ್ರಿಷನಿಸ್ಟ್ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳ, ಮಹಿಳೆಯರ ಅಪೌಷ್ಠಕತೆ ವಿರುದ್ಧ ದಿವ್ಯಾ ಸತ್ಯಾರಾಜ್ ಹೋರಾಡುತ್ತಿದ್ದಾರೆ. ಇಲ್ಲಿಯವರೆಗೆ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುತ್ತಿರುವ ಇಸ್ಕಾನ್ನ ಅಕ್ಷಯ ಪಾತ್ರೆ ಕಾರ್ಯಕ್ರಮದ ರಾಯಭಾರಿ ದಿವ್ಯಾ ಸತ್ಯರಾಜ್. ಇನ್ನು ಇವರು 2022 ರಲ್ಲಿ ‘ಮಹಿಳಾಮಿ ಇಯಕ್ಕಂ’ ಹೆಸರಿನ ಚಳುವಳಿ ಆರಂಭಿಸಿದ್ದರು. ಇದಕ್ಕೆ ಸಾಕಷ್ಟು ಬೆಂಬಲದ ಜೊತೆಗೆ ವಿರೋಧವೂ ವ್ಯಕ್ತವಾಗಿತ್ತು. ಇಷ್ಟೆ ಅಲ್ಲದೆ, ಇವರಿಗೆ ರಾಜಕಾರಣಿ ಆಗುವ ಆಸೆಯಿದ್ದು, ಆದಷ್ಟು ಬೇಗ ರಜಕೀಯದಲ್ಲಿ ತೊಡಗಿಕೊಳ್ಳುವುದಾಗಿ ದಿವ್ಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *